ಸಾಗರದ ಅಲೆಗೂ ದಣಿವು ಕರೋಕೆ ಹಾಡು || Sagarada Alegu Danivu from Rajkumar film Karoke
Автор: Armaan Karaoke
Загружено: 2021-11-07
Просмотров: 15895
ಹಾಡು: ಸಾಗರದ ಅಲೆಗೂ
ಸಾಹಿತ್ಯ: ಗೌಸ್ ಪೀರ್
ಸಂಗೀತ: ವಿ. ಹರಿಕೃಷ್ಣ
ಗಾಯನ: ಸೋನು ನಿಗಂ
ಚಲನಚಿತ್ರ: ರಾಜಕುಮಾರ
ಸಾಗರದ ಅಲೆಗೂ ದಣಿವು
ಪರ್ವತಕೂ ಬೀಳೋ ಭಯವು
ಮಳೆಯ ಹನಿಗು ಬಂತು ನೋಡು ದಾಹ
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ
ಹಾರಾಡೋ ಮೋಡವಿಂದು, ರೆಕ್ಕೆಗಳ ಮುರಿದುಕೊಂಡು
ನಿಂತಿದೆ ಮಂಕಾಗಿ ಸುಮ್ಮನೆ
ತಂಗಾಳಿ ಅಂಗಳವು ದಂಗಾಗಿ, ಬೆವರಿರೋ ಸೂಚನೆ
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು
ಬೇಸರದ ರಾಟೆಯು, ಎದೆಯಲಿ ತಿರುಗಿ
ತಿರುಗುವ ಈ ಭೂಮಿಯೇ, ನಿಂತಿದೆ ಕೊರಗಿ
ಬದುಕಿನ ಹೊಸರೂಪದ ಪರಿಚಯವಾಗಿ
ಬೆಳಕೇ ಕಳೆದ್ಹೋಗಿದೆ ಸೂರ್ಯನು ಮುಳುಗಿ
ಎಲ್ಲೇ ನೋಡು, ಹಳೇ ಗುರುತು
ಬಾಳೋದ್ಹೇಗೆ, ಎಲ್ಲಾ ಮರೆತು
ಬಯಸದೆ ನಾ ಎಲ್ಲ ಅಂದು, ಬಯಸಿದರೂ ಇಲ್ಲ ಇಂದು
ಈಜುವುದ್ಹೇಗೆ ಕುದಿಯೋ ನದಿಯನ್ನ
ಚೂಪಾದ ಕಲ್ಲಿಂದ ಚೂರಾಯ್ತು, ಕನಸಿನ ದರ್ಪಣ
ಕಾಲ ನೀನು ಮಾಯಾ
ಇಲ್ಲಾ ನಿನಗೆ ನ್ಯಾಯ
ನಂಜು ಒಂದು, ಹೃದಯ ಸವರಿ
ಮಂಜು ಕವಿದು, ಮಬ್ಬು ದಾರಿ
ಗೆದ್ದಾಗ ಬೆನ್ನು ತಟ್ಟಿ, ಬಿದ್ದಾಗ ಮೇಲೆ ಎತ್ತಿ
ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ
ಆಸೆಗಳ ಆಕಾಶ ಪಾತಾಳ, ಮುಟ್ಟಿದೆ ಈ ದಿನ
ಸಾಗರದ ಅಲೆಗೂ ದಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು
Доступные форматы для скачивания:
Скачать видео mp4
-
Информация по загрузке: