Sadhguru Sannidhi|
Автор: Manav and Chiru
Загружено: 2023-01-05
Просмотров: 5954
ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮದ ಬಳಿ ನೂತನ ಇಶಾ ಫೌಂಡೇಷನ್ ನ ಆಶ್ರಮ ಕಾಮಗಾರಿ ನಡೆದಿದೆ. ಚಿಕ್ಕಬಳ್ಳಾಪುರ ನಗರದಿಂದ 7 ಕಿ.ಮೀ. ದೂರದಲ್ಲಿರುವ ಆವಲಗುರ್ಕಿ ಗ್ರಾಮದಲ್ಲಿ ಆಶ್ರಮ ನಿರ್ಮಾಣ ಕಾರ್ಯ ಜೋರಾಗಿದೆ. ಸುಮಾರು 110 ಎಕರೆ ವಿಶಾಲ ಪ್ರದೇಶದಲ್ಲಿ ಆಶ್ರಮ ತಲೆ ಎತ್ತಿದೆ. ಆಶ್ರಮಕ್ಕೆ ಮುಕುಟ ಪ್ರಾಯದಂತೆ 112 ಅಡಿ ಎತ್ತರದ ಆದಿಯೋಗಿ ಮೂರ್ತಿ ನಿರ್ಮಾಣ ಮಾಡಿದ್ದು, ಉದ್ಘಾಟನೆಗೆ ಸನ್ನದ್ಧವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಈಗಾಗಲೇ ವಿವಿಧ ಪ್ರವಾಸಿತಾಣಗಳ ಮೂಲಕ ಖ್ಯಾತಿಯಾಗಿದೆ. ವಿಶ್ವ ಪ್ರಸಿದ್ದ ನಂದಿ ಗಿರಿಧಾಮ ಸೇರಿದಂತೆ ಚಾರಣಿಗರ ಅಚ್ಚುಮೆಚ್ಚಿನ ತಾಣ ಸ್ಕಂದಗಿರಿ, ಚನ್ನಗಿರಿ, ಆವಲಬೆಟ್ಟ, ಕೈವಾರ ಬೆಟ್ಟ ಪ್ರಸಿದ್ದಿಯಾಗಿವೆ. ಇನ್ನು ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ, ಚಿಂತಾಮಣಿಯ ಕೈವಾರ ಕ್ಷೇತ್ರ, ಮುರಗಮಲ್ಲ ದರ್ಗಾ, ಚಿಕ್ಕಬಳ್ಳಾಪುರದ ನಂದಿಯ ಭೋಗನಂದೀಶ್ವರ, ಶ್ರೀನಿವಾಸಸಾಗರ ಜಲಾಶಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿವೆ. ಇನ್ನು ನೂತನ ಇಶಾ ಆಶ್ರಮದಲ್ಲಿ 112 ಅಡಿ ಎತ್ತರದ ಆದಿಯೋಗಿ ಮೂರ್ತಿ ಅನಾವರಣದಿಂದ ಮತ್ತೊಂದು ನೂತನ ಪ್ರವಾಸಿ ತಾಣ ತಲೆ ಎತ್ತಿದಂತಾಗಿದೆ.
ಇಶಾ ಆಶ್ರಮದಲ್ಲಿ 112 ಅಡಿಗಳ ಆದಿಯೋಗಿ ಮೂರ್ತಿ ಉದ್ಘಾಟನೆಗೆ ಸನ್ನದ್ದಾಗಿದೆ. ಇದರಿಂದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ|| ಕೆ. ಸುಧಾಕರ್ ಸೇರಿದಂತೆ ಗಣ್ಯಾತಿಗಣ್ಯರು ಆಶ್ರಮಕ್ಕೆ ಆಗಮಿಸಿ ಜನವರಿ 15ರಂದು ಸಂಜೆ ಆದಿಯೋಗಿ ಮೂರ್ತಿ ಉದ್ಘಾಟನೆ ಮಾಡಲಿದ್ದಾರೆ.
#sadhguru Sannidhi
Sadhguru Sannidhi #bengaluru
Adiyogi at #chikkaballapura
#Naga at #chikkaballapura
Naga at Chikkaballapur, #bengaluru_nodi
Adiyogi at Chikkaballapur, #bengaluru
A day with #adiyogi
Доступные форматы для скачивания:
Скачать видео mp4
-
Информация по загрузке: