Mahesh Gandharva Music

🌹ಕಲೆಯೇ ಜೀವನದ ಕೈಗನ್ನಡಿ🌹
ಆತ್ಮೀಯ ವೀಕ್ಷಕ ಕಲಾ ಕುಸುಮಗಳೆ ತಮಗೆಲ್ಲಾ ನಮ್ಮ ಈ ಚಾನಲ್ ಗೆ ಆದರದ ಸ್ವಾಗತ, ನನ್ನ ಸಂಗೀತದ ಅಪ್ಲೋಡ್ ವೀಡಿಯೋಗಳು ತಮಗೆ ಅನುಕೂಲವಾಗುತ್ತದೆ ಎಂದು ಭಾವಿಸಿ ತಮಗೆ ಅರ್ಪಿಸುತ್ತಿದ್ದೇನೆ , ನಮ್ಮ ಈ ಸ್ವರ ಪ್ರಸ್ತಾರ ವೀಡಿಯೊಗಳು ಹಾಡಿನ ಮೂಲ ಭಾವಸಂಚಾರಕ್ಕೆ ಧಕ್ಕೆ ಉಂಟಾಗದಂತೆ ಮಾಡಿರುತ್ತದೆ.ಇದು ಕಲಿಕಾ ಹಂತದಲ್ಲಿನ ಹಾರ್ಮೋನಿಯಂ ಮತ್ತು ಕೀಬೋರ್ಡ್ ವಾದಕರಿಗೆ ಸಿನಿಮಾ ಹಾಡುಗಳನ್ನ ಸರಳವಾಗಿ ನುಡಿಸಲಿಕ್ಕೆ ಮನರಂಜನೆ ನಿಮಿತ್ತ ಅನುಕೂಲವಾಗಲೆಂದು ಮಾಡಿರುತ್ತದೆ, ನಾವು ಮಾಡುವ ಸ್ವರ ಪ್ರಸ್ತಾರ ವೀಡಿಯೋಗಳಲ್ಲಿ ವ್ಯತ್ಯಾಸಗಳು ಕಂಡುಬಂದರೆ ದಯವಿಟ್ಟು ಅನುಸರನೆ ಇರಲೆಂದು ವೀಕ್ಷಕ ಬಂಧುಗಳಲ್ಲಿ ಮತ್ತು ಸಂಗೀತಗಾರರಲ್ಲಿ ಕೇಳಿಕೊಳ್ಳುತ್ತೇನೆ, ಹಾಗೇ ಪೌರಾಣಿಕ ನಾಟಕಗಳ ರಂಗ ಗೀತೆಗಳನ್ನ ಪ್ರಸ್ತುತಿ ಮಾಡುತ್ತೇವೆ, ತಮ್ಮ ಅನವರತಾ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ,
" ನನ್ನವರು ನನ್ನ ಮೆಚ್ಚಿದರೇನು ಫಲ ! ನಿನ್ನ ಮೆಚ್ಚುವವರು ಎನ್ನ ಮೆಚ್ಚಬೇಕಯ್ಯಾ!!"
ಎಂಬುವ ನುಡಿ ಮಾತಿನಂತೆ ನಿಮ್ಮ ಅಖಂಡ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರಲೆಂದು ಕೋರುತ್ತಾ ನಮ್ಮ ಚಾನಲ್ ಗೆ ಇನ್ನೂ ಹೆಚ್ಚಿನ subscriber ಆಗಿ ಪ್ರೋತ್ಸಾಹ ನೀಡಿ ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ಧನ್ಯವಾಧಗಳು 🎵🙏🎵