ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆಯಿಂದ ನಿಮ್ಮ ದೇಹದಲ್ಲಾಗುವ ಅದ್ಭುತ ಬದಲಾವಣೆಗಳನ್ನು ತಿಳಿಯಿರಿ! Dr. B M Hegde
Автор: Saral Jeevan
Загружено: 2022-10-21
Просмотров: 216585
ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆಯಿಂದ ನಿಮ್ಮ ದೇಹದಲ್ಲಾಗುವ ಅದ್ಭುತ ಬದಲಾವಣೆಗಳನ್ನು ತಿಳಿಯಿರಿ! Dr. B M Hegde - Benefits of Garlic | Nimma Arogya Nimma kaiyalli | Saral Jeevan
ಬೆಳ್ಳುಳ್ಳಿ ಸೇವನೆಯಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಆಯುರ್ವೇದ ಶಾಸ್ತ್ರ ಹಾಗೂ ಭಾರತೀಯ ವೈದ್ಯ ಶಾಸ್ತ್ರದಲ್ಲಿ ಬೆಳ್ಳುಳ್ಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದಕ್ಕೆ ಕಾರಣ ಬೆಳ್ಳುಳ್ಳಿಯಲ್ಲಿ ಇರುವಂತಹ ಪ್ರಮುಖವಾದ ಔಷಧೀಯ ಗುಣಗಳು ಎನ್ನಬಹುದು. ವೈಜ್ಞಾನಿಕವಾಗಿ ನೋಡಿದಾಗ ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಪೋಷಕಾಂಶ ಹಾಗೂ ಆಂಟಿ ಆಕ್ಸಿಡೆಂಟ್ ಇವು ನಮ್ಮ ರಕ್ತ ನಾಳಗಳನ್ನು ಶುದ್ಧ ಮಾಡಲು ಸಹಾಯ ಮಾಡುತ್ತದೆ. LDL ಎಂಬಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೂ HDL ಎಂಬ ಒಳ್ಳೆಯ ಹಾಗೂ ದೇಹಕ್ಕೆ ಅವಶ್ಯವಿರುವ ಕೊಬ್ಬನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಬೆಳ್ಳುಳ್ಳಿ ಒಳ್ಳೆಯದು. ಬಿಪಿ ಹತೋಟಿ ಮಾಡುತ್ತದೆ. ಅಸ್ತಮಾ, ಉಸಿರಾಟದ ಸಮಸ್ಯೆ ದೂರ ಮಾಡುತ್ತದೆ ಶೀತ, ನೆಗಡಿ, ಅಲರ್ಜಿಯನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿಯ ಕುರಿತಾಗಿ ಸಾವಿರಾರು ವೈಜ್ಞಾನಿಕ ಸಂಶೋಧನೆಗಳು ನಡೆದಿವೆ. ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿ ಬೆಳ್ಳುಳ್ಳಿಗೆ ಇದೆ. ಈ ಒಂದು ಔಷಧವನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಬೆಳ್ಳುಳ್ಳಿಯನ್ನ ಸ್ವಲ್ಪ ತೆಂಗಿನ ಎಣ್ಣೆಯಲ್ಲಿ ಜಜ್ಜಿ ಅದಕ್ಕೆ ಸ್ವಲ್ಪ ಅಮೃತ ಬಳ್ಳಿಯ ಪುಡಿಯನ್ನ ಹಾಕಿ ಹಾಗೂ ಕಾಲಮೇಘದ ಪುಡಿಯನ್ನು ಸೇರಿಸಿ ಉಂಡೆ ರೀತಿಯಾಗಿ ಮಾಡಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
#bmhegde #garlic #drbmhegde #ಸರಳಜೀವನ #ಆರೋಗ್ಯ #ಬೆಳ್ಳುಳ್ಳಿ #ಡಾಬಿಎಂಹೆಗ್ಡೆ #Garlic
Доступные форматы для скачивания:
Скачать видео mp4
-
Информация по загрузке: