ಎಲೆಗಳು ನೂರಾರು ಭಾವದ ಎಳೆಗಳು ನೂರಾರು|ದೇಶಭಕ್ತಿಗೀತೆ|Elegalu nooraru|H.S.Venkateshmurty|shrutibhat|kannada
Автор: Shruti Bhat
Загружено: 2024-07-02
Просмотров: 16829
ದೇಶಭಕ್ತಿಗೀತೆ : ಎಲೆಗಳು ನೂರಾರು ಭಾವದ ಎಳೆಗಳು ನೂರಾರು
ಸಾಹಿತ್ಯ : ಎಚ್ ಎಸ್ ವೆಂಕಟೇಶಮೂರ್ತಿ
ಹಾಡಿದವರು : ಶ್ರುತಿ ಭಟ್ಟ
ಹಾಡಿನ ಸಾಹಿತ್ಯ :
ಎಲೆಗಳು ನೂರಾರು ಭಾವದ ಎಳೆಗಳು ನೂರಾರು
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ, ಭಾಷೆ, ಪಂಥ ಹಲವು
ಅವುಗಳ ಹಿಂದೆ ಮಾತ್ರ ಒಂದೇ ಒಲವು
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ
ನೀಗೋಣ ಭಿನ್ನತೆ ನೀಗೋಣ
ಸಾವಿರ ಹೆಜ್ಜೆ ಒಂದೇ ಗುರಿಗಾಗಿ
ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಸೂರ್ಯ, ಚಂದ್ರ, ಲಾಂದ್ರ, ಹಣತೆ,
ಅವುಗಳ ಹಿಂದೆ ಮಾತ್ರ ಒಂದೇ ಘನತೆ
ತೆರೆಯೋಣ ಹೃದಯ ತೆರೆಯೋಣ
ನಾವು ನೀವು ಸೇರಿ ಒಂದಾಗಿ
ಮರೆಯೋಣ ಭೇದ ಮರೆಯೋಣ
ನದಿಗಳು ಕೂಡಿದ ಪ್ರೀತಿಯ ಕಡಲಾಗಿ
ಪದಗಳು ನೂರಾರು ಬದುಕಿನ ಹದಗಳು ನೂರಾರು
ಪದಗಳ ಹಿಂದೆ ಒಂದೇ ಉಸಿರು
ಅಕ್ಕರೆಯಿಂದ ಒಟ್ಟಿಗೆ ಬಾಳೋಣ
ಭಾರತ ಮಾತೆಗೆ ನಮ್ಮ ಪ್ರೀತಿಯ ತೋರೋಣ
ಕಟ್ಟೋಣ ನಾಡನು ಕಟ್ಟೋಣ
ನಾವು ನೀವು ಸೇರಿ ಒಂದಾಗಿ
ಮುಟ್ಟೋಣ ಬಾನನು ಮುಟ್ಟೋಣ
ತಾರೆಗಳೇ ಈ ನಾಡಿನ ಸೂರಾಗಿ
#ಕನ್ನಡದೇಶಭಕ್ತಿಗೀತೆ
#ಎಲೆಗಳುನೂರಾರು
#ಎಚ್ ಎಸ್ ವೆಂಕಟೇಶಮೂರ್ತಿ
#patrioticsongskannada
#patrioticsongsforcompitition
#Elegalunoorarusong
#howtosingelegalunoorarusong
Доступные форматы для скачивания:
Скачать видео mp4
-
Информация по загрузке: