`ಕೃಷ್ಣನ ಅರಿವು: ಭಗವದ್ಗೀತೆಯ ಅರ್ಥಯಾನ' Awakening with Krishna: Understanding the Geeta’ ಭಾಗ-3
Автор: ಜೀವಯಾನ
Загружено: 2025-12-23
Просмотров: 140
ಇಂದು ಸರಿಯಾದ, ಸೂಕ್ತ ಮಾಹಿತಿ ದೊರಕದೇ ಜನಸಾಮಾನ್ಯರಿಗೆ, ಯುವ ಪೀಳಿಗೆಗೆ ಭಗವದ್ಗೀತೆ, ಶ್ರೀಕೃಷ್ಣ ಅವತಾರದ ಕುರಿತು ಅನೇಕ ಪ್ರಶ್ನೆಗಳು, ಗೊಂದಲಗಳು ಉಂಟಾಗುತ್ತಿರುವುದು ಗಮನಕ್ಕೆ ಬರುತ್ತಿದೆ. ಕೆಲವರು ತಮ್ಮ ತಪ್ಪು ಅರ್ಥೈಸುವಿಕೆಯಿಂದ ಅಥವಾ ಪೂರ್ವಾಗ್ರಹಪೀಡಿತ ಮನಸ್ಸಿಂದ ಭಗವದ್ಗೀತೆಯನ್ನು ತಪ್ಪಾಗಿ ಪ್ರಸ್ತುತಪಡಿಸಿ ದಿಕ್ಕುತಪ್ಪಿಸುತ್ತಿರುವ ಕಾರ್ಯಗಳೂ ಆಗುತ್ತಿರುವುದು ಗೊತ್ತಿರುವುದೇ ಆಗಿದೆ. ಈ ನಿಟ್ಟಿನಲ್ಲಿ ಗೀತೆಯ ಕೃಷ್ಣನನ್ನು ಪ್ರಶ್ನೊತ್ತರಗಳ ಮೂಲಕ ಆಪ್ತಗೊಳಿಸುವ ಉದ್ದೇಶ ನಮ್ಮದು. ೧೨ ರಿಂದ ೧೫ ನಿಮಿಷಗಳ ಪುಟ್ಟಪುಟ್ಟ ವೀಡೀಯೋಗಳನ್ನುಅನುಕೂಲವಾದಾಗೆಲ್ಲ ಈ ಸರಣಿಯಲ್ಲಿ ಹಾಕುತ್ತ ಹೋಗುವೆವು.
ಈ ಸಂವಾದದಲ್ಲಿ ಭಾಗವಹಿಸುವವರು: ಡಾ. ಜಿ.ಎನ್.ಭಟ್ ಮತ್ತು ತೇಜಸ್ವಿನಿ ಹೆಗಡೆ.
ಪ್ರೊ. ಗೋಪಾಲಕೃಷ್ಣ ನಾರಾಯಣ ಭಟ್ (ಜಿ.ಎನ್.ಭಟ್) ಅವರ ಪರಿಚಯ:
(ಶ್ರೀಯುತರ ಸಮಗ್ರ ಪರಿಚಯವನ್ನು ಇದೇ ಚಾನಲ್ಲಿನಲ್ಲಿರುವ ಅವರ ‘ಭಟ್ಟರ ಬದುಕು’ ವೀಡಿಯೋದಲ್ಲೂ ನೋಡಬಹುದು. ಲಿಂಕನ್ನು ಕೊನೆಯಲ್ಲಿ ಕೊಡಲಾಗಿದೆ)
ಪ್ರೊ. ಜಿ.ಎನ್.ಭಟ್ಟ ಅವರು ಉತ್ತರಕನ್ನಡ ಜಿಲ್ಲೆ, ಸಿದ್ಧಾಪುರ ತಾಲೂಕಿನ ಹರಿಗಾರಿನಲ್ಲಿ ಜನನ (೧೯೫೨). ಬಾಲ್ಯದಲ್ಲೇ ವೇದ, ಮಂತ್ರಗಳ ಕಂಠಪಾಠ. ಕಾಲೇಜಿನಲ್ಲಿ ಸಂಸ್ಕೃತ ಮುಖ್ಯ ವಿಷಯ, ಕನ್ನಡ ಮತ್ತು ಭೂಗೋಳ ಐಚ್ಛಿಕ ವಿಷಯದಲ್ಲಿ ಪದವಿ (೧೯೭೧). ಸಂಸ್ಕೃತದಲ್ಲಿ ಎಂ.ಎ., ಕ.ವಿ.ವಿ. (೧೯೭೩), ‘ವೈದಿಕ ನಿಘಂಟು’ ಮೇಲೆ ಪಿಹೆಚ್.ಡಿ (೧೯೮೬), ಮಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಾಶನ.
ಶಿರಸಿಯ ಎಂ.ಎಂ. ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಪ್ರಾರಭಿಸಿ (೧೯೭೩-೭೫), ೨೦೧೨ರವರೆಗೆ ಮಂಗಳೂರು ಕೆನರಾ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ. ಅಂತರ್ ವಿಷಯ ಸಂಸ್ಕೃತಾಧ್ಯಯನ ಮತ್ತು ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕ, ಪ್ರಾಂಶುಪಾಲರಾಗಿ ನಿವೃತ್ತಿ.
ತನ್ಮಧ್ಯೆ ಐದು ವರ್ಷ ಕಟೀಲು ಶ್ರೀ ದುರ್ಗಾಪರಮೇಶ್ವರಿ ಡಿಗ್ರಿ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿ (೧೯೯೦-೧೯೯೫) ಸಂಸ್ಕೃತ ಸ್ನಾತಕೋತ್ತರ ಕೇಂದ್ರ ಮತ್ತು ಸಂಶೋಧನಾ ಕೇಂದ್ರಗಳ ಸ್ಥಾಪಕ ನಿರ್ದೇಶಕ.
ನಿವೃತ್ತಿಯ ನಂತರ, ಮಂಗಳೂರು ಶ್ರೀ ಭಾರತಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವಿಕೆ, ಬೆಂಗಳೂರಿನ ಚೆನ್ನೇನಹಳ್ಳಿಯ ವೇದವಿಜ್ಞಾನ ಗುರುಕುಲ ಕೇಂದ್ರದ ಶೈಕ್ಷಣಿಕ ಸಲಹಾಮಂಡಳಿ ಸದಸ್ಯ, ಸಂಶೋಧಕ ಮಾರ್ಕದರ್ಶಕ, ಬೆಂಗಳೂರಿನ ಜಿಗಣಿಯ ಎಸ್‌ವ್ಯಾಸ, ಯೋಗವಿಶ್ವವಿದ್ಯಾಲಯದ ‘ಯೋಗ ಮತ್ತು ಅಧ್ಯಾತ್ಮ ವಿಭಾಗ’ದ ಡೀನ್ ಆಗಿ ಕಾರ್ಯನಿರ್ವಹಿಸುವಿಕೆ - ಹೀಗೆ ನಿರಂತರ ಅರ್ಧಶತಮಾನಗಳ ಕಾಲ ಅಧ್ಯಯನ ಮತ್ತು ಅಧ್ಯಾಪನ, ಸಂಶೋಧನ, ಶೈಕ್ಷಣಿಕ ಗೋಷ್ಠಿಗಳ ಸಂಘಟಕರಾಗಿ ಅನುಭವ.
ಪದವಿ ಮತ್ತು ಪದವಿ ಪೂರ್ವ ಸಂಸ್ಕೃತ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ನಾಗಿಅನುಭವ, ೨೫ ಹೆಚ್ಚು ಪುಸ್ತಕಗಳ ಸಂಪಾದಕ ಲೇಖಕ. ನೂರಕ್ಕೂ ಹೆಚ್ಚು ಲೇಖನಗಳು, ಸಾವಿರಾರು ಉಪನ್ಯಾಸ, ಪ್ರವಚನಗಳು.
೧೬ ಪಿ.ಹೆಚ್.ಡಿ ಸಂಶೋಧಕರಿಗೆ ಯಶಸ್ವೀ ಮಾರ್ಗದರ್ಶಕ, ೨೫ ಕ್ಕೂ ಹೆಚ್ಚಿನ ಗೋಷ್ಠಿಗಳ ಸಂಯೋಜಕ, ಪುಸ್ತಕ ಸಂಪಾದಕ. ಮಂಗಳೂರು ವಿ.ವಿ. ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಮಂಡಳಿ ಅಧ್ಯಕ್ಷ, ಸದಸ್ಯನಾಗಿ ಅನುಭವ. ಪ್ರಸ್ತುತ ತತ್ತ್ವಶಾಸ್ತ್ರ ಅಧ್ಯಯನ ಮಂಡಳಿಯ ಪರಿಣತ ಬಾಹ್ಯ ಸದಸ್ಯ.
ಪ್ರಕಟಿತ ಪುಸ್ತಕಗಳು: Vedic Nighantu, ಗೀತೆಯ ಕೃಷ್ಣ, ವ್ಯಕ್ತಿತ್ವ ವಿಕಸನ - ಗೀತಾ ಮಾದರಿ, A Peep into the Past, ಗೀತಾ ತತ್ತ್ವದರ್ಶನ ಮತ್ತು ಆಧುನಿಕ ಆನ್ವಯಿಕತೆ, ಭಾರತೀಯ ವೇದವಿದ್ಯಾಪರಂಪರೆ, ಪ್ರಧಾನ ಉಪನಿಷತ್ತುಗಳ ತತ್ತ್ವವಿವೇಚನೆ, ವ್ಯಕ್ತಿತ್ವ ವಿಕಸನಕ್ಕೆ ಭಗವದ್ಗೀತೆ (ಪ್ರಾಯೋಗಿಕ).
ಪರಿಣತಿಯ ಕ್ಷೇತ್ರಗಳು: ವೈದಿಕ ಸಾಹಿತ್ಯ, ಸಂಸ್ಕಾರ-ಸಂಶೋಧನ ಮಾರ್ಗದರ್ಶನ. ಪ್ರಸ್ತುತ ‘ಸಂಸ್ಕೃತ ಸಂಶೋಧನ ಸಂಸ್ಥಾನ (ರಿ) ಶಿರಸಿ’, ಇದರ ಅಧ್ಯಕ್ಷ.
ಭಟ್ಟರ ಬದುಕು ವೀಡಿಯೋ ಲಿಂಕ್ - • ಡಾ. ಜಿ.ಎನ್.ಭಟ್ – ಸಾರ್ಥಕ ಎಪ್ಪತ್ತು
Доступные форматы для скачивания:
Скачать видео mp4
-
Информация по загрузке: