"ಮನದಲ್ಲಿ ಇಂದು" (ಕಂದ ಯೇಸುವಿಗೆ ಕೃತಜ್ಞತಾ ಗೀತೆ)
Автор: Suptha Chethana
Загружено: 2024-12-25
Просмотров: 3459
ಸಂತ ಪೇತ್ರರ ಮಹಾ ಗುರುವಿದ್ಯಾಮಂದಿರ
ಅರ್ಪಿಸುವ
"ಮನದಲ್ಲಿ ಇಂದು" (ಕಂದ ಯೇಸುವಿಗೆ ಕೃತಜ್ಞತಾ ಗೀತೆ)
ಸಾಹಿತ್ಯ - ಸಂಗೀತ : ಸಹೋ. ಜೋಯಲ್ ವೇಗಸ್,ಚಿಕ್ಕಮಗಳೂರು ಧರ್ಮಕ್ಷೇತ್ರ
ವಾದ್ಯ ಸಂಯೋಜನೆ: ಸಹೋ. ರಾಹೆಲ್ ಪ್ರಸಾದ್ .ಮೈಸೂರು ಧರ್ಮಕ್ಷೇತ್ರ
ಗಾಯನ : ರಿಯಾ ಗೊನ್ಸಾಲ್ವಿಸ್, ಫಾತಿಮಾಪುರ
ವಿಶೇಷ ಕೃತಜ್ಞತೆಗಳು
ವಂ. ರಿಚರ್ಡ್ ಬ್ರಿಟ್ಟೊ,ಅಧ್ಯಕ್ಷರು, ಸಂತ ಪೇತ್ರರ ಕನ್ನಡ ಸಾಹಿತ್ಯ ಸಂಘ, ಬೆಂಗಳೂರು.
ವಂ. ಶಾಂತ್ ಕುಮಾರ್. ಜೆ, ನಿರ್ದೇಶಕರು, ಸಂತ ಪೇತ್ರರ ಕನ್ನಡ ಸಾಹಿತ್ಯ ಸಂಘ,ಬೆಂಗಳೂರು.
ಪ್ರಜ್ವಲ್ ಜೀವನ್ ವಾಜ಼್, ಮೂಡಿಗೆರೆ
ಜೋಶುವ ಫ್ರೆಡ್ರಿಕ್ : ಆವೆ ಸ್ಟುಡಿಯೋಸ್, ಬೆಂಗಳೂರು.
ಮಿಕ್ಸಿಂಗ್ & ಮಾಸ್ಟರಿಂಗ್ : ಎಲ್ಸ್ಟನ್ ರೋಲ್ಯಾಂಡ್.
ಧ್ವನಿಮುದ್ರಣ : ಆವೆ ಸ್ಟುಡಿಯೋಸ್. ಬೆಂಗಳೂರು.
ವೀಡಿಯೋ ಸಂಕಲನ : ಸಹೋ. ಜಿಲ್ಸನ್, ಚಿಕ್ಕಮಗಳೂರು ಧರ್ಮಕ್ಷೇತ್ರ.
Lyrics:
ಮನದಲ್ಲಿ ಇಂದು ಸವಿಭಾವವೊಂದು
ಮೆಲ್ಲಗೆ ಮೂಡುತ್ತಿದೆ
ಆ ದೇವ ಕಂದ ಎನ್ನೊಳಗೆ ಬಂದ
ಹೃದಯವು ನಲಿಯುತ್ತಿದೆ
ಮನ ಉಯ್ಯಾಲೆ ತೂಗುತ್ತಿದೆ
ಕಂದಗೆ ಜೋಗುಳ ಹಾಡುತ್ತಿದೆ
1. ಗಗನ ಮಂಡಲ ಮಳೆಯ ಸುರಿಸಿ
ಇಳೆಯ ಕಾವನು ತಣಿಸುವಂತೆ
ಬಾಡಿದ ಸಸಿಯು ಮಳೆಯ ಸ್ಪರ್ಶಕೆ
ನೂತನ ಚಿಗುರನ್ನು ಪಡೆವಂತೆ
ಈ ಭುವಿಗೆ ನಿನ್ನಾಗಮನ
ಪ್ರೀತಿ ಶಾಂತಿಯ ಜನನ
ಎನ್ನ ಮನಕ್ಕೆ ನಿನ್ನಾಗಮನ
ನನ್ನೀ ಬಾಳು ಪಾವನ
2. ಮರಿಯಳ ಉದರದಿ ದೀನನಾಗಿ
ಜನಿಸಿದೆ ಅಂದು ಗೋದಲಲಿ
ಇಂದೆನ್ನ ಮನಕ್ಕೆ ಈ ಹೃದಯ ಗುಡಿಗೆ
ಬಂದಿಹೆ ರೊಟ್ಟಿಯ ರೂಪದಲ್ಲಿ
ನೀ ಬರಲು ನನ್ನ ಜೀವನ
ಸಂತೋಷ ಸಮೃದ್ಧಿಯ ಮಿಲನ
ನೀ ತರಲು ನಿಜ ಸಾಂತ್ವನ
ಪಡೆಯುತ ಆಗ್ವೆ ಧನ್ಯ ನಾ
Доступные форматы для скачивания:
Скачать видео mp4
-
Информация по загрузке: