ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ
Автор: Awaaz Samvidhan
Загружено: 2025-12-13
Просмотров: 79
ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ
ಯಾದಗಿರಿ: ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯವ್ಯಾಪಿ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ತಿಳಿಸಿದ್ದಾರೆ. ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮತ್ತು ಮಾದಕ ವಸ್ತು ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ, ಸಮಾಲೋಚನೆ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಮನ್ವಯದಲ್ಲಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪಠ್ಯಪುಸ್ತಕಗಳಲ್ಲಿ ಜಾಗೃತಿ ಪಾಠಗಳನ್ನು ಸೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಮದ್ಯ ಮಾರಾಟ, ಸೇವನೆ ಹಾಗೂ ಪುನರ್ವಸತಿ ಕೇಂದ್ರಗಳ ಮೇಲ್ವಿಚಾರಣೆಯನ್ನು ಕಟ್ಟು ನಿಟ್ಟಾಗಿ ಕೈಗೊಳ್ಳಲಾಗುತ್ತಿದ್ದು, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
#ಕನ್ನಡನ್ಯೂಸ್ #yadgirnews #awaaz_samvidhan #ಆವಾಜ್_ಸಂವಿಧಾನ #yadgirdistrict #ಯಾದಗಿರಿ #ಮದ್ಯ_ಮಾದಕ_ವ್ಯಸನ_ಮುಕ್ತ #ರಾಜ್ಯ_ಮದ್ಯಪಾನ_ಸಂಯಮ_ಮಂಡಳಿ_ಅಧ್ಯಕ್ಷರು_ಶರಣಪ್ಪ_ಸಲದಾಪುರ #ಮದ್ಯಮುಕ್ತ
Доступные форматы для скачивания:
Скачать видео mp4
-
Информация по загрузке: