SAHAKARA KALIKE

ನಮಸ್ಕಾರ ಕರುನಾಡ ಓದುಗ ದೊರೆಗಳಿಗೆ 🙏

ಈ ಮುಂಚೆ ನಾವು "ಸಹಕಾರ ಕಲಿಕೆ" ಎಂಬ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ಗಳಲ್ಲಿ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ವಿಷಯಗಳನ್ನು ಹಾಗೂ ನೋಟ್ಸ್ ಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ವಾಟ್ಸಪ್ ಮತ್ತು ಟೆಲಿಗ್ರಾಂಗಳಲ್ಲಿ ಮಾಹಿತಿಯನ್ನು ಮುಖಾಮುಖಿ ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಅವುಗಳು ಅಷ್ಟು ಪರಿಣಾಮಕಾರಿ ಸಂವಹನವೂ ಆಗಿರಲಿಲ್ಲ...! ಕಾರಣ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಸಹಕಾರದ ಆಶಾಭಾವದೊಂದಿಗೆ ನಾವಿಂದು "ಸಹಕಾರ ಕಲಿಕೆ" ಎಂಬ ಹೆಸರಿನ *ಯುಟ್ಯೂಬ್ ಚಾನೆಲ್* ವೊಂದನ್ನು ತೆರೆದಿದ್ದೇವೆ.
ಈ ಕಲಿಕಾ ತಾಣದಲ್ಲಿ ನಾವು ಕರ್ನಾಟಕದ ಎಲ್ಲಾ *ಸ್ಪರ್ಧಾತ್ಮಕ ಪರೀಕ್ಷೆಗಳನ್ನು* ಅನುಕೂಲಿಸುವ ವಿಡಿಯೋ ಪಾಠಗಳನ್ನು ಹಂಚಿಕೊಳ್ಳಲಿದ್ದೇವೆ. ಹಾಗೂ ಈಗಾಗಲೇ ಹಲವು ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡ ನುರಿತ ಸಂಪನ್ಮೂಲ ವ್ಯಕ್ತಿಗಳ ಓದಿನ ಅನುಭವಗಳು ಮತ್ತು ಅವರ ಸಾಧನೆ ಗುಟ್ಟನ್ನು ನಿಮ್ಮ ಮುಂದೆ ಅನಾವರಣ ಗೊಳಿಸಲಿದ್ದಾರೆ. ಹಾಗಾಗಿ ನೀವು ಇಂದೇ ನಮ್ಮ ಸಹಕಾರ ಕಲಿಕೆ ಚಾನೆಲ್ ಅನ್ನು SUBSCRIBE ಮಾಡಿಕೊಳ್ಳಿ.
"ಒಂದು ವೀಡಿಯೊ ನಿಮ್ಮ ಬದುಕನ್ನು ಬದಲಾಯಿಸಬಹುದು".

ನಿಮ್ಮ ಪ್ರೋತ್ಸಾಹ, ಸಹಕಾರ ಯಾವತ್ತೂ ಆಶಿಸುತ್ತೇವೆ..🙏

ಇಂತಿ.....
ಸಹಕಾರ ಕಲಿಕೆ ಟೀಮ್