Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story

Автор: Public TV

Загружено: 2019-11-28

Просмотров: 1328191

Описание:

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur

ರಾಯಚೂರು: ಕೆಲ ಪ್ರಗತಿಪರ ರೈತರ ಹೊಸ ಪ್ರಯೋಗಗಳು ಯಶಸ್ವಿಯಾಗಿದ್ದು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ. ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರ ಈ ಹೊಸ ಟೆಕ್ನಿಕ್ ಯಶಸ್ವಿಯಾಗಿದ್ದು, ಬದುಕು ಬಂಗಾರವಾಗುತ್ತಿದೆ.

ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲೂ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಲಾಭದಾಯಕ ಕೃಷಿ ಮಾಡಿ ಸುದ್ದಿಯಾಗಿದ್ದಾರೆ.

ನಾರಾಯಣಪುರ ಬಲದಂಡೆ ಕಾಲುವೆ ನೀರನ್ನೇ ನಂಬಿ ಕೃಷಿ ಮಾಡುತ್ತಿರುವ ಸಾವಿರಾರು ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳು ಸೇರಿ ಎಕರೆಗೆ 40 ರಿಂದ 50 ಸಾವಿರ ಖರ್ಚುಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದರು.

ಇದೀಗ ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ. ಖರ್ಚು ಬರುತ್ತಿದೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕ್ರಿಮಿನಾಶಕವಾಗಿ, ಪೋಷಾಕಾಂಶ ನೀಡುವ ಔಷಧಿಯಾಗಿಯೂ ಬಳಕೆ ಮಾಡಬಹುದು ಎಂಬದನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ.

ದೇವದುರ್ಗಾ ತಾಲೂಕಿನ ಗಬ್ಬೂರು ಸೇರಿದಂತೆ ಸುತ್ತಲಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿನ ರೈತರು ಈ ಪ್ರಯೋಗದಿಂದ ಯಶಸ್ವಿಯಾಗಿದ್ದಾರೆ. ಅಡುಗೆ ಎಣ್ಣೆಗಳಾದ ಪಾಮ್, ಶೇಂಗಾ, ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ, ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ, ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಬಹುದು ಎನ್ನುವುದನ್ನು ರೈತರು ಕಂಡುಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ.

ಮಿಶ್ರಣ ಹೇಗೆ?
ಮೆಣಸಿನಕಾಯಿ, ಹತ್ತಿ ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಬೆಳೆ ಬೆಳೆಯುತ್ತಿರುವಾಗ ಪ್ರತಿ ವಾರಕ್ಕೊಮ್ಮೆ ಈ ಔಷಧಿಯನ್ನು ಸಿಂಪಡಣೆ ಮಾಡಬೇಕು, ಇಲ್ಲಿ ಮುಖ್ಯವಾಗಿ ಅಡುಗೆ ಎಣ್ಣೆಯೊಂದಿಗೆ ನೀರು ಮಿಶ್ರಣ ಮಾಡಲು ಒಂದು ಮೀಡಿಯೇಟರ್ ಬೇಕು. ಅದಕ್ಕೆ ಅವರು ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡುತ್ತಾರೆ. ಈ ಮೊದಲು ಎಂಎಸ್ ಫೈರ್ ಎಂಬ ಔಷಧಿಯನ್ನು ಮಿಶ್ರಣಕ್ಕೆ ಬಳಸುತ್ತಿದ್ದರು. ಇದನ್ನು ಸಹ ಪ್ರತಿ 100 ಎಂ ಎಲ್ ಗೆ 40 ರೂಪಾಯಿ ಕೊಟ್ಟು ಖರೀದಿಸಬೇಕಾಗಿತ್ತು.

ಪ್ರತಿ ಎಕರೆಗೆ ಒಂದು ಕೆಜಿ ಅಡುಗೆ ಎಣ್ಣೆ ಹಾಗೂ ಅದಕ್ಕೆ ಆರು ಕೋಳಿ ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 19 ಲೀಟರ್ ನಂತೆ ನೀರನ್ನ ಬೆರೆಸಿ ಆರು ಟ್ಯಾಂಕ್ ಗಳ ಔಷಧಿಯನ್ನು ಸಿಂಪಡಣೆ ಮಾಡಬೇಕು. ನಿಗಿದಿತ ಸಮಯಕ್ಕೆ ಸರಿಯಾಗಿ ಸಿಂಪಡಣೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಪ್ರತಿ ಬಾರಿಯೂ ಔಷಧಿಗಾಗಿ ಅಡುಗೆ ಎಣ್ಣೆ ಪ್ರತಿ ಕೆಜಿಗೆ 60 ರಿಂದ 120 ರೂಪಾಯಿ, ಆರು ಮೊಟ್ಟೆಗಳಿಗೆ 40 ರೂಪಾಯಿ, ಕೂಲಿ 300 ರೂಪಾಯಿ ಹೀಗೆ ಕೇವಲ 450 ರೂಪಾಯಿಯಲ್ಲಿ ಔಷಧಿಯನ್ನು ಸಿಂಪಡಣೆ ಮಾಡಬಹುದು. ಆದೇ ರಸಾಯನಿಕ ಬಳಸಿದರೆ ಪ್ರತಿ ಲೀಟರ್ ಗೆ 1000-1500 ರೂಪಾಯಿ ಹಾಗು ರಸಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ.

ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ರೈತರು ಸಹ ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದಾರೆ.

Watch Live Streaming On http://www.publictv.in/live

Download Public TV app here:
Android: https://play.google.com/store/apps/de...

iOS: https://apps.apple.com/in/app/public-...

Keep Watching Us On Youtube At:    / publictvnewskannada  
Watch More From This Playlist Here:    / publictvnewskannada  

Read detailed news at www.publictv.in

Subscribe on YouTube: https://www.youtube.com/user/publictv...
Follow us on Google+ @ https://plus.google.com/+publictv
Like us @   / publictv  
Follow us on twitter @   / publictvnews  

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

R. Ashok Firing Speech At BJP Massive protest in Ballari | YOYO TV Kannada

R. Ashok Firing Speech At BJP Massive protest in Ballari | YOYO TV Kannada

Bagalkot Scientist Invents Pesticide For Chilli-ಮೆಣಸಿನಕಾಯಿ ಕಪ್ಪುನುಸಿ ರೋಗಕ್ಕೆ ಔಷಧಿ ಕಂಡುಹಿಡಿದ ವಿಜ್ಞಾನಿ

Bagalkot Scientist Invents Pesticide For Chilli-ಮೆಣಸಿನಕಾಯಿ ಕಪ್ಪುನುಸಿ ರೋಗಕ್ಕೆ ಔಷಧಿ ಕಂಡುಹಿಡಿದ ವಿಜ್ಞಾನಿ

ಧನು ರಾಶಿಯವರಿಗೆ ಮೌನಿ ಜನವರಿ ೧೮ ಅಮಾವಾಸ್ಯೆಯ ನಂತರ  ಮುಖ್ಯ ವ್ಯಕ್ತಿ ಆಗಮನ ರಹಷ್ಯ ಪವಾಡ

ಧನು ರಾಶಿಯವರಿಗೆ ಮೌನಿ ಜನವರಿ ೧೮ ಅಮಾವಾಸ್ಯೆಯ ನಂತರ ಮುಖ್ಯ ವ್ಯಕ್ತಿ ಆಗಮನ ರಹಷ್ಯ ಪವಾಡ

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

ನಾನು ನನ್ನ ಒಂದು ಎಕರೆಯಲ್ಲಿ ಕೃಷಿ ಎನ್ನುವ ಕಂಪನಿ ಕಟ್ಟಿದ್ದೇನೆ!!Part-2||Amurthbhoomi

ನಾನು ನನ್ನ ಒಂದು ಎಕರೆಯಲ್ಲಿ ಕೃಷಿ ಎನ್ನುವ ಕಂಪನಿ ಕಟ್ಟಿದ್ದೇನೆ!!Part-2||Amurthbhoomi

ರಸ ಹೀರುವ ಕೀಟಗಳಿಗೆ ಸಾವಯವ ಕೀಟನಾಶಕ | organic liquid fertilizer | organic pesticides | organic farming

ರಸ ಹೀರುವ ಕೀಟಗಳಿಗೆ ಸಾವಯವ ಕೀಟನಾಶಕ | organic liquid fertilizer | organic pesticides | organic farming

"ಬೆಂಕಿ ಹಚ್ತೀನಿ, ಚಪ್ಪಲೀಲಿ ಹೊಡಿತೀನಿ" - KAS ಅಧಿಕಾರಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ- ಆಡಿಯೋ ವೈರಲ್- Shidlaghatta

ಸಿದ್ದರಾಮಯ್ಯ ಹೊಡೆದಾಟ ಒದ್ದು ಒಳಗೆ ಹಾಕಿಸಿಟ್ಟಿಗೆದ್ದ ಪ್ರತಾಪ್‌ ಸಿಂಹ ಕಾಂಗ್ರೆಸ್‌ ಕರ್ಮಕಾಂಡ ರಾತ್ರೋ ರಾತ್ರಿ ಬಯಲು!

ಸಿದ್ದರಾಮಯ್ಯ ಹೊಡೆದಾಟ ಒದ್ದು ಒಳಗೆ ಹಾಕಿಸಿಟ್ಟಿಗೆದ್ದ ಪ್ರತಾಪ್‌ ಸಿಂಹ ಕಾಂಗ್ರೆಸ್‌ ಕರ್ಮಕಾಂಡ ರಾತ್ರೋ ರಾತ್ರಿ ಬಯಲು!

ಲಾಭದಾಯಕ ಮೆಣಸಿನಕಾಯಿ ಬೆಳೆಯುವ ವಿಧಾನ | Chilli farming success story | Chilling cultivation infarmatiom

ಲಾಭದಾಯಕ ಮೆಣಸಿನಕಾಯಿ ಬೆಳೆಯುವ ವಿಧಾನ | Chilli farming success story | Chilling cultivation infarmatiom

ಹಳ್ಳಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ.. 1 ಎಕರೆ ಜಮೀನಿದ್ರೆ ಇದು ಸಾಧ್ಯ..! | Organic Mandya | Karnataka Tv

ಹಳ್ಳಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ.. 1 ಎಕರೆ ಜಮೀನಿದ್ರೆ ಇದು ಸಾಧ್ಯ..! | Organic Mandya | Karnataka Tv

ಈ ಬೆಳೆ ಗುಡುಗು ಸಿಡಿಲಿಗೆ ಮಾತ್ರ ಮೊಳಕೆ ಹೊಡೆಯುತ್ತದೆ!!This crop sprouts only in thunderstorms!!

ಈ ಬೆಳೆ ಗುಡುಗು ಸಿಡಿಲಿಗೆ ಮಾತ್ರ ಮೊಳಕೆ ಹೊಡೆಯುತ್ತದೆ!!This crop sprouts only in thunderstorms!!

ಈ ಟೆಕ್ನಿಕ್ ಮಾಡಿದ್ರೆ | Banana farming in Karnataka | modern agriculture methods Kannada yelakki bale

ಈ ಟೆಕ್ನಿಕ್ ಮಾಡಿದ್ರೆ | Banana farming in Karnataka | modern agriculture methods Kannada yelakki bale

ಒಂದು ಎಕರೆ ಇದಕ್ಕೆ ಅಂತ ಮೀಸಲಿಟ್ಟಿದ್ದೇನೆ ಯಾರು ಇಷ್ಟು ದೊಡ್ಡದಾಗಿ ಈ ಬೆಳೆಯನ್ನ ಹಾಕಿಲ್ಲ... ಇದರಿಂದ ಮೂರು ರೀತಿಯ..!

ಒಂದು ಎಕರೆ ಇದಕ್ಕೆ ಅಂತ ಮೀಸಲಿಟ್ಟಿದ್ದೇನೆ ಯಾರು ಇಷ್ಟು ದೊಡ್ಡದಾಗಿ ಈ ಬೆಳೆಯನ್ನ ಹಾಕಿಲ್ಲ... ಇದರಿಂದ ಮೂರು ರೀತಿಯ..!

ಒಂದು ಎಕರೆಯ ಚಂದದ ತೋಟ...! ಆ ತೋಟದಲ್ಲಿ ಖರ್ಚಿಲ್ಲದೆ ಬಹು ಬೆಳೆಗಳಿಂದ ಆದಾಯ

ಒಂದು ಎಕರೆಯ ಚಂದದ ತೋಟ...! ಆ ತೋಟದಲ್ಲಿ ಖರ್ಚಿಲ್ಲದೆ ಬಹು ಬೆಳೆಗಳಿಂದ ಆದಾಯ

Логистический нокаут: что сделали ночные удары по мостам и портам. Когда склады взрываются часами

Логистический нокаут: что сделали ночные удары по мостам и портам. Когда склады взрываются часами

ತೊಗರಿ ಬೇಸಾಯದಲ್ಲಿ ಎಕರೆಗೆ 10 ಕ್ವಿಂಟಾಲ್ ಪಡೆಯುವುದು ಹೇಗೆ ಎಂಬುದಕ್ಕೆ ಅತ್ಯುತ್ತಮ ವಿಡಿಯೋ #redgram #farmers

ತೊಗರಿ ಬೇಸಾಯದಲ್ಲಿ ಎಕರೆಗೆ 10 ಕ್ವಿಂಟಾಲ್ ಪಡೆಯುವುದು ಹೇಗೆ ಎಂಬುದಕ್ಕೆ ಅತ್ಯುತ್ತಮ ವಿಡಿಯೋ #redgram #farmers

⚡️ У Путина экстренно просят помощи || Сын Кадырова разбился в ДТП?

⚡️ У Путина экстренно просят помощи || Сын Кадырова разбился в ДТП?

Мигранты в России 2026: Средняя Азия или Индия? Честное сравнение

Мигранты в России 2026: Средняя Азия или Индия? Честное сравнение

ಮೆಣಸಿನಕಾಯಿ ಬೆಳೆದು ಹೆಚ್ಚು ಲಾಭ ಪಡೆದ ರೈತ | 99020-29864  / 9845629864

ಮೆಣಸಿನಕಾಯಿ ಬೆಳೆದು ಹೆಚ್ಚು ಲಾಭ ಪಡೆದ ರೈತ | 99020-29864 / 9845629864

ಪ್ರಭಾವಶಾಲೀ ಸಾವಯವ ಕೀಟನಾಶಕ ಮನೆಯಲ್ಲೇ ತಯಾರಿಸಿ ಗಿಡಗಳು 100% ಸುರಕ್ಷಿತ Effective Home made Organic Pesticide

ಪ್ರಭಾವಶಾಲೀ ಸಾವಯವ ಕೀಟನಾಶಕ ಮನೆಯಲ್ಲೇ ತಯಾರಿಸಿ ಗಿಡಗಳು 100% ಸುರಕ್ಷಿತ Effective Home made Organic Pesticide

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com