ಅಯ್ಯನಪುರ ಶಿವಕುಮಾರ್ ರಾಜಕೀಯ ಲಾಭಕ್ಕಾಗಿದಲಿತರನ್ನು ಎತ್ತಿಕಟ್ಟುತ್ತಿದ್ದಾರೆ ಶಿವುವಿರಾಟ್ ಚಾಮರಾಜನಗರ:ನಾಯಕ ಸಮುದಾಯದ
Автор: @gKarnataka Power tv
Загружено: 2025-11-21
Просмотров: 464
gkarnataka power tv//21//11//2025//#@
ಅಯ್ಯನಪುರ ಶಿವಕುಮಾರ್ ರಾಜಕೀಯ ಲಾಭಕ್ಕಾಗಿ
ದಲಿತರನ್ನು ಎತ್ತಿಕಟ್ಟುತ್ತಿದ್ದಾರೆ : ಶಿವುವಿರಾಟ್...
ಚಾಮರಾಜನಗರ:ನಾಯಕ ಸಮುದಾಯದ ಮುಖಂಡರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಅಯ್ಯನಪುರ ಶಿವಕುಮಾರ್‌ಗಿಲ್ಲ ಎಂದು ನಾಯಕ ಜನಾಂಗದ ಯುವ ಮುಖಂಡ ಶಿವುವಿರಾಟ್ ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಯ್ಯನಪುರ ಶಿವಕುಮಾರ್ ಅವರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದು, ಯಾವ ರೀತಿಯಲ್ಲಿ ಮಾತನಾಡಬೇಕು. ಎಂಬುವುದು
ತಿಳಿದಿಲ್ಲ. ರಾಜಕೀಯ ಲಾಭಕ್ಕಾಗಿ ನಮ್ಮ
ಸಮುದಾಯದ ಮುಖಂಡರ ಬಗ್ಗೆ ಹಗುರುವಾಗಿ ಮಾತನಾಡುವುದು ಸರಿಯಲ್ಲ. ಸಮುದಾಯದ ಮುಖಂಡರಾದ ಕೆಲ್ಲಂಬಳ್ಳಿ
ಸೋಮನಾಯಕ, ಎಂ.ರಾಮಚಂದ್ರ, ಪು.ಶ್ರೀನಿವಾಸನಾಯಕ ವಿರುದ್ಧ ಮಾತನಾಡಲು ಇವರಿಗೆ ರೈಟ್ಸ್ ಕೊಟ್ಟವರ್ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ಜ್ಯೋತಿಗೌಡನಪುರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರು ಅನೋನ್ಯವಾಗಿದ್ದಾರೆ. ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಾಯಕ ಸಮುದಾಯವನ್ನು ಅವಹೇಳನ ಮಾಡಿದ್ದಾರೆ.
ಜ್ಯೋತಿಗೌಡನಪುರದಲ್ಲಿ ನಡೆದಿರುವ ಅಂಬೇಡ್ಕರ್, ಬುದ್ಧ ಪ್ರತಿಮೆ ಧ್ವಂಸ ಪ್ರಕರಣದಲ್ಲಿ ನೈಜ ಅಪರಾಧಿಗಳನ್ನು ಬಂಧಿಸಿಸುಂತೆ ನಾಯಕ ಸಮುದಾಯ ತಮ್ಮ ಮೇಲೆ ಬಂದಿರುವ ಕಳಂಕವನ್ನು ತೊಡೆದುಹಾಕಲು ಶಾಂತಿಯುತವಾಗಿ ಬೃಹತ್ ಪ್ರತಿಭಟನೆ ಮಾಡಿದೆ. ಆದರೆ ಅಯ್ಯನಪುರ ಶಿವಕುಮಾರ್ ನಾಯಕ ಸಮುದಾಯ ಬೃಹತ್ ಪ್ರತಿಭಟನೆ ಮಾಡಿದೆ. ಅದಕ್ಕೆ ಯಾರು ಹೆದರಬೇಕಿಲ್ಲ
ಅದಕ್ಕಿಂತ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡುವುದು ನಮಗೂ ಬರುತ್ತದೆ ಎಂದು ಹೇಳುವ ಮೂಲಕ ನಾಯಕ ಸಮುದಾಯವನ್ನು ಅಪಹಾಸ್ಯ ಮಾಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ನಡುವಿನ ಸಾಮರಸ್ಯ ಹಾಳು ಮಾಡಲು ಹೊರಟಿದ್ದಾರೆ. ಅಲ್ಲದೆ ನಮ್ಮ ಸಮುದಾಯವು ಕೂಡ ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ಸೇರಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ ಮಾಡಲಿ ಅದಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ನಾವು ಕೂಡ ಸಣ್ಣ ಪ್ರಮಾಣದಲ್ಲಿ ಹೋರಾಟ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.
ನಲ್ಲೂರುಸೋಮೇಶ್ವರ್ ಅವರು ಕೂಡ ಜ್ಯೋತಿಗೌಡನಪುರ, ಬದನಗುಪ್ಪೆ ಗ್ರಾಮಗಳಲ್ಲಿ ನಡೆದ ಹೋರಾಟಗಳಲ್ಲಿ ನಾಯಕ ಸಮುದಾಯದ ಮುಖಂಡರು ಬಂದಿಲ್ಲ. ಬದನಗುಪ್ಪೆ ಅಂಬೇಡ್ಕರ್ ನಾಮಫಲಕ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಅ ಕೆಲಸವನ್ನು ಮಾಡಿಲ್ಲ ಎಂದಿದ್ದಾರೆ. ಬದನಗುಪ್ಪೆಯಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸುವುದು, ಅಮಚವಾಡಿಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ
ಮಾಡುವುದು ಕಾನೂನಾತ್ಮಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಯಾಗಿದ್ದು, ರಾಷ್ಟ್ರನಾಯಕರು, ಮಹನೀಯರ ಭಾವಚಿತ್ರ ಅಳವಡಿಸಲು ಸರ್ಕಾರ ಅನುಪತಿ ಪಡೆದು ನಿರ್ಮಿಸಿ, ಸಿಸಿ ಕ್ಯಾಮರಗಳನ್ನು ಅಳವಡಿಸಬೇಕು.
ಎಲ್ಲಿ ಅಂಬೇಡ್ಕರ್ ರವರಿಗೆ ಅವಮಾನ ಆದಾಗ ಇಡೀ ನಾಯಕ ಸಮುದಾಯವನ್ನೇ ಗುರಿಯಾಗಿಸುವುದು ಎಷ್ಟುಮಟ್ಟಿಗೆ ಸರಿ ಎಂದರು.
ಅಯ್ಯನಪುರ ಶಿವಕುಮಾರ್, ನಲ್ಲೂರು ಸೋಮೇಶ್ವರ್ ನಮ್ಮ ಸಮುದಾಯ ಮುಖಂಡರ ಮೇಲೆ ವಿನಾಕಾರಣ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ಪ್ರಚಾರಪ್ರಿಯ ಸಂಘಸೇನ: ಇತ್ತೀಚಿಗೆ ಸಂಘಸೇನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್, ಬಿಜೆಪಿ ಮನುವಾದಿಗಳ ಕುತಂತ್ರದಿಂದ ಅಂಬೇಡ್ಕರ್, ಬುದ್ಧನಿಗೆ ಅಪಮಾನವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ನಾಯಕ ಜನಾಂಗಕ್ಕೂ ಬಿಜೆಪಿ, ಆರ್‌ಎಸ್‌ಎಸ್‌ಗೂ, ಬ್ರಾಹ್ಮರಿಗೂ ಏನು ಸಂಬಂಧ ಇದೆ. ಮಾಹಿತಿ ಕೊರತೆಯಿಂದ ಸಂಘಸೇನ ಹೇಳಿಕೆ ನೀಡಿದ್ದಾರೆ. ಪ್ರಚಾರಕ್ಕಾಗಿ ಏನು ಬೇಕಾದರೂ ಹೇಳಿಕೆ ನೀಡುತ್ತಾರೆ. ಇವರೊಬ್ಬರು ಪ್ರಚಾರಪ್ರಿಯರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಲಿಂಗನಾಯಕ, ಬಸವಣ್ಣ, ನಾಗೇಂದ್ರ, ಪ್ರದೀಪ್, ವೆಂಕಟೇಶ್, ರವಿ ಇತರರು ಹಾಜರಿದ್ದರು...
ವರದಿ:ಮಣಿಕಂಠ ನಾಯಕ್
ಚಾಮರಾಜನಗರ
@gkarnatakapowertv
@TV5Kannada
@NewsFirstKannada
@tv9kannada
Доступные форматы для скачивания:
Скачать видео mp4
-
Информация по загрузке: