Bande Bande Bande Swami | Sri Gopala Dasaru.
Автор: Daasoham
Загружено: 2025-06-20
Просмотров: 23238
Written by Sri Gopala Dasaru.
Sung by Venugopal Khatavkar.
ಬಂದೆ ಬಂದೆ ಬಂದೆ ಸ್ವಾಮಿ ॥ಪ.॥
ಬಂದೆ ಬಂದೆ ಗೋವಿಂದ ಗೋವಳ
ಬಾಂಧವ ಭಕ್ತವತ್ಸಲ
ಇಂದಿರೇಶ ಶ್ರೀ ವೆಂಕಟ ನಿನ್ನ
ಸಂದರುಶದಕೆ ಸಾಗಿ ನಾನಿಲ್ಲಿ ॥ಅ.ಪ.॥
ನಡೆದು ನಡೆಸುತ ನುಡಿದು ನುಡಿಸುತ
ಅಡಿಗಡಿಗೆ ಕಾಪಾಡುತ
ಒಡನೆ ಆಡುತ ಬಿಡದೆ ಕ್ಷಣವನು
ಸಡಗರದಿ ಕರೆತರಲು ನಾನಿಲ್ಲಿ ॥೧॥
ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರ
ಗುಪ್ತ ಗುಣಗಣಪೂರ್ಣನೆ
ಪ್ರಾಪ್ತ ನೀನೆನಗಾಗಬೇಕೆಂದು
ವ್ಯಾಪ್ತಿ ನಿನ್ನದು ಹುಡುಕುತಲಿ ನಾ ॥೨॥
ಒಂದು ರೂಪದಿ ನಿಂದು ಎನ್ನಲ್ಲಿ
ಚೆಂದದಿಂ ಕರೆತಂದೆ ಇಲ್ಲಿ
ಒಂದರಿಯೆ ನಿನ್ನ ವಂದಿಸುವ ಬಗೆ
ಬಂದೊದಗೊ ನೀನೆನ್ನ ವದನಕೆ ॥೩॥
ಬಂದೆ ಬಂದೆ ನೀ ಬಂದಂತೆ ಕರ-
ತಂದುದಕೆ ಫಲ ನೀನೆ ಬಲ್ಲೆ
ಸಂದರುಶನ ನಿನಗೆ ನೀ ಮಾ-
ಳ್ಪಂದವನು ನೋಳ್ಪಾತುರದಿ ನಾ ॥೪॥
ಏನು ಕೊಡಲಿಲ್ಲ ಏನು ಬೇಡಲಿಲ್ಲ
ಏನು ಪಡೆಯಲೊ ಕರುಣಿಯೆ
ನೀನು ಕೊಟ್ಟ ಸ್ವಾತಂತ್ರ್ಯದ ಫಲ
ನಿನಗೆ ಅರ್ಪಿಸಬೇಕೆನುತ ಇಲ್ಲಿ ॥೫॥
ರಕ್ಷಶಿಕ್ಷಕ ಮೋಕ್ಷದಾಯಕ
ಸೂಕ್ಷ್ಮ ಘನ ಮಹಾವ್ಯಾಪಕ
ಕುಕ್ಷಿಯೊಳು ಜಗದ್ಭರಿತ ಪೂರಿತ
ಅಕ್ಷಯಫಲದಾಯಕ ॥೬॥
ನಮೋ ನಮೋ ನಾಗಾರಿವಾಹನ
ನಮೋ ನಮೋ ಸುಪ್ರಸನ್ನನೆ
ನಮೋ ನಮೋ ಗೋಪಾಲವಿಠಲ
ನಮಿಪ ಭಕ್ತರ ಸಲಹುವನೆಂದು ॥೭॥
bande bande bande svami ..pa..
bande bande govinda govala
bandhava bhaktavatsala
indiresha shri venkata ninna
sandarushadake sagi nanilli ..a.pa..
nadedu nadesuta nudidu nudisuta
adigadige kapaduta
odane aduta bidade kshanavanu
sadagaradi karetaralu nanilli ..1..
apta animitta vyapta sarvatra
gupta gunaganapurnane
prapta ninenagagabekendu
vyapti ninnadu hudukutali na ..2..
ondu rupadi nindu ennalli
chendadim karetande illi
ondariye ninna vandisuva bage
bandodago ninenna vadanake ..3..
bande bande ni bandante kara-
tandudake phala nine balle
sandarushana ninage ni ma-
lpandavanu nolpaturadi na ..4..
enu kodalilla enu bedalilla
enu padeyalo karuniye
ninu kotta svatantryada phala
ninage arpisabekenuta illi ..5..
rakshashikshaka mokshadayaka
sukshma ghana mahavyapaka
kukshiyolu jagadbharita purita
akshayaphaladayaka ..6..
namo namo nagarivahana
namo namo suprasannane
namo namo gopalavithala
namipa bhaktara salahuvanendu ..7..
.
.
Spotify:
https://open.spotify.com/artist/3jNaY...
Prime music:
https://music.amazon.in/artists/B09V2...
Apple music:
/ daasoham
Доступные форматы для скачивания:
Скачать видео mp4
-
Информация по загрузке: