Education. ಪುಣ್ಯದೀಪದ ಪರ್ವ - ಡಾ. ರಾಘವೇಂದ್ರ ರಾವ್.
Автор: Dr. Raghavendra Rao
Загружено: 2025-10-19
Просмотров: 186
ಪುಣ್ಯದೀಪದ ಪರ್ವ.
ರಚನೆ , ಕಾವ್ಯವಾಚನ : ಡಾ. ರಾಘವೇಂದ್ರ ರಾವ್.
( ರಾರಾ )
*ಪುಣ್ಯದೀಪದ ಪರ್ವ*
🌷===🌷==🌷===🌷
ದೀಪವಿಲ್ಲದ ಮೇಲೆ ಕತ್ತಲಳಿಯುವುದೆಂತು?
ದೀಪದಿಂದಲೆ ತಾನೆ ಜಗಕೆ ಬೆಳಕು!!/
ಬತ್ತಿಯೊಣಗುವ ಮೊದಲು ತೈಲವೆರೆಯಲು ಬೇಕು!
ಬೆಳಕು ಬಾಡದ ಹಾಗೆ ಕಾಯಬೇಕು//೧//
ಬಾನಿಗೇರಿದ ಸೂರ್ಯ ಹಗಲಿಗೊಲವಿನ ದೀಪ!
ಲೋಕಮಂಗಲಕೆಂದೆ ಬೆಳಕನೀವ/
ಜಗದ ಸೊಬಗಿನ ಮನೆಯ ಕಣ್ಣಿನೆದುರಿಗೆ ತಂದು!
ಜೀವಜೀವರಿಗಿಂದು ದೇವದೇವ//೨//
ಇರುಳ ಕತ್ತಲ ಕಂಡು ಬೆದರ ಬಾರದು ನಾವು!
ಇರುಳಿನಾಗಸದಲ್ಲಿ ಕೋಟಿ ತಾರೆ/
ಗಗನಕೊಪ್ಪುವ ದೀಪ! ಮಿಂಚಿ ಮಿನುಗುವ ದೀಪ!
ಯಾರು ನೀಡಿದರದಕೆ ತೈಲಧಾರೆ//೩//
ಶುಕ್ಲಪಕ್ಷದ ರಾತ್ರಿ! ಸ್ವರ್ಣಕಾಂತಿಯ ಧಾತ್ರಿ!
ದೀಪದುನ್ನತಿಗೆಂದೆ ಗಗನದೀಪ/
ನೀಲ ಯವನಿಕೆಗೆದುರು ನಾಟ್ಯವಾಡುತಲಿರಲು
ರಸಿಕದಂಪತಿಗಿರದು ಕೋಪತಾಪ//೪//
ದೀಪದೀಪದ ಮಾಲೆ! ಪೂರ್ವಪುಣ್ಯದ ಲೀಲೆ!
ಪರ್ವವಾಗಿದೆ ನಮಗೆ ಪುಣ್ಯದಿಂದ/
ಹಟ್ಟಿ ಗುಡಿಸಲಿನಲ್ಲಿ!
ಗುಡಿಯ ಮೆಟ್ಟಿಲಿನಲ್ಲಿ!
ದೀಪವಿರಿಸಲೆ ಬೇಕು ಭಕ್ತಿಯಿಂದ//೫//
ರಚನೆ : ರಾರಾ.
( ಡಾ. ರಾಘವೇಂದ್ರ ರಾವ್ )
🌷===🌷==🌷===🌷
Доступные форматы для скачивания:
Скачать видео mp4
-
Информация по загрузке: