Shivamogga Ballari Air quality : ಶಿವಮೊಗ್ಗ, ಬಳ್ಳಾರಿ ಏರ್ ಕ್ವಾಲಿಟಿಯಲ್ಲಿ ಭಾರೀ ಕುಸಿತ
Автор: Kannada Medium 24×7
Загружено: 2026-01-22
Просмотров: 139
ಶಿವಮೊಗ್ಗದಲ್ಲಿ ಬೆಂಗಳೂರಿಗಿ0ತಲೂ ಕಳಪೆ ಗಾಳಿ ಎಕ್ಯೂಐ | ಮಲೆನಾಡು, ಗಡಿನಾಡಿನ ಜನರೇ ಎಚ್ಚರ.. | ಮಕ್ಕಳಿಗೆ, ಹಿರಿಯರಿಗೆ ಕಾಡಲಿದೆ ಅನಾರೋಗ್ಯ ಸಮಸ್ಯೆ | ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ಗಾಳಿ | ಶಿವಮೊಗ್ಗದಲ್ಲಿ 100 ರಿಂದ 175 ಕ್ಕೆ ಗುಣಮಟ್ಟ ಕುಸಿತ | ಬಳ್ಳಾರಿಯಲ್ಲಿ 100 ರಿಂದ 178 ಕ್ಕೆ ಕುಸಿದ ಗಾಳಿ
ಬೆಂಗಳೂರಿನ ಗಾಳಿಯ ಗುಣಮಟ್ಟ 162 ಇದ್ದು, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಆದರೆ ಬೆಂಗಳೂರನ್ನೂ ಮೀರಿಸುವ ಹಂತಕ್ಕೆ ತಲುಪಿರುವುದು ಶಿವಮೊಗ್ಗ ಮತ್ತು ಬಳ್ಳಾರಿಯ ವಾಯು ಗುಣಮಟ್ಟ. ಕೆಲ ದಿನಗಳಿಂದ 100ರ ಆಸುಪಾಸಿನಲ್ಲಿದ್ದ ಶಿವಮೊಗ್ಗದ ಏರ್ ಕ್ವಾಲಿಟಿ ಇಂದು ಒಮ್ಮೆಲೇ ಬೆಂಗಳೂರಿಗಿ0ತಲೂ ಹೆಚ್ಚಿನ ಎಕ್ಯೂಐಗೆ ತಲುಪಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಶಿವಮೊಗ್ಗದ ಗಾಳಿಯ ಗುಣಮಟ್ಟ ನೂರರ ಆಸುಪಾಸಿನಲ್ಲಿತ್ತು. ಆದರಿಂದು ಏಕಾಏಕಿ 175ಕ್ಕೆ ತಲುಪಿರುವುದು ಆತಂಕ ಸೃಷ್ಟಿಸಿದೆ. ಬಳ್ಳಾರಿಯೂ 178 ಎಕ್ಯೂಐ ಹೊಂದಿದ್ದು, ಬೆಂಗಳೂರಿಗಿ0ತ ಕಳಪೆ ಗುಣಮಟ್ಟದ ಏರ್ ಕ್ವಾಲಿಟಿಯಾಗಿದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬ0ಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
#shivamogga #weatherupdate #airquality #ballari #latestnews #breakingnews #bigbreakingnews #kannadabreakingnews #kannadalivenews #kannadanewschannel #kannadanews #kannadamedium24x7 #kmn #kmnnews #kannadamediumnews #shivamogga
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: / kannadamedium24x7
Instagram: instagram.com/kannadamediumnews
Twitter: twitter.com/KannadaMedium
Доступные форматы для скачивания:
Скачать видео mp4
-
Информация по загрузке: