ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ | ಬೆಳಗಾವಿ ವಿಟಿಯು ನಲ್ಲಿ ನಡೆದ ಹ್ಯಾಕಥಾನ್
Автор: DD Chandana News
Загружено: 2025-12-09
Просмотров: 14
ಆತ್ಮ ನಿರ್ಭರ ಭಾರತ ಪರಿಕಲ್ಪನೆಯಡಿ ಭಾರತದ ಸಮಕಾಲೀನ ಸವಾಲುಗಳಿಗೆ ತಾಂತ್ರಿಕ ಪರಿಜ್ಞಾನದ ದೇಶದ ಹೊಸ ತಲೆಮಾರು ಕಂಡುಕೊಳ್ಳುವ ಮಾರ್ಗಗಳ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆಯಿತು.
ವಿಟಿಯು ಕುಲಪತಿ ಪ್ರೊ. ಎಸ್.ವಿದ್ಯಾಶಂಕರ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆತ್ಮನಿರ್ಭರ ಭಾರತಕ್ಕಾಗಿ ಸ್ವದೇಶಿ ಬ್ಲಾಕ್ ಚೈನ್ ಮತ್ತು ಸೈಬರ್ ಸೆಕ್ಯೂರಿಟಿ, ಎಐ ಆಧಾರಿತ ಮಾಲಿನ್ಯ ಮೂಲಕ ಗುರುತಿಸುವಿಕೆ, ಸ್ವದೇಶಿ ಸಾರಿಗೆ ಮತ್ತು ಲಾಜಿಸ್ಟಿಕ್, ಸ್ವದೇಶಿ ಕ್ಲೀನ್ ಮತ್ತು ಗ್ರೀನ್ ಟೆಕ್ನಾಲಜಿ ಮೊದಲಾದ ಪ್ರಮುಖ ಸಮಸ್ಯೆಗಳಿಗೆ ವಿದ್ಯಾರ್ಥಿಗಳ ತಂಡ ಪರಿಹಾರಗಳನ್ನು ರೂಪಿಸುವಲ್ಲಿ ಕಾರ್ಯನಿರತವಾಗಿದ್ದವು.
ವಿಜೇತ ತಂಡಗಳಿಗೆ ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ಅವರು ಬಹುಮಾನ ವಿತರಣೆ ಮಾಡಿದರು.
ದೂರದರ್ಶನದೊಂದಿಗೆ ಪ್ರೊ.ಎಸ್.ವಿದ್ಯಾಶಂಕರ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಹೊಸ ಅನ್ವೇಷಣೆಗೆ ಉತ್ತಮ ವೇದಿಕೆಯಾಗಿ ಹೊಸ ಆಯಾಮವೇ ತೆರೆದುಕೊಂಡಿದೆ. ಉದ್ಯಮಿಗಳಾಗಿ ಬೆಳೆಯಲು ಹಾಗೂ ಅವರ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ಅವಕಾಶ ಇದಾಗಿದೆ. ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ಬೆಂಗಳೂರಿನ ರೆಸಿಡೆನ್ಸಿ ವಿಶ್ವವಿದ್ಯಾಲಯ ತಂಡದ ನಾಯಕ ಮೋಹಿತ ಶ್ರೀನಿವಾಸ್, ಸ್ವಚ್ಛತೆ ಹಿನ್ನೆಲೆಯಲ್ಲಿ ಕಸವಿಲೇವಾರಿ ಸಮಸ್ಯೆಯ ಸುಲಭ ನಿವಾರಣೆಗೆ ತಾಂತ್ರಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆತ್ತಿರುವುದು ಸಂತಸ ತಂದಿದೆ ಎಂದರು.
ಮುಂಬಯಿ ಕಾಲೇಜೊಂದರ ತಂಡದ ನಾಯಕಿ ಶ್ರೇಯಾ ಪಾಟೀಲ, ಸಮಕಾಲೀನ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ದೊರೆತ ಅವಕಾಶ ತಂಬಾ ಖುಷಿ ನೀಡಿದೆ ಎಂದು ಹೇಳಿದರು
#LiveDDChandanaNews #DDChandanaNews #DDChandana #DDKannada
Доступные форматы для скачивания:
Скачать видео mp4
-
Информация по загрузке: