ಬಿ ಎಲ್ ಸಂತೋಷ್ ವಿರುದ್ಧ ಬೇಸರದ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್
Автор: Sampark TV│ಸಂಪರ್ಕ್ ಟಿವಿ
Загружено: 2025-11-11
Просмотров: 65
#Samparktv #Samparktvhd #Samparktvnews
ಬಿ ಎಲ್ ಸಂತೋಷ್ ವಿರುದ್ಧ ಬೇಸರದ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್
ಮೊನ್ನೆ ನಮ್ಮ ಹಿರಿಯ ರಾಜಕೀಯ ನಾಯಕರ ಮಾತು ಕೇಳಿದೆ
ರಾಜಕಾರಣಿಗಳಿಗೆ ಸಂಯಮ ಇರಬೇಕು ಎಂದು ಹೇಳಿದ್ದರು
ಬಿ ಎಲ್ ಸಂತೋಷ್ ಬಗ್ಗೆ ಪರೋಕ್ಷ ಮಾತನಾಡಿದ ರಘುಪತಿ ಭಟ್
ನಮ್ಮ ರಾಷ್ಟ್ರೀಯ ನಾಯಕರು ಕಾರ್ಯಕರ್ತರಿಗೆ ಸಂಯಮ ಬೇಕು ಎನ್ನುತ್ತಾರೆ
ನನಗೆ ಬಿ ಎಲ್ ಸಂತೋಷ್ ಅವರ ಬಗ್ಗೆ ಅತ್ಯಂತ ಗೌರವ ಇದೆ
ಸಂಯಮ ಕೇವಲ ಉಡುಪಿ ಜಿಲ್ಲೆಯ ಕಾರ್ಯಕರ್ತರಿಗೆ ಮಾತ್ರವೇ?
ಇದು ಬೇರೆಯವರಿಗೂ ಅನ್ವಯಿಸುತ್ತಾ?
ಅವರು ದೊಡ್ಡವರು ನಾನು ಟೀಕೆ ಮಾಡುವುದು ಸರಿಯಲ್ಲ
ಸಂಯಮದಿಂದ ವಿಜಯೇಂದ್ರ ಅವರಿಗೆ ಅಧಿಕಾರ ತ್ಯಾಗ ಮಾಡಲು ಹೇಳಿ
ನೆಕ್ಸ್ಟ್ ಶಾಸಕ ಸ್ಥಾನಕ್ಕೆ ನಿಲ್ಲದೆ ಇಡೀ ರಾಜ್ಯ ಪ್ರವಾಸ ಮಾಡಲಿ
ಅಪ್ಪ ಮತ್ತು ಇಬ್ಬರೂ ಮಕ್ಕಳಿಗೆ ಅಧಿಕಾರ ಬೇಡ
ಅಪ್ಪ ತುಂಬಾ ಗ್ರೇಟ್, ಒಬ್ಬ ಮಗನಿಗೆ ಅಧಿಕಾರ ಕೊಡಲಿ
ಇನ್ನೊಬ್ಬ ಮಗ ಪಕ್ಷಕ್ಕೆ ದುಡಿಯಲಿ
ಆಗ ಅವರ ಸಂಯಮದ ಹೇಳಿಕೆಯನ್ನು ನಾನು ಒಪುತ್ತೇನೆ
ಹಿರಿಯ ನಾಯಕ ಅಶೋಕ ಅವರಿಗೆ ನಿನ್ನದು ಎಂಟು ಅವಧಿ ಆಯ್ತು
ಇನ್ನು ಬೇಡ ಎಂದು ಹೇಳಲಿ ಅವರ ಸಯಂಮ ಟೆಸ್ಟ್ ಮಾಡಲಿ
ನನ್ನ ಸಂಯಮ ನಾನು ಕಾಯ್ದುಕೊಂಡಿದ್ದೇನೆ
2013ರಲ್ಲಿ ಟಿಕೆಟ್ ನಿರಾಕರಿಸಿದಗಲೂ ಸಯಂಮವನ್ನು ಕಳೆದುಕೊಳ್ಳಲಿಲ್ಲ
ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಾಗಲು ಸಂಯಮ ಕಳೆದುಕೊಳ್ಳಲಿಲ್ಲ
ಅಭ್ಯರ್ಥಿಯನ್ನು ನನ್ನ ಕಾರಿನಲ್ಲಿ ಕುಳ್ಳಿರಿಸಿ ಪ್ರಚಾರ ಮಾಡಿ ಗೆಲ್ಲಿಸಿದ್ದೇನೆ
ನನ್ನ ಹೆಂಡತಿಯನ್ನು ಫೀಲ್ಡ್ ಗೆ ಕಳಿಸಿ ಕೆಲಸ ಮಾಡಿಸಿದ್ದೇನೆ
ನನ್ನನ್ನು ರಾಜ್ಯಕಾರ್ಯಕಾರಣಿ ಸದಸ್ಯ ಮಾಡಿಲ್ಲ, ಉಪಾಧ್ಯಕ್ಷ ಮಾಡಿಲ್ಲ
ಮೂರು ಬಾರಿ ಶಾಸಕನಾಗಿದ್ದ ಯಾವುದೇ ಅಧಿಕಾರ ಇಲ್ಲದೆ ಕೂತಿದ್ದೆ
ಐ ಟಿ ಸಿ , ಓ ಟಿ ಸಿ ಆದ ಕೆಲವೇ ಶಾಸಕರಲ್ಲಿ ನಾನು ಒಬ್ಬ
ಆದ್ದರಿಂದ ನನ್ನಲ್ಲಿ ಸಂಯಮ ಇದೆ
ಸಂಯಮಕ್ಕೂ ಒಂದು ಲಿಮಿಟೇಶನ್ ಇರುತ್ತೆ
ದೊಡ್ಡ ದೊಡ್ಡ ನಾಯಕರಿಗೆ ಸಯಂಮ ಕಲಿಸಿಕೊಡಿ
ಸಿದ್ದರಾಮಯ್ಯ ಎದುರು ಸೋಮಣ್ಣ ನಿಲ್ಲುವುದರ ಬದಲು ಸಯಂಮ ಇರುವ ಯಾರಾದರೂ ಕಾರ್ಯಕರ್ತರನ್ನು ನಿಲ್ಲಿಸಬಹುದಿತ್ತು
ಡಿಕೆ ಶಿವಕುಮಾರ್ ಎದುರು ಅಶೋಕ್ ನಿಲ್ಲುವುದರ ಬದಲು ಸಯಂಮ ಇರುವ ಕಾರ್ಯಕರ್ತರು ಇರಲಿಲ್ಲವಾ?
ಕರಾವಳಿಯಲ್ಲಿ ಸೀಟ್ ತಪ್ಪಿಸಿದರೆ ಪಕ್ಷ ಎಂದು ಕೆಲಸ ಮಾಡುತ್ತಾರೆ ಅಂತ ಗೊತ್ತು
ಹಾಗಾಗಿ ಇಲ್ಲಿ ಪ್ರಯೋಗ ಮಾಡುತ್ತಾರೆ
ನಾನು ರಾಜಕೀಯ ಕಾರ್ಯಕರ್ತ
ರಾಜಕೀಯ ಕಾರ್ಯಕರ್ತರಿಗೆ ಅಪೇಕ್ಷೆ ಇರಬೇಕು ಎಂದು ನಮ್ಮ ನಾಯಕರೇ ಹೇಳಿದ್ದಾರೆ
ಅಪೇಕ್ಷೆ ಇಲ್ಲದಿದ್ದರೆ ಯಾರು ಕೆಲಸ ಮಾಡಲ್ಲ
ನನ್ನನ್ನು ಅಷ್ಟು ಸುಲಭದಲ್ಲಿ ನಿರ್ಲಕ್ಷ ಮಾಡಲು ಆಗಲ್ಲ
ಈಗ ಯಾವುದೇ ಚುನಾವಣೆ ಇಲ್ಲ ..ಹಾಗಾಗಿ ನಾನು ಬೇಕಾಗಿಲ್ಲ
ಚುನಾವಣೆ ಇದ್ದಾಗ ಕಂಡಿತಾ ರಘುಪತಿ ಭಟ್ ನೆನಪಾಗುತ್ತಾರೆ
ನನ್ನನ್ನು ಯಾಕೆ ಬಿಜೆಪಿ ದೂರವಿಟ್ಟಿದಿಯೋ ಗೊತ್ತಿಲ್ಲ
ನಾನೇನು ಬಿಜೆಪಿಗೆ ಬರುವುದಿಲ್ಲ ಎಂದು ಹೇಳಿಲ್ಲ
ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ನಿಂತಾಗಲು ನಾನು ಬಿಜೆಪಿ ಎಂದು ಹೇಳಿದ್ದೆ
ನಾನು ಬಂದರೆ ಏನಾದ್ರೂ ತೊಂದರೆ ಆಗುತ್ತೋ, ಏನು ಶಾಸಕರು ನನ್ನನ್ನು ಕರೆದಿಲ್ಲ
ಬಿಜೆಪಿ ಜಿಲ್ಲಾ ಕಚೇರಿ ಶಂಕು ಸ್ಥಾಪನೆ ಆಹ್ವಾನ ನೀಡದ ವಿಚಾರ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಬರುವಾಗ ನನ್ನನ್ನು ಕರೆದಿಲ್ಲ
ಆಹ್ವಾನ ಕೊಟ್ಟಿದ್ದರೆ ನಾನು ಖಂಡಿತ ಹೋಗುತ್ತಿದ್ದೆ
ಆಹ್ವಾನ ನೀಡದೆ ಇರುವುದು ನನಗೆ ಬೇಸರವಾಗಿದೆ
ನನ್ನನ್ನು ಪಕ್ಷದಿಂದ ಹೊರ ಹಾಕಿದ್ದಾರೆ ಹಾಗಾಗಿ ನಾನು ಆಕ್ಷೇಪ ಮಾಡುವಂತಿಲ್ಲ
ಪಕ್ಷದ ಸಂವಿಧಾನ ನನಗೆ ಗೊತ್ತಿದೆ ಹಾಗಾಗಿ ನನಗೆ ಆಕ್ಷೇಪ ಇಲ್ಲ
ಪ್ರಧಾನಿ ಮೋದಿಯನ್ನ ಬೈದವರಿಗೆ, ಸಂತೋಷ್ ಜಿ ಅವರನ್ನು ಬೈದವರಿಗೆ ಮತ್ತೆ ಪಕ್ಷಕ್ಕೆ ಕರೆತರುತ್ತಾರೆ
ಎಂಟೇ ತಿಂಗಳಲ್ಲಿ ಮತ್ತೆ ಬಂದು ಸಂಸದರಾಗುತ್ತಾರೆ
ಬಿಜೆಪಿ ನಿರ್ನಾಮ ಆಗುತ್ತೆ ಅಂದವರು ಎಂಪಿ ಆಗುತ್ತಾರೆ ಸೆಂಟ್ರಲ್ ಮಿನಿಸ್ಟರ್ ಆಗುತ್ತಾರೆ, ಮುಖ್ಯಮಂತ್ರಿ ಆಗುತ್ತಾರೆ
ನಾನು ಒಂದೇ ಒಂದು ಶಬ್ದ ಪಕ್ಷಕ್ಕೆ ಬೈದಿಲ್ಲ
ನಾನು ಪಕ್ಷದ ನಾಯಕರಿಗೆ ಯಾವತ್ತು ಬೈದಿಲ್ಲ
ನನ್ನನ್ನು ಎಂಎಲ್ಸಿ ಮಾಡುವಾಗ ಮೋಸ ಮಾಡಿದರು
ನಾನು ಸ್ವತಂತ್ರವಾಗಿ ನಿಂತು ಸೋತ ನಂತರ ಬಿಜೆಪಿ ಎಂದು ಹೇಳಿದೆ
ನನ್ನ ಚುನಾವಣೆ ಮುಗಿದು ಒಂದುವರೆ ವರ್ಷ ಆಯ್ತು
ನನ್ನ ಶಿಕ್ಷೆ ಇನ್ನು ಮುಂದುವರೆದಿದೆ
ಮಾನಸಿಕವಾಗಿ ನಾನು ಪಕ್ಷಕ್ಕೆ ಬೈಯಲು ಸಾಧ್ಯವಿಲ್ಲ
ನಾನು ಬಿಜೆಪಿಯಿಂದ ಉಪಕೃತನಾಗಿದ್ದೇನೆ
ರಾಜಕೀಯ ಕುಟುಂಬ ಹಿನ್ನೆಲೆ ಇಲ್ಲದೆ ಮೂರು ಬಾರಿ ಶಾಸಕನಾಗಿದ್ದೇನೆ
ನಾವು ಬೆಳೆದಿದ್ದೇವೆ ಪಕ್ಷವನ್ನು ಬೆಳೆಸಿದ್ದೇವೆ
ನನ್ನ ಯೌವನ, ವ್ಯವಹಾರ, ಸಮಯ ಎಲ್ಲವನ್ನು ಪಕ್ಷಕ್ಕೆ ಮುಡಿಪಾಗಿದ್ದೇನೆ
ನನ್ನ ಕುಟುಂಬ ಜೀವನವನ್ನು ಬಿಟ್ಟು ಪಕ್ಷಕ್ಕಾಗಿ ದುಡಿದಿದ್ದೇನೆ
ಪಕ್ಷ ನನ್ನನ್ನು ಮೂರು ಬಾರಿ ಶಾಸಕನನ್ನಾಗಿ ಮಾಡಿದೆ ಹಾಗಾಗಿ ಸುಲಭವಾಗಿ ಪಕ್ಷಕ್ಕೆ ನಾನು ಬಯಲು ಆಗಲ್ಲ
►Subscribe to our YouTube: / @samparktvlive
ನೆಚ್ಚಿನ ಸಂಪರ್ಕ ಟಿ.ವಿ ಯಲ್ಲಿ
GTPL ಕೇಬಲ್ ಚಾನೆಲ್ ನಂಬರ್ : 63
ಕರಾವಳಿ ಕರ್ನಾಟಕದಲ್ಲಿ ನಡೆಯುವ ಸಭೆ, ಸಮಾರಂಭಗಳನ್ನು ವೀಕ್ಷಿಸಲು ಈ ಚಾನೆಲ್ Subscribe ಮಾಡಲು ಮರೆಯದಿರಿ...
Доступные форматы для скачивания:
Скачать видео mp4
-
Информация по загрузке: