ಲಿಂಗೈಕ್ಯ ಶ್ರೀ ಸದ್ಗುರು ಸಮಥ೯ ಕಲ್ಯಾಣೇಶ್ವರ ಮಹಾರಾಜರ ಅಂತಿಮ ದರ್ಶನ ಹಾಗೂ ಆಶ್ರಮದಲ್ಲಿ ಕೊನೆಯ ವಿಧಿ ವಿಧಾನ
Автор: ಶ್ರೀ ಕ್ಷೇತ್ರ ಇಂಚಗೇರಿ ಮಠ ಶಿರಢಾಣ
Загружено: 2024-04-29
Просмотров: 11133
ಹುಕ್ಕೇರಿ ತಾಲೂಕಿನ ಶಿರಢಾಣ ಗ್ರಾಮದ ಇಂಚಗೇರಿ ಮಠ ಅವುಜೀಕರ ಆಶ್ರಮದ ಪೀಠಾಧ್ಯಕ್ಷರು,
ಶ್ರೀ ಸ.ಸ.ಕಲ್ಯಾಣೇಶ್ವರ ಮಹಾರಾಜರು(93) ಗುರುವಾರ(25.04.2024)ದೇಹ ತ್ಯಾಗ ಮಾಡಿದರು.
ಶ್ರೀಗಳ ಪಾರ್ಥಿವ ಶರೀರಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿ ಬಂದ ಭಕ್ತರಿಗೆ ದಶ೯ನ ಕಲ್ಪಿಸಲಾಯಿತು.
ಶ್ರೀ ಸ.ಸ. ಕಲ್ಯಾಣೇಶ್ವರ ಮಹಾರಾಜರು ಶೂರಪಾಲಿ ನಗರನಗರದಲ್ಲಿ 23-07-1933 ರಂದು ತಂದೆ-ಪರಗೌಡ, ತಾಯಿ-ಗುರುಲಿಂಗವ್ವ ಉದರದಲ್ಲಿ ಜನಿಸಿ 15ನೇ ವಯಸ್ಸಿನಲ್ಲಿ ಸದ್ಗುರು ಸಮಥ೯ ಅವುಜೀಕರ ಮಹಾರಾಜರಿಂದ ಉಪದೇಶ ಪಡೆದುಕೊಂಡರು ನಂತರ 26ನೇ ವಯಸ್ಸಿನಲ್ಲಿ ಸಕಾ೯ರಿ ಪಡೆದು ಸೇವೆ ಸಲ್ಲಿಸುವಾಗ ಅವುಜೀಕರ ಮಹಾರಾಜರ ಪರಮ ಶಿಷ್ಯರಾಗಿ ನೌಕರಿ ತೇಜಿಸಿ ಸವ೯ ಸಂಘ ತ್ಯಾಗ ಮಾಡಿ ಆಧ್ಯಾತ್ಮಿಕತೆ ಹೊಂದಿ ಲೋಕ ಕಲ್ಯಾಣಕ್ಕಾಗಿ ಶಿರಢಾಣ ಕ್ಷೇತ್ರವನ್ನು ಆಯ್ಕೆಮಾಡಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಶಿರಢಾಣ ಗ್ರಾಮದ ಆಶ್ರಮದಲ್ಲಿ ನೆಲೆಸಿ ಈ ಭಾಗದ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದರು. ಈ ಭಾಗದ ಜನರ ದೈವ ಸ್ವರೂಪಿಯಾಗಿ ತಮ್ಮ 92ನೇ ವಯಸ್ಸಿನಲ್ಲಿ ದೇಹ ಬಿಟ್ಟಿದ್ದಾರೆ. ನಂತರ ಪಾಥಿ೯ವ ಶರೀರವನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಂದು ಆಶ್ರಮದಲ್ಲಿ ಕೊನೆಯ ವಿಧಿ ವಿಧಾನಗಳನ್ನು ಇಂಚಗೇರಿ ಸಾಂಪ್ರದಾಯದಂತೆ ನೇರವೆರಿಸಲಾಯಿತು.
Доступные форматы для скачивания:
Скачать видео mp4
-
Информация по загрузке: