ಬೆಟ್ಟದ ಏರು ಏರಲಾಗದೆ ನಿಂತ ಬಸ್ ಪ್ರಯಾಣಿಕರಿಂದ ನಟರಾಜ ಸರ್ವಿಸ್. | 18-01-2026 | Kannada today News
Автор: KANNADA TODAY NEWS
Загружено: 2026-01-18
Просмотров: 254
ಸುರಪುರ ಮಾರ್ಗದ ಬೆಟ್ಟದ ಏರಿನಲ್ಲಿ ಕೆಕೆಆರ್‌ಟಿಸಿ ಬಸ್ ಸ್ಥಗಿತ — ಪ್ರಯಾಣಿಕರಿಗೆ ಸಂಕಷ್ಟ
ಲಿಂಗಸುಗೂರು ವಿಭಾಗದ ಕೆಕೆಆರ್‌ಟಿಸಿ ಬಸ್ ಸಂಖ್ಯೆ KA 36 F1475 ಈ ಬಸ್ಸು ಸುರಪುರ ಮಾರ್ಗದ ಬೆಟ್ಟದ ಏರಿನಲ್ಲಿ ಏರಲಾಗದೆ ಮಧ್ಯದಲ್ಲೇ ನಿಂತ ಪರಿಣಾಮ, ಪ್ರಯಾಣಿಕರು ಬಸ್‌ನಿಂದ ಇಳಿದು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಹೋಗಿ ನಂತರ ಮತ್ತೆ ಬಸ್ ಹತ್ತಿ ಪ್ರಯಾಣ ಮುಂದುವರೆಸಬೇಕಾಯಿತು. ಬಸ್ ಇಂಜಿನ್ ಸಮಸ್ಯೆಯಿಂದ ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇಂತಹ ದುಸ್ಥಿತಿಯ ಬಸ್‌ಗಳನ್ನು ದೂರದ ಪ್ರಯಾಣಕ್ಕೆ ಬಿಡುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Доступные форматы для скачивания:
Скачать видео mp4
-
Информация по загрузке: