ಭಕ್ತರ ಜತೆ ನಿಂತ ಜಲ ದುರ್ಗಾಪರಮೇಶ್ವರಿ | Koppa | Chikkamagaluru Live
Автор: Chikkamagaluru Live
Загружено: 2025-09-29
Просмотров: 611
Chikkamagaluru Live/ Contact 8880733545
ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದ ಜಾಗ ಇಂದು ಜಲ ದುರ್ಗಾಪರಮೇಶ್ವರಿಯ ಸನ್ನಿಧಿ., ಗ್ರಾಮದವರು ನೋಡ., ನೋಡಲುತ್ತಲೇ ಗ್ರಾಮಸ್ಥರ ಕೈಯಿಂದಲೇ ತನ್ನ ಗುಡಿಯನ್ನು ನಿರ್ಮಿಸಿಕೊಂಡ ದೇವಿವೂ ಇಲ್ಲಿ ಪವಾಡಗಳನ್ನು ಸೃಷ್ಠಿಸಿತ್ತಿದ್ದಾಳೆ..,
ಹೌದು.! ದೇವಿಯೂ ತನ್ನ ಇರುವಿಕೆಯನ್ನು ತೋರಿಸುವುದರ ಜೊತೆಗೆ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ..? ನಂಬಿ ಬಂದ ಜನತೆಯ ಕೈ ಹಿಡಿದು ಅವರ ಏಳಿಗೆಯ ಜತೆಯಾಗಿ ನಿಂತಿದ್ದಾಳೆ. ಅಷ್ಟೇ ಅಲ್ಲದೇ., ಭಕ್ತರು ಪ್ರಾರ್ಥಿಸಿದನ್ನು ನೀಡುವ ಕರುಣಮಾಯಿಯಾಗಿ ನಿತ್ಯ ನಿರಂತರ ಭಕ್ತರಿಗೆ ಹರಸುತ್ತಾಳೆ ಈ ಮಹಾತಾಯಿ.
ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ನೇತಾಜಿ ನಗರದಲ್ಲಿ ಜಲ ದುರ್ಗಾ ಪರಮೇಶ್ವರಿ ನೆಲೆಸಿದ್ದಾಳೆ. ಕೊಪ್ಪ ಪಟ್ಟಣ ಸೇರಿದಂತೆ ಅಕ್ಕಪಕ್ಕ ಊರುಗಳಿಂದ ಭಕ್ತರು ಆಗಮಿಸಿ ದೇವಿಯ ಸನ್ನಿಧಿಯಲ್ಲಿ ನಡೆದುಕೊಳ್ಳುತ್ತಾರೆ.
ಈ ಸನ್ನಿಧಿ ತನ್ನದೇ ಆದ ಸ್ಥಳ ಪುರಾಣವನ್ನು ಹೊಂದಿದೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಉತ್ಸಾಹಿ ಯುವಕರ ತಂಡವು ಮೂರು ದಿನಗಳ ಕಾಲ ಗೌರಿ ಗಣೇಶ ಹಬ್ಬದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರು. ಒಂದು ಊರಿನ ಹಿರಿಯರೆಲ್ಲ ಸೇರಿ ಇದೇ ಸ್ಥಳದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆಸಿದ್ದರು.
ತದನಂತರದಲ್ಲಿ ಸಮೀಪದ ನಾರ್ವೆಯ ವಾಸಿಯಾಗಿದ್ದ ನಾಗೇಂದ್ರ ಭಟ್ಟರ ಬಳಿ ಗಣಪತಿ ದೇವಸ್ಥಾನ ವಿಚಾರನ್ನು ಮುಂದಿಟ್ಟಿದ್ದರು, ಅವರು ಆಗ ಇಲ್ಲಿ ದೇವಿ ಇರುವ ಸ್ಥಳ ನೀವು ದೇವಿಯನ್ನು ಪ್ರತಿಷ್ಠಾಪಿಸಬೇಕು ಎಂದು ಸಲಹೆ ನೀಡಿದ್ದರು, ಇದೇ ಸ್ಥಳದಲ್ಲಿ ಸರ್ಕಾರದ ಒಂದು ಬಾವಿಯೂ ಸಹ ಇತ್ತು, ನಂತರದಲ್ಲಿ ಊರಿನ ಹಿರಿಯರು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿ ಜಲ ದುರ್ಗಾ ಪರಮೇಶ್ವರಿಯನ್ನು ಪ್ರತಿಷ್ಠಾಪಿಸಿದರು.
ಹನ್ನೇರಡು ವರ್ಷಗಳಿಂದ ದೇವಿಗೆ ಪ್ರತಿ ವರ್ಷ ವಾರ್ಷಿಕ ವರ್ದಂತಿ, ವರಮಹಾಲಕ್ಷಿö್ಮÃ ಪೂಜೆ, ನವರಾತ್ರಿ ಪೂಜೆ, ಕಾರ್ತೀಕ ದೀಪೋತ್ಸವಗಳು ಅದ್ದೂರಿಯಾಗಿ ನಡೆಯುತ್ತದೆ. ಈ ಉತ್ಸವದ ದಿನದಂದು ನೆರೆದಿದ್ದ ಭಕ್ತರಿಗೆ ದಾಸೋಹ ಕೂಡ ಇರುತ್ತದೆ.
#koppa #temple #dugraparameshwari #navaratri #darmasthala #trending #trend #hindu #hindutemple #malnadnews #malenadu
Доступные форматы для скачивания:
Скачать видео mp4
-
Информация по загрузке: