Tungabhadra films



ಬಿಲ್ಲವ ಸಮಾಜದ ಮುಖಂಡ ಡಾ. ರಾಜಶೇಖರ್ ಕೋಟ್ಯಾನ್ ಕಾಂಗ್ರೆಸ್ ಗೆ ಸೇರ್ಪಡೆ

ಮಂಗಳೂರು: ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ , ಬಿಲ್ಲವ ಸಮಾಜದ ಮುಖಂಡ ಡಾ. ರಾಜಶೇಖರ್ ಕೋಟ್ಯಾನ್ , ಬಿಲ್ಲವ ಪ್ರಮುಖ ರು ಹಾಗೂ ರಾಜಶೇಖರ್ ಅವರ 600 ಮಂದಿ ಅಭಿಮಾನಿಗಳು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಪಕ್ಷದ ಧ್ವಜ ನೀಡುವ ಮೂಲಕ 
ಡಾ. ರಾಜಶೇಖರ್ ಕೋಟ್ಯಾನ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಈ ಸಂಧರ್ಭದಲ್ಲಿ ಕೆಪಿಸಿಸಿ ಮುಖಂಡ ದಿನೇಶ್ ಗುಂಡೂರಾವ್, ಸಂಸದ ಬಿ ಕೆ ಹರಿಪ್ರಸಾದ್, ಶಾಸಕ ಅಭಯಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಕಳೆದ 22 ವರ್ಷಗಳಿಂದ ಕನ್ನಡ, ತುಳು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡ ಅವರು 36 ಸಿನಿಮಾದಲ್ಲಿ ನಟಿಸಿದ್ದರು.ಅವರೇ ನಿರ್ಮಾಣ ಹಾಗೂ ನಿರ್ದೇಶಿಸಿ ನಟಿಸಿದ " ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ" ಚಿತ್ರವು ತುಳುವಿನ 50 ನೇ ಸಿನಿಮವಾಗಿ ಮೂಡಿಬಂದಿದ್ದು ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಡಾ. ರಾಜಶೇಖರ್ ಕೋಟ್ಯಾನ್ ಅವರ ಸಮಾಜ ಸೇವೆಯನ್ನು ಗುರುತಿಸಿ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ವಿದ್ಯಾಸಾಗರ್ ರಾವ್ ಅವರು ಸನ್ಮಾನಿಸಿದ್ದು, ಗ್ಲೋಬಲ್ ಅಕಾಡೆಮಿ ಆಫ್ ಫೀಸ್ ಸಂಸ್ಥೆಯಿಂದ ಸಮಾಜ ಸೇವೆಗಾಗಿ ಡಾಕ್ಟರೇಟ್ ಪದವಿ ಪಡೆದಿದ್ದರು.