Nada Premi - ನಾಡಪ್ರೇಮಿ

ನಾನು ಮೂಲತಃ ಪತ್ರಕರ್ತ. ಯೂಟ್ಯೂಬ್‌ ನನ್ನ ಹವ್ಯಾಸ. ಎಷ್ಟೋ ಸಾರಿ ಅಂದುಕೊಂಡಿದ್ದನ್ನ ಜನರಿಗೆ ಮುಟ್ಟಿಸಲಾಗಲಿಲ್ಲವಲ್ಲ ಅನ್ನೋ ನೋವು ಕಾಡಿದೆ. ಅದಕ್ಕಂತಾನೇ ಈ ಚಾನೆಲ್‌ ಪ್ರಾರಂಭ ಮಾಡಿದ್ದೇನೆ. ಇನ್ಮುಂದೆ ನನಗೆ ಏನ್‌ ಅನ್ಸುತ್ತೋ.. ನಿಮಗೆ ಏನ್‌ ಇಷ್ಟಾನೋ.. ಅಂತಹ ವಿಶೇಷ ವಿಡಿಯೋಗಳನ್ನು ಈ ಚಾನೆಲ್‌ ಮೂಲಕ ನಿಮಗೆ ತಲುಪಿಸಬೇಕೆಂದುಕೊಂಡಿದ್ದೇನೆ. ಹ್ಮಾಂ ನಾನೊಬ್ಬ ಉತ್ಕಟ ಕನ್ನಡ ಪ್ರೇಮಿ. ಸಾಹಿತ್ಯಾಸಕ್ತ. ಕನ್ನಡವೇ ನನ್ನ ಉಸಿರು. ಕನ್ನಡವೇ ನನಗೆ ಅನ್ನದ ಬಟ್ಲು. ಅದಕ್ಕಂತಾನೇ ನಾಡಪ್ರೇಮಿ ಅಂತ ಹೆಸರು ಇಟ್ಟಿದ್ದೇನೆ. ಕೊನೆಗೊಂದೇ ಮಾತು. ನನ್ನ ಎಲ್ಲಾ ವಿಡಿಯೋಗಳು ನಿಮಗೆ ಇಷ್ಟ ಆಗಲಿಕ್ಕಿಲ್ಲ. ಆಗಬೇಕೆಂದೂ ಇಲ್ಲ. ಕೈಯಲ್ಲಿರೋ ಐದೂ ಬೆರಳುಗಳು ಸಮ ಇಲ್ಲದಿರುವಾಗ.. ಸಮಾಜದಲ್ಲಿರೋ ನಮಗೂ ನಿಮಗೂ ವಿಚಾರಭೇದ ಇದ್ದೇ ಇರುತ್ತೆ. ಇಷ್ಟೆಲ್ಲಾ ಓದಿದ ಮೇಲೆ ನೀವು ನನ್ನ ಚಾನೆಲ್ಲನ್ನ ಸಬ್‌ಸ್ಕ್ರೈಬ್‌ ಮಾಡದೇ ಹಾಗೇ ಹೋಗೋದಿಲ್ಲ ಅಂದುಕೊಂಡಿದ್ದೇನೆ. ಈ ನಾಡಪ್ರೇಮಿಗೆ ನಿಮ್ಮಂತ ವಿಚಾರ ಪ್ರೇಮಿಗಳ ಬೆಂಬಲ ಸದಾ ಇದ್ದೇ ಇರುತ್ತೆ ಅಂತ ಭಾವಿಸಿದ್ದೇನೆ.

ನಮಸ್ಕಾರ.

#nadapremi #kannada #karnataka