ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

ಕನ್ನಡದಲ್ಲಿ ಭಾವಗೀತೆಯ ಲೋಕ ದೊಡ್ಡದು. ಅನೇಕ ಕಲಾವಿದರು ಈ ಹಾಡುಗಳನ್ನು ರಾಗಸಂಯೋಜಿಸಿ, ಹಾಡಿ ಕನ್ನಡಿಗರ ಮನೆಮನೆಗೆ ತಲುಪಿಸಿದ್ದಾರೆ. ಹಾಡದೆ ಉಳಿದವೂ ಸಾಕಷ್ಟಿವೆ. ಆದರೆ, ಭಾವಗೀತೆಗಳನ್ನು ಹಾಡುವವರೂ ಬೇಕು, ಕೇಳುವವರೂ ಬೇಕು. ಹಾಡಿದ್ದನ್ನೂ ಹಾಡಬೇಕು, ಹಾಡದ್ದನ್ನೂ ಕೂಡ. ಕೇಳಿದ್ದನ್ನೂ ಕೇಳಬೇಕು, ಕೇಳದ್ದನ್ನೂ ಕೂಡ.

ಈ ದಿಕ್ಕಿನಲ್ಲಿ ಇದೊಂದು ಹೊಸ ಪ್ರಯತ್ನ. ಇಲ್ಲಿರುವ ಪ್ರತಿಯೊಂದು ಹಾಡಿಗೂ ಹೊಸದಾಗಿ ರಾಗಸಂಯೋಜಿಸಿದ್ದೇನೆ. ಈ ಎಲ್ಲ ಹಾಡುಗಳು, ಕನ್ನಡದ ದೊಡ್ಡ ಕವಿಗಳ ಕವನಗಳು. ಕೆಲವನ್ನು ಹಿಂದೆ ಯಾರೂ ಹಾಡಿದಂತಿಲ್ಲ (ನನ್ನ ತಿಳಿವು ತಪ್ಪಾಗಿದ್ದಲ್ಲಿ ಕೇಳುಗರು ದಯವಿಟ್ಟು ತಿಳಿಸಿ). ಆದರೆ ಓದಿದಾಗ ಹಾಡಬೇಕು ಅನ್ನಿಸಿತು. ಇನ್ನು ಕೆಲವು ಈಗಾಗಲೇ ಪ್ರಸಿದ್ಧವಾಗಿವೆ. ಆದರೆ ಈ ಭಾವಗೀತೆಗಳು ಒಂದು ಧಾಟಿಗೆ, ರಾಗಕ್ಕೆ ಸೆರೆಸಿಕ್ಕುವವಲ್ಲ. ಬೇರೊಂದು ರೀತಿ ಹಾಡಿದರೆ, ಕವನದ ಬೇರೆ ಆಯಾಮಗಳು ಕೇಳುಗರಿಗೆ ಹೊಳೆಯಬಹುದು ಅನ್ನಿಸಿತು.

ಸದ್ಯಕ್ಕೆ ಕೆಲವು ಹಾಡುಗಳು ಪ್ರಸ್ತುತವಿವೆ. ದಯವಿಟ್ಟು ಕೇಳಿ, ಅನಿಸಿಕೆಗಳನ್ನು ಹಂಚಿಕೊಳ್ಳಿ. ಇಷ್ಟವಾದರೆ 👍, ಎಲ್ಲರಿಗೂ ಕೇಳಿಸಿ.

ಇನ್ನೂ ಹಲವು ಕವನಗಳು ರಾಗಸಂಯೋಜಿತವಾಗಿವೆ. ಬರುವ ದಿನಗಳಲ್ಲಿ, ಅವನ್ನು ಒಂದೆರಡು ವಾರಕ್ಕೊಂದರಂತೆ ಇಲ್ಲಿ ಪ್ರಕಾಶಿಸುವ ಯೋಜನೆಯಿದೆ. ಅವುಗಳಿಗಾಗಿ Subscribe 🔔 ಮಾಡಿ.

ಧನ್ಯವಾದಗಳು🙏
ಅಂಶುಮಾನ್ ಕೆ ಆರ್