#ಆವಸಿರಿಯಲಿನೀನುಎನ್ನಮರೆತೇ
Автор: Veena Krishnappa
Загружено: 2025-11-30
Просмотров: 51
#ದಾಸರಪದಗಳು #dasasahitya #music #devotionalsongs #dasarapada #bhajan ##ಆವಸಿರಿಯಲಿನೀನುಎನ್ನಮರೆತೇ #aavasiriyalininuennamarete #ಕನಕದಾಸರಜಯಂತಿ #ಆದಿಕೇಶವ #ದಾಸರಪದಗಳು #ದಾಸಸಾಹಿತ್ಯ #dasarapadagalu #dasaravideos #dasarapada #dasasahitya #kanakadasaru #kanakadasa #kanakadas #aadikeshava #devine #devotionalsongs #raresongs #easysongs #bhajane #kannadabhajane #ಕನ್ನಡಭಜನೆಗಳು #ಕನ್ನಡಸಾಹಿತ್ಯ #ಭಜನೆ #ಭಜನೆಗಳು #easybhajans
#ninda #devaranama #shriharivishnu #dashaavatara #bhajan #ekadashi #devaranamagalu
for more rare songs, devaranama, bhajans, dasarapada please do like share and Subscribe my you tube channel.
@veenakrishnappa6010
ಹಾಡು... ಆವಸಿರಿಯಲಿ ನೀನು ಎನ್ನ ಮರೆತೇ. 🙏🙏
ರಚನೆ.. ಕನಕ ದಾಸರು.
ಅಂಕಿತ.. ಆದಿಕೇಶವ.
ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ? ।।ಪ॥
ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ।।೧।।
ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ
ದೃಢವಾಗಿ ಹೇಳೆನಗೆ ದೇವಕೀಸುತನೆ ।।೨।।
ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದನೆಂಬ ಸಿರಿಯೆ
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ।।೩।।
ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೋ ನರಹರಿಯೆ ।।೪।।
ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೇ ನಿನಗಿದು ಆವಾ ನಡತೆ
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ ।।೫।।
Labels: ಆವ ಸಿರಿಯಲಿ ನೀನು ಎನ್ನ ಮರೆತೆ, Ava Siriyali Ninu Enna Marete, ಕನಕದಾಸರು, Kanakadasaru
Доступные форматы для скачивания:
Скачать видео mp4
-
Информация по загрузке: