Kumara Vyasa Mantapa, Rajajinagar

The Kumara Vyasa Bharatha Vaachana and Vyakhayaana by Shreshta Gamakis uploaded for the benefit of viewers and listeners.
ಕನ್ನಡ ಸಹೃದಯರ ಪ್ರತಿಷ್ಠಾನದ ಕುಮಾರ ವ್ಯಾಸ ಮಂಟಪದ ಉದ್ಘಾಟನೆ 23/8/2023 ಬೆಳಿಗ್ಗೆ 11 ಕ್ಕೆ ರಾಜಾಜಿನಗರ ನಾಲ್ಕನೇ ವಿಭಾಗದ ನೂತನ ಕಟ್ಟಡದಲ್ಲಿ ನೆರವೇರಿತು. ಉದ್ಘಾಟನೆಯನ್ನು ನಡೆಸಿಕೊಟ್ಟವರು ಶ್ರೀ ಸುರೇಶ್ ಕುಮಾರ್ ರವರು ಶಾಸಕರು ರಾಜಾಜಿನಗರ ವಿಧಾನ ಸಭಾ ಕ್ಷೇತ್ರ. ಈ ಸಂದರ್ಭದಲ್ಲಿ ಶ್ರಮವಹಿಸಿ ಕಟ್ಟಡದ ಕಾರ್ಯಕ್ಕೆ ಕಾಯಾ, ವಾಚಾ, ಮನಸಾ ದುಡಿದ ಉಪಾಧ್ಯಕ್ಷರಾದ ಶ್ರೀ ವೆಂಕಟೇಶನಾಯ್ಡುರವರನ್ನು ಪ್ರಶಂಸಿದರು. ಕಾರ್ಯವಹಿಸಿದ ಸಿಬ್ಬಂದಿಗಳು ಶ್ರೀ ಯಶಸ್ , ಶ್ರೀ ರಾಘವೇಂದ್ರರಾವ್, ಶ್ರೀ ರಮೇಶ್, ಶ್ರೀ ಪ್ರವೀಣ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಸಂಸ್ಥಾಪಕರಾದ ಕೀರ್ತಿಶೇಷ ಶ್ರೀ ರಾಜಾರಾಯರ ನಿಸ್ವಾರ್ಥ ಸೇವೆಯನ್ನೂ ಅವರ ಬದ್ಧತೆಯನ್ನು ಸ್ಮರಿಸಿದರು. ಶತಾವಧಾನಿ ಶ್ರೀ ಗಣೇಶ ರವರು, ಸಂಸ್ಕೃತದಲ್ಲೂ ಕುಮಾರ ವ್ಯಾಸ ರಂತಹ ಶ್ರೇಷ್ಠ ಕವಿಗಳು ಇಲ್ಲವೆಂದೂ, ಅವರ ಭಾಮಿನಿ ಷಟ್ಪದಿಯ ಕರ್ಣಾಟ ಭಾರತ ಕಥಾ ಮಂಜರಿಯ ಪದ್ಯಗಳನ್ನೇನಾದರೂ ಸಂಸ್ಕೃತದಲ್ಲಿ ಬರೆದಿದ್ದರೆ, ಮಹಾಕವಿ ಕಾಳಿದಾಸರಿಗೂ ಹೆಸರು ಮಾಡುವುದು ಸವಾಲಾಗುತ್ತಿತ್ತು ಎಂದರು. ಅಧ್ಯಕ್ಷ ನುಡಿಯಲ್ಲಿ ಕುಮಾರ ವ್ಯಾಸ ಪ್ರಶಸ್ತಿ ವಿಜೇತರಾದ ಶ್ರೀಮತಿ ಕಮಲಮ್ಮನವರು ಕುಮಾರವ್ಯಾಸ ಮಂಟಪ ನಡೆದು ಬಂದ ದಾರಿಯನ್ನು ಸವಿವರವಾಗಿ ತಿಳಿಸಿದರು.