Sharonina Roja Bro. Naveen Joseph

ಕಿಸ್ತನಲ್ಲಿ ಪ್ರಿಯರೆ,

ಅಪ್ರೊ.ಕೃ : 16:25 ರಲ್ಲಿ ಮಧ್ಯರಾತ್ರಿಯಲ್ಲಿ ಪೌಲನೂ ಸೀಲನ ಪ್ರಾರ್ಥನೆ ಮಾಡುವ ವ ರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು ; ಸೆರೆಯಲ್ಲಿದ್ದವರು ಲಕ್ವಿಟ್ಟು ಕೇಳುತ್ತಿದ್ದರು . ಅಕಸ್ಮಾತ್ತಾಗಿ ಮಹಾ ಭೂಕಂಪವುಂಟಾಯಿತು ; ಸೆರೆಮನೆಯ ಅಸ್ತಿವಾರಗಳು ಕದಲದವು . ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು ಎಲ್ಲರ ಬೇಡಿಗಳು ಕಳಚಿಬಿದ್ದವು .

ದೇವರ ಸಂದೇಶವನ್ನು ಕೊಡುವ ವ್ಯಕ್ತಿ ಜನರನ್ನು ದೇವರ ಬಳಿಗೆ ಕರೆದುಕೊಂಡು ಹೋಗುತ್ತಾನೆ , ಆದರೆ ಆರಾಧನೆ ಮಾಡುವ ವ್ಯಕ್ತಿ ದೇವರನ್ನೆ ಜನರ ಬಳಿಗೆ ಕರೆದುಕೊಂಡು ಬರುತ್ತಾನೆ . ಪೌಲ ಮತ್ತು ಸೀಲ ಇಬ್ಬರು ಪ್ರಾರ್ಥಿಸಿ ಸ್ತುತಿಪದಗಳನ್ನು ಹಾಡುವಾಗ ಅಲ್ಲಿ ಅಕಸ್ಮಾತ್ತಾಗಿ ಮಹಾ ಭೂಕಂಪವಾಯಿತು .

ಅಂದರೆ ಅಲ್ಲಿ ದೇವರು ಇಳಿದು ಬಂದರು ಎಂದು ಅರ್ಥ . ಹೌದು ನಾವು ಆರಾಧನೆ ಮಾಡುವ ಎಲ್ಲಾ ಸ್ಥಳಗಳಲ್ಲಿ ನಮ್ಮ ಕರ್ತನು ಇಳಿದು ಬರುವ ದೇವರಾಗಿದ್ದಾನೆ . ಆದುದರಿಂದ ನಾವು ನಂಬಿಕೆಯಿಂದ ದೇವರಿಗೆ ಆರಾಧನೆ ಮಾಡೋಣ . ಆತನು ನಮ್ಮ ಸ್ತುತಿ ಆರಾಧನೆಯಲ್ಲಿ ಆನಂದ ಪಡುವ ದೇವರಾಗಿದ್ದಾನೆ . ದೇವರು ನಿಮ್ಮನ್ನು ಆಶೀರ್ವದಿಸಲಿ . ಆಮೇನ್