ವಚನ 23 | MOUNESHWARA vachanagalu
Автор: Devotionally connect
Загружено: 2025-06-10
Просмотров: 48
vachanagalu ವಚನ
'ಓಂ ಏಕ್ ಲಾಕ್ ಎಂಸಿ ಹಜಾರ್ ಪಾಚೋ ಪೀರ ಪೈಗಂಬರ್ ಮೌನಧೀನ್ ಜಿತಾ ಪೀರ ಪೈಗಂಬರ್ ಮೌನ್‌ಧೀನ್ ಕಾಶೀಪತಿ ಗಂಗಾಧರ ಹರಹರ ಮಹಾದೇವ, ಇದು ಹಿಂದು ಮುಸ್ಲಿಂ ಐಕ್ಯವನ್ನು ಸಾರುವ ಅಖಂಡತೆಯ ಮಂತ್ರವಾಗಿದೆ. ಒಂದು ಲಕ್ಷ ಎಂಬತ್ತು ಸಾವಿರದ ಐದು ಪೀರ ಪೈಗಂಬರಾದಿಯಾಗಿ ಮಹಮ್ಮದೀ ಯರು ಶಿವಸ್ವರೂಪಿಯಾದ ಮೌನೇಶ್ವರನಲ್ಲಿ ಅಡಗಿದ್ದರೆಂಬುದು ವಿಶ್ವತತ್ತ್ವವನ್ನೇ ಹೇಳುತ್ತದೆ. ವಿಶ್ವಕರ್ಮ ಎಂಬುದು ಕೇವಲ ಒಂದು ಜಾತಿಯಾಗಿರದೆ ಎಲ್ಲವನ್ನೂ ಒಳಗೊಂಡ ಅನಿಕೇತನ ಪ್ರಜ್ಞೆಯಾಗಿದೆ.
ವಿಶ್ವಕರ್ಮ ದಾರ್ಶನಿಕತೆ ಮತ್ತು ಮೌನೇಶ್ವರರು
ಮೌನೇಶ್ವರ ವಚನಗಳ ಮುಖ್ಯ ತತ್ತ್ವವೆಂದರೆ ಕರ್ಮವು(ಕ್ರಿಯೆ, ಕೆಲಸ)ವಾಸನಾ ಜನ್ಯವಾಗಿರದೇ ಪರಮಾತ್ಮ ಪ್ರೀತಿಯಿಂದ ಕೂಡಿ ಸದಾ ಪರೋಪಕಾರದ ಗುರಿ ಹೊಂದಿರಬೇಕೆನ್ನುವುದು. ಕಾಯ ಮತ್ತು ಕಾಯಕದಿಂದಲೇ ಎಲ್ಲವನ್ನು ಪಡೆಯ ಬಹುದು. ಕ್ರಿಯೆ ಮತ್ತು ಜ್ಞಾನದ ಸಾಂಗತ್ಯವೇ ಅರಿವು ಅಥವಾ ಅನುಭಾವ ಎಂಬುದು ಮೌನೇಶ್ವರರ ದಾರ್ಶನಿಕ ನಿಲುವು. ಇಲ್ಲಿ ಸೂಕ್ಷ್ಮವಾಗಿ ಪಂಚಾಳ ತತ್ತ್ವದ(ವಿಶ್ವಕರ್ಮ ದಾರ್ಶನಿಕತೆ) ಪ್ರತಿಪಾದನೆಯನ್ನು ಕಾಣಬಹುದು. 'ಕರ್ಮ ಎಂಬುದೇ ಪ್ರಧಾನ, ಲೋಕ ಸೇವೆಗಿಂತಲೂ ಹಿರಿಯ ತಿಳಿವು ಇಲ್ಲ. ಕಾರಣ ಕರ್ಮಯೋಗಿಗೆ ಜ್ಞಾನಮಾರ್ಗ ತಾನಾಗಿಯೇ ದೊರೆಯುತ್ತದೆ' ಎಂಬುದು ವಿಶ್ವಕರ್ಮ ಪ್ರಸ್ತಾವನೆ 41
ತಾತ್ವಿಕತೆಯ ಬಹುಮುಖ್ಯ ನಿಲುವು. ಈ ಅರ್ಥದಲ್ಲಿ ತಮ್ಮ ಲೋಕೋಪಕಾರಾರ್ಥ ಶಿಲ್ಪಕಾರ್ಯಗಳಿಂದ ಮನುಷ್ಯರಿಗೂ ದೇವತೆಗಳಿಗೂ ಅಸುರರಿಗೂ ಪ್ರಿಯರಾದವ ರೆಂದರೆ ವಿಶ್ವಕರ್ಮರು.
ಋಗ್ವದದಲ್ಲಿ ಬರುವ ಋಭುಗಳು ಪರಾಸಿದ್ಧಿಯನ್ನು ಗಳಿಸಿ ಎಲ್ಲ ಕಡೆಗೂ ಪೂಜ್ಯನೀಯರಾಗಿದ್ದರು. ಶಿಲ್ಪಕರ್ಮದ ಮುಖಾಂತರ ಮಾಡಿದ ಲೋಕಸೇವೆ ಯಿಂದಲೇ ಅಗ್ನಿಹೋತ್ರಿಯು ಯಜ್ಞದಿಂದ ಗಳಿಸುವ ಪುಣ್ಯ ಮತ್ತು ಸಫಲತೆಗಳನ್ನು ನಿತ್ಯಶಿಲ್ಪ ಕಾರ್ಯ ಮಾಡುವ ಶಿಲ್ಪಿಯು ಗಳಿಸುತ್ತಾನೆ ಎನ್ನುವ ಕಾರಣಕ್ಕೆ ಶಿಲ್ಪಿಗಳನ್ನು ನಿತ್ಯಾಗ್ನಿಹೋತೃಗಳು ಎಂದು ಕರೆಯಲಾಗುತ್ತದೆ.
'ಹರನೇ ಕಮ್ಮಾರ ವಿಷ್ಣುವೇ ಬಡಿಗ', 'ಕಾಯವೇ ಕಾಳಮ್ಮ ಜೀವವೇ ಪರಬ್ರಹ್ಮ', “ಬಡಿಗ ಕಮ್ಮಾರರು ಸೃಷ್ಟಿಗಧಿಕರ್ತರು', 'ಕುಲುಮಿ ಹುಟ್ಟದ ಮುನ್ನ ಕುಲ ಛಲವೆಲ್ಲಿತ್ತು'. 'ಕುಲ ಹದಿನೆಂಟಕ್ಕೆ ಕುಲುಮಿಯೇ ಶಿಕ್ಷಾಗುರು' 'ನೂರಾರು ದೇವರು ಚಾಣಿನ ಮಕ್ಕಳು'
ಇಕ್ಕಳವೇ ಕುಲದೈವ ಸುತ್ತಿಗೆಯೇ ಮನಿದೈವ ಬೊಕ್ಕಸಗೋಲು ಗಜದಂಡ ನೆಲಿ ತೆತ್ತೀಸ ಕೋಟಿ ದೇವಾದಿ ದೇವರ್ಕಳ
ನಿರ್ಮಿಸಿದ ಮೇಲೆ ಕೆಟ್ಟ ಕುಲ ಎನಬಹುದೆ
ಇದು ಅಲ್ಲಮನ ಕುಲವು, ಬಸವಣ್ಣ(೬)
ಕರಚರಣಗಳಲ್ಲಿ ಕಾವ್ಯವನ್ನು ನಿರ್ಮಿತವ ಮಾಡಿದ ಗುರ್ತರಿಯೆ ಸರುವ ದೇವರುಗಳನ್ನು ಪೆಸರಿಟ್ಟು ಕರೆದಂಥ
ಪರಬ್ರಹ್ಮ ಮೂರಿ ಈತನಲ್ಲದೆ ಪ್ರತಿ ದೈವವೆಂದು ನುಡಿದ ಮಹಾ ಪಾತಕರು ಇದೇನು ಕೇಳು, ಬಸವಣ್ಣ(೧೬)
ಈ ಅರ್ಥದಲ್ಲಿ ಸಕಲ ಸೃಷ್ಟಿಯ ನಿರ್ಮಾಣಕ್ಕೆ ವಿಶ್ವಕರ್ಮ, ಅಂದರೆ ಆತನಿಂದ ಉದ್ಭವರಾದ ಪಂಚಕರ್ಮಿಗಳು ಕಾರಣರು ಎನ್ನುವ ಮಾತು ಅರ್ಥಪೂರ್ಣ
ವಾದುದು.
Доступные форматы для скачивания:
Скачать видео mp4
-
Информация по загрузке: