ಯಕ್ಷಗಾನ । ಚದುರಂಗ । ಬಾಳ್ಕಲ್ । ಪೆರ್ಡೂರು ಮೇಳ
Автор: ಕಲಾ ಭಾರತಿ
Загружено: 2026-01-05
Просмотров: 117
ಸಂತೋಷ್ ಕುಲಾಲ್ ಪ್ರತಿಭಾವಂತ ಸ್ತ್ರೀಪಾತ್ರಧಾರಿ… ಅದು ಹಾಸ್ಯಪಾತ್ರವಿರಲಿ, ಗಂಭೀರ ಪಾತ್ರವಿರಲಿ ತನ್ನದ್ದೇ ರೀತಿಯಲ್ಲಿ ನಿರ್ವಹಿಸಿ ಸೈ ಎನ್ನಿಸಿಕೊಳ್ಳುವ ಪ್ರತಿಭೆ ಅವರಲ್ಲಿದೆ. ವೇಷ ಹಾಕಿ ರಂಗಕ್ಕೆ ಬಂದರೆ ಸ್ಪುರದ್ರೂಪಿ ಹೆಣ್ಣಾಗಿ ಕಾಣುವ ರೂಪ ಆತನಿಗೆ ದೇವರು ಕೊಟ್ಟ ವರ. ಚದುರಂಗ ಪ್ರಸಂಗದಲ್ಲಿ ಪ್ರಥಮಾರ್ಧದ ಶ್ರೀವಲ್ಲಿ ಪಾತ್ರವನ್ನು ನಿರ್ವಹಿಸಿ ಕೊನೆಗೆ ಹಾಸ್ಯ ಪಾತ್ರವೊಂದನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿದ್ದಾರೆ. ಯಕ್ಷರಂಗದಲ್ಲಿ ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಾ ಚದುರಂಗ ಪ್ರಸಂಗದಲ್ಲಿ ಇನ್ನೋರ್ವ ಪ್ರತಾಭಾವಂತ ಕಲಾವಿದ ಪವನ್ ಹೆಗಡೆ ಸಾಣ್ಮನೆಯವರೊಂದಿಗಿನ ಪದ್ಯವೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಈರ್ವರ ಸುಂದರ ನಾಟ್ಯಕ್ಕೆ ಸೊಗಸಾಗಿ ಪದ್ಯ ಹೇಳಿದವರು ಪ್ರಸನ್ನ ಭಟ್ ಬಾಳ್ಕಲ್.. ಹಿಮ್ಮೇಳದಲ್ಲಿ ಸಾಥ್ ನೀಡಿದವರು ಅನಿರುದ್ದ್ ಹಾಗೂ ನಯನ್.. ಒಮ್ಮೆ ನೋಡಿ. ಇಂತಹ ಇನ್ನಷ್ಟು ಚಿತ್ರಣಗಳಿಗಾಗಿ ಈ ಚಾನಲನ್ನು ಸಬ್ಸ್ಕ್ರೈಬ್ ಮಾಡಲು ದಯಮಾಡಿ ಮರೆಯದಿರಿ.
-ಶಶಿಧರ್ ತಲ್ಲೂರಂಗಡಿ
Доступные форматы для скачивания:
Скачать видео mp4
-
Информация по загрузке: