Dasara Pada: Enu Maadidarenu Bhava Hingadu (Ranjani-Gayatri)
Автор: Kay Kay
Загружено: 2018-04-17
Просмотров: 21220
Vocal: Ranjani - Gayatri
Composer: Purandara Dasaru
Raaga: Mukhaari
Taala: Jhampe
ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ ।।ಪ।।
ಅರುಣೋದಯದಲೆದ್ದು ಅತಿಸ್ನಾನ ಮಾಡಿ
ಬೆರಳನೆಣಿಸಿದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ
ಹರಿ ನಿನ್ನ ಕರುಣಾಕಟಾಕ್ಷವಾಗದನಕ ।।೧।।
ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೆನೆಂದು ಕಾಯ ದಂಡಿದಿಸಿದೆನೊ
ರತಿಪತಿಪಿತ ನಿನ್ನ ದಯವಾಗದನಕ ।।೨।।
ಧ್ಯಾನವನು ಮಾಡಿದೆನು ಮೌನವನು ತಾಳಿದೆನು
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ ।।೩।।
Доступные форматы для скачивания:
Скачать видео mp4
-
Информация по загрузке: