ಹೊಸ ತುಳಸಿಯನ್ನು ಯಾವ ದಿನ ಹಚ್ಚಬೇಕು ಗೊತ್ತ ಮತ್ತು ಬಾಡಿದ ತುಳಸಿಯನ್ನು ಏನು ಮಾಡಬೇಕು.... ವೀಣಾ ಜೋಶಿ
Автор: Veena Joshi
Загружено: 2021-04-01
Просмотров: 125016
#ತುಳಸಿ_ಪೂಜೆ_ಮಹತ್ವ
ಹೆಣ್ಣುಮಕ್ಕಳಿಗೆ ಯಾರೇ ಆಗಿರಲಿ ತುಳಸಿ ಪೂಜೆ ಮಾಡದೆ ಹತ್ತೆಂಟು ವ್ರತಗಳನ್ನು ಮಾಡಿದರೆ ಯಾವ ಫಲವು ಸಿಗಲಾರದು , ಮನೆಯಲ್ಲಿ ತುಳಸಿ ಗಿಡ ಇಲ್ಲದಿದ್ದರೆ ಅಲ್ಲಿ ಯಾವ ದೇವತೆಗಳು ವಾಸ ಇರುವುದಿಲ್ಲ ....
ತುಳಸಿಯ ಮಹತ್ವ ಎಷ್ಟಿದೆ ಎಂದರೆ
ತುಳಸಿಯ ಮೂಲದಲ್ಲಿ ಸಕಲ ತೀರ್ಥಾಭಿಮಾನಿಗಳಾದ ಗಂಗಾ, ಯುಮುನ, ಗೋದಾವರಿ, ಕಾವೇರಿ, ಮಣಿಕರ್ಣಿಕಾ, ತುಂಗ, ಭದ್ರಾ, ಕೃಷ್ಣವೇಣಿ, ಮುಂತಾದ ಸಕಲ ನದ್ಯಭಿಮಾನಿಗಳು ನೆಲೆಸಿರುವರು . ಪ್ರತಿನಿತ್ಯ ತುಳಸಿ ಗಿಡದಮೂಲಕ್ಕೆ ಭಕ್ತಿಯಿಂದ ನೀರು ಉಣಿಸಿದಲ್ಲಿ ಸಕಲ ತೀರ್ಥಗಳ ದರ್ಶನ, ಸ್ನಾನ ಪುಣ್ಯ ಪ್ರಾಪ್ತಿಯಾಗುತ್ತದೆ.
ಬ್ರಹ್ಮದೇವರು (ಸರಸಿಜಭವ), ರುದ್ರ (ಭವ), ಇಂದ್ರ (ಸುರಪ), ಅಗ್ನಿ (ಪಾವಕ), ಸೂರ್ಯಚಂದ್ರರ ಸನ್ನಿಧಾನವಿದೆ. ಗಿಡದ ಮಧ್ಯದಿ ಸಕಲ ಭಗವಂತನ ಅನುಚರ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದಿದ್ದಾರೆ.
ಮೂರನೇ ನುಡಿಯಲ್ಲಿ ತುಳಸಿಯ ಅಗ್ರದಲ್ಲಿ ಋಗಾದಿ ಚತುರ್ವೇದಾಭಿಮಾನಿಗಳು ನಿತ್ಯವೂ ಶ್ರೀಹರಿಯ ಸ್ತುತಿಸುತಲಿಹರು, ಅಗ್ರಭಾಗದಲ್ಲಿ ಶ್ರೀಹರಿಯು ಸ್ವತ: ಲಕ್ಷ್ಮೀಸಹಿತನಾಗಿ ನೆಲೆಸಿಹನೆಂದಿದ್ದಾರೆ.
ಹೀಗೆ ತುಳಸಿಯ ಪೂಜೆಯಿಂದ ಸಕಲ ಅಭೀಷ್ಟಗಳೂ ಪೂರೈಸುವುವು .... ಇನ್ನು ಮೇಲೆ ಪ್ರತಿದಿನ ತುಳಸಿ ಪೂಜೆ ಮಾಡಿ ಗೆಳತಿಯರೆ , ಇಷ್ಟೇಲ್ಲಾ ದೇವರ ಪೂಜೆ ಫಲ ದೊರೆಯುವುದು...ಸುಮ್ಮನೆ ಅಲ್ಲ ಯಾವುದು , ನನ್ನ ಪೋಸ್ಟ್ ಗಳು ಇಷ್ಟ ಆದರೆ ಖಂಡಿತ ಲೈಕ್ ಮಾಡಿ ಮತ್ತೆ ತಿಳಿಯದಿದ್ದರೆ ಕಾಮೆಂಟ್ಸ್ ಮಾಡಿ ...ನಿಮ್ಮ ಸ್ನೇಹಿತರಿಗೂ ಹೇಳಿ ಓದಲು
ವೀಣಾ ಜೋಶಿ.
Доступные форматы для скачивания:
Скачать видео mp4
-
Информация по загрузке: