Vishwavani Money

ಜನಪ್ರಿಯ ವಿಶ್ವವಾಣಿ ಟಿವಿಯ ಮತ್ತೊಂದು ಕೊಡುಗೆ ವಿಶ್ವವಾಣಿ ಮನಿ ಚಾನೆಲ್. ಇದು ನಿಮ್ಮ ಹಣಕಾಸಿನ ಆಪ್ತ ಸಲಹೆಗಾರನಂತೆ ಕಾರ್ಯ ನಿರ್ವಹಿಸಲಿದೆ.

ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ವೈಯಕ್ತಿಕ ಹಣಕಾಸು ಶಿಕ್ಷಣಕ್ಕೆ ಆದ್ಯತೆ ನೀಡದಿರುವುದರಿಂದ, ಹಣಕಾಸು ಸಾಕ್ಷರತೆ ಪಡೆಯಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ವಿಶ್ವವಾಣಿ ಮನಿ ಯೂಟ್ಯೂಬ್‌ ಚಾನೆಲ್‌ ವೀಕ್ಷಕರಿಗೆ ಸುಲಭ & ಸರಳ ಆಯ್ಕೆಯಾಗಿದೆ.

ವಿಶ್ವವಾಣಿ ಮನಿ ಚಾನೆಲ್‌ ವೈಯಕ್ತಿಕವಾಗಿ ನಿಮ್ಮ ಹಣಕಾಸು ಸ್ಥಿತಿಗತಿಯನ್ನು ಬಲಪಡಿಸಲು ಟಾನಿಕ್‌ನಂತೆ ಕಾರ್ಯನಿರ್ವಹಿಸಲಿದೆ. ಇಲ್ಲಿ ಸಾಂಪ್ರದಾಯಿಕ ಹೂಡಿಕೆಗಳಾದ ಅಂಚೆ ಇಲಾಖೆಯ ನಾನಾ ಸಣ್ಣ ಉಳಿತಾಯ ಯೋಜನೆಗಳಿಂದ ಆರಂಭಿಸಿ, ಮ್ಯೂಚುವಲ್‌ ಫಂಡ್‌, ಷೇರು, ಇಟಿಎಫ್‌, ಬಾಂಡ್‌, ಕ್ರಿಪ್ಟೊ ಕರೆನ್ಸಿ, ರಿಯಲ್‌ ಎಸ್ಟೇಟ್‌, ಚಿನ್ನ, ಬೆಳ್ಳಿಯಲ್ಲಿನ ಹೂಡಿಕೆ, ಈಕ್ವಿಟಿ ಹೂಡಿಕೆಯ ಜತೆಗೆ ಸ್ಟಾಕ್‌ ಟ್ರೇಡಿಂಗ್‌, ವಿದೇಶಿ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ, ವಿಮೆ, ಆರೋಗ್ಯ ವಿಮೆ, ಟರ್ಮ್‌ ಇನ್ಷೂರೆನ್ಸ್‌, ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳು, ಸಹಕಾರ ಸಂಘಗಳ ಪ್ರಯೋಜನ, ಮಾರುಕಟ್ಟೆಗಳ ಏರಿಳಿತಗಳ ಅಪಾಯ, ರಿಸ್ಕ್‌ ತೆಗೆದುಕೊಂಡು ಲಾಭ ಪಡೆಯುವ ಜಾಣ್ಮೆ, ಹೀಗೆ ಸಮಗ್ರ ಹಣಕಾಸು ಮಾರ್ಗದರ್ಶನ ನೀಡಲಿದೆ. ನಾಡಿನ ಖ್ಯಾತ ಇನ್ವೆಸ್ಟರ್ಸ್‌, ಟ್ರೇಡರ್ಸ್‌, ಹಣಕಾಸು ಸಲಹೆಗಾರರು ಈ ಚಾನೆಲ್‌ ಮೂಲಕ ಅಮೂಲ್ಯ ವಿವರಗಳನ್ನು ನೀಡಲಿದ್ದಾರೆ