MUKTA COVER | T N SEETHARAM | C.ASHWATH | H S VENKATESHMURTHY
Автор: Sriraksha Priyaram Official
Загружено: 2024-12-28
Просмотров: 316911
ಶ್ರೀಯುತ ಟಿ.ಎನ್. ಸೀತಾರಾಮ್ ಅವರ ಕಥೆ, ಚಿತ್ರಕಥೆ, ನಿರ್ದೇಶನ ಹಾಗು ಪರಿಕಲ್ಪನೆಯ ಪ್ರಸಿದ್ದ ಧಾರಾವಾಹಿ “ ಮುಕ್ತ ” ಯ ಶೀರ್ಷಿಕೆ ಗೀತೆಯನ್ನು ನನ್ನ ಪರಿಕಲ್ಪನೆಯಲ್ಲಿ ಪ್ರಸ್ತುತ ಪಡಿಸಿದ್ದೇನೆ.
ಈ ಪ್ರಸ್ತುತಿ ನಮ್ಮ ನಾಡಿನ ಹಿರಿಯ ಗಾಯಕರಾದ ಹಾಗೂ ನನ್ನ ಚಿಕ್ಕಂದಿಲಿಂದಲೂ ನನ್ನ ಸಂಗೀತ ಪಯಣಕ್ಕೆ ಪ್ರೋತ್ಸಾಹಿಸುತ್ತಿದ್ದ... ಸಿ ಅಶ್ವಥ್ ಮಾಮಾ ಅವರಿಗೆ ಅರ್ಪಣೆ 🙏
ಹಾಗೆಯೇ, ನನ್ನ ನೆಚ್ಚಿನ ಕವಿಗಳಲ್ಲಿ ಒಬ್ಬರಾದ, ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ ಮಾಮಾ ಅವರ ಸುಂದರ ಕವಿತೆಗಳ ಗುಚ್ಛದಲ್ಲಿ ಈ ಹಾಡು ಸೇರುತ್ತದೆ !!
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ ..
ಬೇವ ಅಗಿವ ಸವಿ ಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ ...
ಹಸಿರ ತೋಳಿನಲಿ ಬೆಂಕಿಯ ಕೂಸ
ಪೊರೆವುದು ತಾಯಿಯ ಹೃದಯ
ಮರೆಯುವುದುoಟೆ ಮರೆಯಲಿ ನಿಂತೇ
ಕಾಯುವ ಕರುಣಾಮಯಿಯ
ತನ್ನಾವರಣವೇ ಸೆರೆಮನೆಯಾದರೆ
ಜೀವಕೆ ಎಲ್ಲಿಯ ಮುಕ್ತಿ ?
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
ಬಯಲೇ ಜೀವನಮುಕ್ತಿ
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿ ಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ
ಹೂ ಮೊಗವಾಡದ ಇರಿಯುವ ಮುಳ್ಳೇ
ಎಲ್ಲಿವರೆಗೆ ನಿನ್ನಾಟ
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
ಕಲಿಸಿದೆ ಜೀವನ ಪಾಠ
ಇರುಳ ವಿರುದ್ದ
ಬೆಳಕಿನ ಯುದ್ಧ
ಕೊನೆಯಿಲ್ಲದ ಹೋರಾಟ
ತಡೆಯೇ ಇಲ್ಲದೆ ನಡೆಯಲೇಬೇಕು
ಸೋಲಿಲ್ಲದ ಹೋರಾಟ
Доступные форматы для скачивания:
Скачать видео mp4
-
Информация по загрузке: