Ningaraj Singadi

ಸ್ನೇಹಿತರೇ ಈ ಚಾನೆಲ್ಲಿನ ಉದ್ದೇಶ,
ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.

Hello Friends,
Here we are taking a step forward to reach you with different motivational videos and skits with much needed messages. We are hoping to give you that a little push to reach the goal. Our aim is to convey the positivity as well as patriotism.

( Subscribe )
Jai Hind - Jai Karnataka