SSLC Student Invents Farm Weed Machine In Dharwad | Agriculture Machine | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2021-08-26
Просмотров: 332019
ಆತ ಈಗಷ್ಟೆ ಎಸ್‌ಎಲ್‌ಎಲ್‌ಸಿ ಮುಗಿಸಿದ ಬಾಲಕ. ಕೊರೊನಾ ಸಮಯದಲ್ಲಿ ಅಪ್ಪನಿಗೆ ಕೃಷಿ ಚಟುವಟಿಕೆಯಲ್ಲಿ ನೆರವಾಗಲು ಮುಂದಾದವ. ಆದರೆ ಕೃಷಿ ಕೆಲಸಕ್ಕೆ ನೆರವಾಗಲೆಂದು ಕಳೆ ಯಂತ್ರ ಆವಿಷ್ಕರಿಸಿ ಎಲ್ಲರ ಗಮನ ಸೆಳೆದ ಪೋರ.ಹೌದು, ಧಾರವಾಡದ ನವಲೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈಗಷ್ಟೆ ಎಸ್ಎಸ್ಎಲ್‌ಸಿ ಮುಗಿಸಿದ ಬಸವರಾಜ ಜಾಪಣ್ಣವರ ಎಂಬ ಬಾಲಕ, ಕೃಷಿ ಕಳೆ ಯಂತ್ರ ಆವಿಷ್ಕರಿಸಿ ಗಮನ ಸೆಳೆದಿದ್ದಾನೆ.ಮೊದಲಿನಿಂದಲೂ ಯಂತ್ರಗಳನ್ನು ಆವಿಷ್ಕಾರ ಮಾಡುವ ಬಸವರಾಜ ಜಾಪಣ್ಣವರನ ಪ್ರತಿಭೆ ಗುರುತಿಸಿದ ಶಿಕ್ಷಕರು ,ಇನ್ಸ್ಪೈರ್ ಅವಾರ್ಡಗೆ ಈತನ ಹೆಸರನ್ನು ಸೂಚಿಸಿದ್ದರು. ಅದರಿಂದ ಬಂದ ಪ್ರೋತ್ಸಾಹಧನದಿಂದಲೇ ಬಸವರಾಜ ಈಗ ಕಳೆ ಯಂತ್ರ ಆವಿಷ್ಕರಿಸಿದ್ದಾನೆ.ಅಲ್ಯೂಮಿನಿಯಂ ಪೈಪ್, ಸೋಲಾರ್ ಪ್ಯಾನಲ್, ಸೈಕಲ್ ರಿಮ್, ಬ್ಯಾಟರಿ ಬಳಸಿ ಬಸವರಾಜ ಕಳೆ ಯಂತ್ರ ತಯಾರಿಸಿದ್ದಾನೆ. ಈ ಯಂತ್ರ ತುಂಬಾ ಚಿಕ್ಕದಾಗಿರುವದರಿಂದ ಬೆಳೆಗೆ ಯಾವುದೇ ತೊಂದರೆಯಾಗುವದಿಲ್ಲ. ಸೋಲರ್ ಮೂಲಕ ಬ್ಯಾಟರಿ ಚಾರ್ಜ್ ಆಗಿ ಮೊಟರ್ ತಿರುಗುತ್ತದೆ. ಯಂತ್ರಕ್ಕೆ ಅಳವಡಿಸಿರುವ ಬ್ಲೆಡ್‌ಗಳು ಕಳೆಯನ್ನು ಕತ್ತರಿಸುತ್ತವೆ ಎಂದು ಬಾಲಕ ವಿವರಿಸುತ್ತಾರೆ. ತಮ್ಮ ಪುತ್ರನ ಸಾಧನೆಗೆ ಪೋಷಕರು ಭಾವುಕರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
#Dharwad #FarmWeedMachineInvention #SSLCBoy
Our Website : https://Vijaykarnataka.com
Facebook: / vijaykarnataka
Twitter: / vijaykarnataka
Доступные форматы для скачивания:
Скачать видео mp4
-
Информация по загрузке: