ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಚರ್ಚೆ ; ವಿಪಕ್ಷಗಳಿಂದ ಜನರ ದಾರಿ ತಪ್ಪಿಸುವ ಪ್ರಯತ್ನ
Автор: DD Chandana News
Загружено: 2025-12-10
Просмотров: 23
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿಂದು ಹಲವು ಮಹತ್ವದ ವಿಚಾರಗಳು ಚರ್ಚೆಗೆ ಬಂದವು.
ಚುನಾವಣಾ ಸುಧಾರಣೆ ಕುರಿತ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಳೆದ ನಾಲ್ಕು ತಿಂಗಳುಗಳಿಂದ ವಿರೋಧ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸುಳ್ಳುಗಳನ್ನು ಹರಡುತ್ತಿದ್ದು, ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ರಾಷ್ಟ್ರದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಹೇಳಿದರು.
ವಿರೋಧ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಚರ್ಚೆಗೆ ಪಟ್ಟು ಹಿಡಿದಿವೆ. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಜವಾಬ್ದಾರಿಯಾಗಿದ್ದು, ಸದನದಲ್ಲಿ ಈ ಕುರಿತ ಚರ್ಚೆ ಸೂಕ್ತವಲ್ಲ ಎಂದು ತಿಳಿಸಿದರು.
ಮತದಾರರ ಪರಿಷ್ಕರಣೆ ಆರಂಭಿಸಿದ್ದು ಬಿಜೆಪಿ ಸರ್ಕಾರವಲ್ಲ. ಬದಲಿಗೆ, ನಮ್ಮ ಪ್ರಜಾಪ್ರಭುತ್ವ ಇತಿಹಾಸವು 1952 ರಲ್ಲಿ ಪ್ರಾರಂಭವಾಯಿತು ಮತ್ತು ಮತದಾರರ ಪಟ್ಟಿಯ ಮೊದಲ ತೀವ್ರ ಪರಿಷ್ಕರಣೆ ಅದೇ ವರ್ಷ ಕಾಂಗ್ರೆಸ್ ಪಕ್ಷದ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಡಿಯಲ್ಲಿ ನಡೆಯಿತು ಎಂದು ತಿಳಿಸಿದರು. (04.56)
ನುಸುಳುಕೋರರು ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಮಾಡಲಾಗುತ್ತಿದೆ. ಇದು ಮತದಾರರ ಪಟ್ಟಿಯ ಶುದ್ಧೀಕರಣವಲ್ಲದೆ ಬೇರೇನೂ ಅಲ್ಲ. ಆದರೆ, ಇದು ಕೆಲವು ಪಕ್ಷಗಳ ರಾಜಕೀಯ ಗುರಿಗಳಿಗೆ ಹಾನಿ ಮಾಡುತ್ತದೆ, ಅದೇ ಕಾರಣಕ್ಕೆ ಇದರ ವಿರೋಧವಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು EVM ವಿರುದ್ಧ ದನಿ ಎತ್ತುತ್ತಿದೆ. ಆದರೆ ಇದನ್ನು ಮೊದಲು ಜಾರಿಗೊಳಿಸಿದ್ದು ಕೂಡ ಕಾಂಗ್ರೆಸ್ ಸರ್ಕಾರ ಆಗಿದೆ. ರಾಜೀವ್ ಗಾಂಧಿಯವರ ಅವಧಿಯಲ್ಲಿ ಇದನ್ನು ಆರಂಭಿಸಲಾಯಿತು. ಕಾಂಗ್ರೆಸ್ ಇದನ್ನು ಒಪ್ಪಿಕೊಳ್ಳದಿರುವುದು ಅಚ್ಚರಿಯ ಸಂಗತಿ ಎಂದರು.
#LiveDDChandanaNews #DDChandanaNews #DDChandana #DDKannada
Доступные форматы для скачивания:
Скачать видео mp4
-
Информация по загрузке: