ಕಲಬುರಗಿ ಕೇಂದ್ರ ಬಸ್ ನಿಲ್ದಾಣ || Kalburgi Central Bus Stand || morning volg 🌅 || Bidar, Davangere,
Автор: KKRTC RAICHUR VLOG
Загружено: 2025-06-13
Просмотров: 3953
ಕಲಬುರಗಿ ಕೇಂದ್ರ ಬಸ್ ನಿಲ್ದಾಣ || Kalburgi Central Bus Stand || morning volg 🌅 || Bidar, Bellary, Davangere,
#bus #youtubevideo #ksrtcbus #travel #conductor #tourist #ksrtcstatus #kkrtcraichurvlog #kkrtcraichurvlogzzz #kkrtc #kalaburagi #ksrtc #nwkrtc #publictransport #morningvog #bussimulatorindonesia #goa #vlog #volg #trending #trendingvideo #viral
/ @kkrtcraichurvlog
ಕಲಬುರಗಿ (ಹಳೆಯ ಹೆಸರು-ಗುಲ್ಬರ್ಗಾ) ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಒಂದು.ಕಲ್ಯಾಣ ಕರ್ನಾಟದಲ್ಲಿ ಒಂದು ಜಿಲ್ಲೆಯಾಗಿದ್ದು ಕಬುರಗಿವು ಕರ್ನಾಟಕದ ಎರಡನೇ ದೊಡ್ಡ ಜಿಲ್ಲೆ. ಕಲಬುರಗಿ ನಗರದ ಹಿಂದಿನ ಹೆಸರು ಗುಲ್ಬರ್ಗಾ. ಕಲಬುರಗಿಯ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದವರೆಗೆ ಗುರುತಿಸಬಹುದು. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ ೨೦೦ ವರ್ಷಗಳವರೆಗೆ ಕಲಬುರಗಿಯನ್ನು ಆಳಿದರು. ಚಾಲುಕ್ಯರ ನಂತರ ಹನ್ನೆರಡನೆ ಶತಮಾನದವರೆಗೆ ಕಲಬುರಗಿ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು. ಭಾರತೀಯ ನ್ಯಾಯಶಾಸ್ತ್ರದ ಪಿತಾಮಹ ಎಂದು ಹೆಸರಾದ ವಿಜ್ಞಾನೇಶ್ವರರ ಸಂಶೋಧನಾ ಕೇಂದ್ರ ಮರ್ತೂರಿನಲ್ಲಿ ಇದೆ.[೨] ಹನ್ನೆರಡನೆಯ ಶತಮಾನದ ಕೊನೆಗೆ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಕಲಬುರಗಿ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ.ಶ. ೧೩೨೧ ರಲ್ಲಿ ಕಾಕತೀಯ ಅರಸರು ಸೋಲಿಸಲ್ಪಟ್ಟು ಕಲಬುರಗಿ ದೆಹಲಿಯ ಸುಲ್ತಾನರ ಕೈ ಸೇರಿತು. ೧೩೪೭ ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, ಅಲ್ಲಾಹುಧ್ದೀನ ಹಸನ್ ಗಂಗು ಬಹುಮನ್ ಶಾ ೧೯೪೭ ರಲ್ಲಿ, ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಕಲಬುರಗಿಯನ್ನು ರಾಜಧಾನಿಯನ್ನಾಗಿ ಮಾಡಿದನು. ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಕಲಬುರಗಿ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. ೧೭ ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಕಲಬುರಗಿ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೮ ನೇ ಶತಮಾನದ ಆದಿಯಲ್ಲಿ ಮೊಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು.
Доступные форматы для скачивания:
Скачать видео mp4
-
Информация по загрузке: