ಸುರಕ್ಷತೆಗಿಲ್ಲ ಆಧ್ಯತೆ...GRS ಫ್ಯಾಂಟಸಿ ಪಾರ್ಕ್ ವಿರುದ್ದ ಪ್ರತಿಭಟನೆ...ಕ್ರಮ ಕೈಗೊಳ್ಳುವಂತೆ ಮೈಸೂರು ಕನ್ನಡ ವೇದಿ
Автор: TV10 Kannada / ಟಿವಿ10 ಕನ್ನಡ
Загружено: 2025-11-24
Просмотров: 8
ಸುರಕ್ಷತೆಗಿಲ್ಲ ಆಧ್ಯತೆ...GRS ಫ್ಯಾಂಟಸಿ ಪಾರ್ಕ್ ವಿರುದ್ದ ಪ್ರತಿಭಟನೆ...ಕ್ರಮ ಕೈಗೊಳ್ಳುವಂತೆ ಮೈಸೂರು ಕನ್ನಡ ವೇದಿಕೆ ಆಗ್ರಹ...
ಮೈಸೂರು,ನ24,Tv10 ಕನ್ನಡ
ಸುರಕ್ಷತಾ ವಿಚಾರದಲ್ಲಿ ಲೋಪವೆಸಗಿ ವ್ಯಕ್ತಿಯೊಬ್ಬರು ಶಾಶ್ವತ ಅಂಗವೈಕಲ್ಯರಾದ ಘಟನೆ ಖಂಡಿಸಿ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ವಿರುದ್ದ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಅಕ್ಟೋಬರ್ ತಿಂಗಳಲ್ಲಿ ದೆಹಲಿ ಮೂಲದ ವ್ಯಕ್ತಿ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಗೆ ಭೇಟಿ ನೀಡಿ ಮನರಂಜನೆ ಆಟದಲ್ಲಿ ಭಾಗಿಯಾಗಿದ್ದ ವೇಳೆ ತಾಂತ್ರಿಕ ದೋಷದಿಂದಾಗಿ ಯಂತ್ರಗಳ ಮಧ್ಯೆ ಸಿಲುಕಿ ತಮ್ಮ ಕಾಲು ಬೆರಳುಗಳನ್ನ ಕಳೆದುಕೊಂಡರು.ಘಟನೆ ಹಿನ್ನಲೆ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ನಲ್ಲಿ ಯಾವುದೇ ಸುರಕ್ಷತಾ ಕ್ರಮ ಸೂಕ್ತವಾಗಿ ಅನುಸರಿಸುತ್ತಿಲ್ಲವೆಂದು ಆರೋಪಿಸಿ ಪ್ರತಿಭಟಿಸಿದರು.ಆಡಳಿತ ಮಂಡಳಿ ವಿರುದ್ದ ಕ್ರಮ ಕೈಗೊಳ್ಳುವ ಮೂಲಕ ನೊಂದ ವ್ಯಕ್ತಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷರಾದ ಎಸ್ ಬಾಲಕೃಷ್ಣ,ನಾಲ ಬೀದಿ ರವಿ, ಗೋಪಿ ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಚಾಮರಾಜು, ಸಿದ್ದಪ್ಪ ಎಲ್ಐಸಿ, ಸ್ವಾಮಿ, ಗೋವಿಂದರಾಜು, ಶಿವ ಗೌಡ, ಚೆಲುವರಾಯಸ್ವಾಮಿ, ರೈತ ಪರ್ವಾಧ್ಯಕ್ಷರಾದ ಅರುಣ್ ಕುಮಾರ್, ಉಮಾಪತಿ, ಸ್ವಾಮಿ ಗೈಡ್, ಮೋದಿ ಹಾಜರಿದ್ದರು...
Доступные форматы для скачивания:
Скачать видео mp4
-
Информация по загрузке: