Darshini Studio

ಆತ್ಮೀಯರೇ,
*ದರ್ಶಿನಿ ಸ್ಟುಡಿಯೋ* ಯೂಟ್ಯೂಬ್ ಚಾನಲ್ ಗೆ ಸ್ವಾಗತ.

ನಮ್ಮ ಚಾನಲ್ ನ್ನು ನೋಡಿ ಇದುವರೆಗೂ ಪ್ರೋತ್ಸಾಹಿಸುತ್ತ ಬಂದ ತಮಗೆಲ್ಲಾ ಅನಂತ ವಂದನೆಗಳು.
ತಮ್ಮೆಲ್ಲರ ಪ್ರೋತ್ಸಾಹದಿಂದ ಇನ್ನು‌ಮುಂದೆಯೂ ಕೂಡ ನಮ್ಮ ಈ ಚಾನಲ್ ನಲ್ಲಿ ಹಲವು ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶವನ್ನು ಹೊಂದಿದ್ದೇವೆ.
ಈ ಚಾನಲ್ ಮೂಲಕ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಕಲೆ ಹಾಗೂ , ಕಲಾವಿದರ ಕುರಿತು ಮತ್ತು ಎಲ್ಲ ಪ್ರಕಾರದ ಸಂಗೀತ ಹಾಗೂ ಸಂಗೀತ ಕಲಾವಿದರು ಹಾಗೂ ನೃತ್ಯ ಕಲಾವಿದರನ್ನು ಪರಿಚಯಿಸುವ ಹಾಗೂ ಸಾಧಕರನ್ನು ಸಂದರ್ಶಿಸಿ ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ನಮ್ಮ ಈ ಚಾನಲ್ ಮಾಡಲಿದೆ.
ಅಲ್ಲದೇ ಆರೋಗ್ಯಕರ ಜೀವನಕ್ಕೆ ಅವಶ್ಯಕವಾದ ಧ್ಯಾನ, ಯೋಗದ ಕುರಿತು ಆಳವಾದ ಜ್ಞಾನವನ್ನು ಹೊಂದಿದ ತಜ್ಞರ ಮೂಲಕ ಜ್ಞಾನವನ್ನು ನಮ್ಮ ಚಾನಲ್ ಮೂಲಕ ನೀಡಲಾಗುವುದು.