ADHYATMA CHINTANA

ಆಧ್ಯಾತ್ಮ ಚಿಂತನ ಯೂಟ್ಯೂಬ್ ಚಾನಲ್‌ಗೆ ನಿಮಗೆ ಹಾರ್ದಿಕ ಸ್ವಾಗತ! ಈ ಚಾನಲ್ ಶ್ರೀಮದಾಚಾರ್ಯರು ಬೋಧಿಸಿದ ದ್ವೈತ ತತ್ತ್ವದ ಆಧ್ಯಾತ್ಮಿಕ ಸಾರವನ್ನು ಹಂಚಿಕೊಳ್ಳುವ ಹಾಗೂ ವೇದಾಂತದ ಆಳವಾದ ಅರ್ಥವನ್ನು ಅನ್ವೇಷಿಸುವ ಒಂದು ವೇದಿಕೆ. ಶ್ರೀಮದಾನಂದತೀರ್ಥರು ಎಂದೇ ಪ್ರಸಿದ್ಧರಾದ ಶ್ರೀಮಧ್ವಾಚಾರ್ಯರು ಜಗತ್ತಿಗೆ ನೀಡಿದ ತತ್ತ್ವಬೋಧನೆಯನ್ನು ಸುಲಭವಾಗಿ ಅರ್ಥೈಸಲು, ಅನುಸರಿಸಲು ಹಾಗೂ ನಮ್ಮ ದೈನಂದಿನ ಬದುಕಿನಲ್ಲಿ ಅದನ್ನು ಅಳವಡಿಸಿಕೊಳ್ಳಲು ಈ ಚಾನಲ್ ಸಹಾಯ ಮಾಡುತ್ತದೆ.

ನಾವು ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ, ಶ್ರೀಮದ್ಭಾಗವತ ಮತ್ತು ಶ್ರೀಮನ್ಮಧ್ವಾಚಾರ್ಯರ ಗ್ರಂಥಗಳ ಸಂದೇಶವನ್ನು ಪರಿಚಯಿಸಿ, ಅವುಗಳ ಆಧ್ಯಾತ್ಮಿಕ ಹಾಗೂ ತತ್ತ್ವಶಾಸ್ತ್ರದ ಮಹತ್ವವನ್ನು ಹಾಗು ವಿಷ್ಣು ಸರ್ವೋತ್ತಮತ್ವ, ಭಕ್ತಿಯ ಪ್ರಾಮುಖ್ಯತೆ, ಹಾಗೂ ದ್ವೈತ ಸಿದ್ಧಾಂತವನ್ನು ಸರಳ ಮತ್ತು ಸ್ಪಷ್ಟ ರೀತಿಯಲ್ಲಿ ವಿವರಿಸಲು ಪ್ರಯತ್ನಿಸುತ್ತೇವೆ.

ಶ್ರೀ ಮಧ್ವಾಚಾರ್ಯರ ತತ್ತ್ವಚಿಂತನೆಗಳ ಆಳವನ್ನು ಸ್ಪರ್ಶಿಸಲು, ಆಧ್ಯಾತ್ಮಿಕ ಜೀವನವನ್ನು ಇನ್ನಷ್ಟು ಉದಾತ್ತಗೊಳಿಸಲು, ಈ ಪಯಣದಲ್ಲಿ ನಮ್ಮೊಂದಿಗೆ ಬನ್ನಿ. ನಿಮ್ಮ ಆಧ್ಯಾತ್ಮಜ್ಞಾನವನ್ನು ಬೆಳಸಿಕೊಳ್ಳಲು ಮತ್ತು ಪರಮಾತ್ಮನ ಅನುಗ್ರಹವನ್ನು ಪಡೆಯಲು, ಆಧ್ಯಾತ್ಮ ಚಿಂತನ ನಿಮ್ಮ ಹಾದಿಯಲ್ಲಿ ಬೆಳಕಾಗಲಿ.

ನಮ್ಮ ಜೊತೆ ಸೇರಿ, ಚಂದಾದಾರರಾಗಿ, ದ್ವೈತ ತತ್ತ್ವವನ್ನು ಪರಿಪೂರ್ಣವಾಗಿ ಅರಿತುಕೊಳ್ಳಲು ಪ್ರಯತ್ನಿಸೋಣ!

-ವಾದಿರಾಜ್ ಏರಿ