Veena Nagaraja Bengaluru

"ವೀಣಾ ನಾಗರಾಜ ಬೆಂಗಳೂರು", ಈ ಚಾನೆಲ್ ಶ್ರೀಮತಿ ವೀಣಾ ನಾಗರಾಜರವರ ಸ್ವರಚಿತ ಕೃತಿಗಳಷ್ಟೇ ಅಲ್ಲದೆ, ಲಲಿತಾ ಸಹಸ್ರನಾಮ ಸ್ತೋತ್ರ ಪಠಣ ಮತ್ತು ಹೃನ್-ಮನಗಳನ್ನು ಮುಟ್ಟುವ ಮಾತುಗಳ ಲಘು ಸಂಚಿಕೆಗಳೊಂದಿಗೆ ಕೂಡಿರುವುದಾಗಿದೆ.

ಶ್ರೀ ಮಾತೆ ಲಲಿತೆಯು ಇವರಿಗೆ ಸಾಹಿತ್ಯ, ರಾಗ ಹಾಗು ಭಾವದೊಂದಿಗೆ ಹೇಳುವ ರೀತಿ-- ಈ ಮೂರನ್ನು ಒಳಗೊಂಡಿರುವಂತೆ ೧೮೦ಕ್ಕೂ ಹೆಚ್ಚು ಕೃತಿಗಳನ್ನು ದಯಪಾಲಿಸಿದ್ದಾಳೆ.

ಲಘು ಸಂಚಿಕೆಗಳ ಮಾತುಗಳು ಮನವೊಪ್ಪಿ, ಬದುಕಿನಲ್ಲಿ ಆಳವಡಿಸಿಕೊಂಡು ಅನುಷ್ಠಾನ ಮಾಡುವಂತಹದ್ದಾಗಿವೆ.

ಇಷ್ಟಲ್ಲದೆ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಗಮಕ ವಾಚನ - ವ್ಯಾಖ್ಯಾನ, ನಮ್ಮ ತಂದೆಯವರ Documentary Film, ಲಾಸ್ಯ ಲಹರಿ ಎಂಬ ಸ್ವರಚಿತ ಕೃತಿಗಳಿಂದ ಕೂಡಿದ CD ಯನ್ನು ಪ್ರಸ್ತುತ ಪಡೆಸಿದ್ದೇವೆ. ಹಾಗೂ ನಾನು ನಡೆಸುತ್ತಿರುವ ಆಧ್ಯಾತ್ಮಿಕ ತರಗತಿಗಳ ಚಟುವಟಿಕೆಗಳ ಕೆಲವು ತುಣುಕುಗಳನ್ನು ತಾವು ವೀಕ್ಷಿಸಬಹುದು.

ನನ್ನ ಮಗಳಾದ ನಮಿತಾ ನಾಗರಾಜ ಪ್ರಸ್ತುತ ಪಡೆಸಿರುವ ಭಾರತೀಯ ಸಂಸ್ಕೃತಿಯ ಬಗ್ಗೆ ರುಚಿಕರವಾದ ವಿಷಯಗಳನ್ನು YouTube Shorts ನಲ್ಲಿ ನೀವು ನೋಡಬಹುದು.

ಶ್ರೀ ಲಲಿತೆಯ ಪ್ರೇರಣೆಯಿಂದ Youtube ಮುಖಾಂತರ ಇವುಗಳನ್ನು ಹೊರತರುತ್ತಿದ್ದೇವೆ. ಎಲ್ಲರೂ ಶ್ರವಣಿಸಿ, ಆನಂದಿಸಿ ಅವಳ ಕೃಪೆಗೆ ಪಾತ್ರರಾಗಬೇಕಾಗಿ ಕೋರುತ್ತೇವೆ.