SANGAATI

ಎಲ್ಲರಿಗೂ ನಮಸ್ಕಾರ🙏
ನಿಮ್ಮೆಲ್ಲರಿಗೂ ನಮ್ಮ 'ಸಂಗಾತಿ' ಯೂಟ್ಯೂಬ್ ಚಾನೆಲ್ ಗೆ ಹೃತ್ಪೂರ್ವಕ ಸ್ವಾಗತ. ಇದು ಒಬ್ಬ ಅಪ್ಪಟ ಕನ್ನಡತಿಯ, ಕನ್ನಡಿಗರಿಗಾಗಿಯೇ ಇರುವ ಹೆಮ್ಮೆಯ ಚಾನೆಲ್.
ನಾನು ಸಂಧ್ಯಾ ಭಾರದ್ವಾಜ್.
ಸಣ್ಣ ಕಥೆಗಳು ಹಾಗೂ ಕವನಗಳನ್ನು ಬರೆಯುವ ಹವ್ಯಾಸವಿರುವ ನಾನು ನನ್ನ pen name 'ಸುಸಂತಿ' ಎಂದು ಇರಿಸಿಕೊಂಡು, ಜನರಿಗೂ ಹಾಗೇ ಹೆಚ್ಚು ಪರಿಚಯವಾದೆ. ಹಾಗಾಗಿ ಸಂಗಾತಿಯಲ್ಲೂ ಸುಸಂತಿಯೆಂದೇ ನನ್ನನ್ನು ಗುರುತಿಸಿಕೊಂಡಿದ್ದೇನೆ😊

ನಮ್ಮ ಸಂಗಾತಿ ಚಾನೆಲ್ ನ ವೈಶಿಷ್ಟ್ಯತೆ ಏನೆಂದರೆ, ನಿಮಗೆ ಬೇಕಾದ ಎಲ್ಲವೂ ಇಲ್ಲಿ ಸಿಗುತ್ತದೆ. ನನ್ನ ಪ್ರಕಾರ, ನಮ್ಮ 'ಒಂದು ದಿನ' ಎಂದರೆ, ಅಲ್ಲಿ ಹಲವಾರು ಅಗತ್ಯತೆಗಳಿರುತ್ತದೆ. ಅದು ಅಡುಗೆ, ಸ್ವಚ್ಛತೆ, ಆರೋಗ್ಯ, ಮನೆಮದ್ದು, ಪೂಜೆ-ಪುನಸ್ಕಾರ, ಆಚಾರ-ವಿಚಾರ, ವ್ಯಕ್ತಿತ್ವ ವಿಕಸನ... ಹೀಗೆ ಏನೇ ಆಗಿರಬಹುದು. ಹೀಗೆ ಎಲ್ಲಾ ಅಗತ್ಯಗಳನ್ನೂ ಅರಿತು, ಅದರ ಬಗ್ಗೆ ನನಗೆ ತಿಳಿದ ವಿಚಾರಗಳನ್ನು ನಿಮಗೆ ತಲುಪಿಸುವ ಒಂದು ಪುಟ್ಟ ಪ್ರಯತ್ನ. ಇನ್ನೂ ಹಲವಾರು ವಿಷಯಗಳನ್ನು ಸೇರ್ಪಡೆ ಮಾಡುವ ಯೋಜನೆ, ಯೋಚನೆಯೂ ಇದೆ😃
ಇದಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. ನಿಮ್ಮ ಒಂದು Like, Subscription ನನಗೆ ಹೆಚ್ಚಿನ ಸ್ಫೂರ್ತಿ ಕೊಡುತ್ತದೆ.
ಹಾಗಾಗಿ ನಮ್ಮ ಜೊತೆ ಕೈಜೋಡಿಸಿ. ಇಬ್ಬರೂ ಒಟ್ಟಿಗೆ ಬೆಳೆಯೋಣ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಒಟ್ಟಿಗೆ ಕಲಿಯೋಣ.
Please Like, Share and Subscribe🙏