ಜಸ್ಟ್ ಮ್ಯೂಸಿಕ್–19 | ಜೋಗತಿ ಪದ; ಹೆಣ್ತನದ ಹಂಬಲ!
Автор: Prajavani | ಪ್ರಜಾವಾಣಿ
Загружено: 2021-04-30
Просмотров: 444486
ವಿದೇಶದಲ್ಲಿ ಓದಿರುವ ಖ್ಯಾತ ಜನಪದ ಗಾಯಕಿ, ಜಾನಪದ ಅಕಾಡೆಮಿ ಸದಸ್ಯೆ ಶಿಲ್ಪಾ ಮುಡಬಿ ನಗರ ಜೀವನ ತ್ಯಜಿಸಿ ತಮ್ಮ ಮೂಲದತ್ತ ಹೆಜ್ಜೆ ಇಟ್ಟಿದ್ದಾರೆ. ‘ಅರ್ಬನ್ ಫೋಕ್ ಪ್ರಾಜೆಕ್ಟ್’ ಮೂಲಕ ಯಲ್ಲಮ್ಮನ ಪದ, ಜೋಗತಿ ಪದಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿದ್ಧಾರೆ. ಅದರೊಂದಿಗೆ ಸ್ಥಳೀಯ ಜಾನಪದ ಸಂಸ್ಕೃತಿಯನ್ನು ಒಳಗೊಳ್ಳಲು ಯತ್ನಿಸುತ್ತಿದ್ದಾರೆ. ಕಾಳಮ್ಮ, ಮಾರೆಮ್ಮ, ಹುಲಿಗೆಮ್ಮ ಮುಂತಾದ ಸ್ಥಳೀಯ ಗ್ರಾಮ ದೇವತೆಯರ ಸಂಸ್ಕೃತಿಯನ್ನೂ ತಮ್ಮ ಯೋಜನೆಯೊಂದಿಗೆ ಒಂದುಗೂಡಿಸಿಕೊಂಡಿದ್ದಾರೆ.
ಯಲ್ಲಮ್ಮನ ಹಾಡು ಕೇವಲ ಜೋಗತಿ, ದೇವದಾಸಿಯರಿಗೆ ಸೀಮಿತವಾಗಬರದು ಎಂಬುದು ಅವರ ಹಂಬಲ. ಪತಿ ಆದಿತ್ಯ ಕೊತಕೋಟ ಅವರ ಒಡಗೂಡಿ ಕಲಬುರ್ಗಿಯ ಹೊರವಲಯದಲ್ಲಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ಧಾರೆ. ಅಲ್ಲೊಂದು ಸುಂದರ ವನ ನಿರ್ಮಿಸುತ್ತಿದ್ಧಾರೆ. ಸುಂದರ ಸಭಾಂಗಣ, ಯಲ್ಲಮ್ಮ, ಜೋಗತಿ, ಚೌಡಕಿ ಪದಗಳ ಸಂಗ್ರಹಾಲಯ, ಅಧ್ಯಯನ ಕೇಂದ್ರ ನಿರ್ಮಿಸುವ ಕನಸಿನೊಂದಿಗೆ ಹೆಜ್ಜೆ ಇಡುತ್ತಿದ್ಧಾರೆ. ಜೋಗತಿಯರ ಒಡನಾಟದಲ್ಲಿ ಶಿಲ್ಪಾ ಮುಡಬಿ ಕಂಡ ಹಿತಾನುಭವ ಈ ವಾರದ ‘ಜಸ್ಟ್ ಮ್ಯೂಸಿಕ್’ ಸರಣಿಯಲ್ಲಿದೆ.
#Shilpa Mudbi #Choudike Padagalu #jogatisongs
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: