ಲ್ಯಾಂಬೆತ್ ಬಸವೇಶ್ವರ ಲಂಡನ್ ನಲ್ಲೂ ನನಸಾದ ಕನಸು
Автор: ವಿಜಯಪುರ ಸುಜ್ಞಾನಪ್ರಿಯ
Загружено: 2025-11-21
Просмотров: 291
ಲಂಡನ್ ನಲ್ಲಿ ಡಾ ನೀರಜ್ ಪಾಟೀಲ್
ಲಂಡನ್ನಿನ ಲ್ಯಾಂಬೆತ್ ನಗರಸಭೆ ಮಾಜಿ ಮೇಯರ್ ಶ್ರೀ.ಡಾ.ನೀರಜ್ ಪಾಟೀಲ್ ರವರಿಗೆ ಗೌರವ ಹಾಗೂ ಅಭಿಮಾನ ಪೂರ್ವಕವಾಗಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಕಾಣಿಕೆ ನೀಡಿದ ಸ್ವರಚಿತ ಚಿತ್ರಪಟ ನೀಡಿದ ಸವಿಗಳಿಗೆ
ಏಪ್ರಿಲ್ 2023
ನಮೋ ನೀರಜ
""""""""""""""""""""""""""""
ವಿಶ್ವವಂದ್ಯ ಓ ಕಲ್ಯಾಣದ ಬಸವಣ್ಣ
ಇಂಗ್ಲೆಂಡಲಿ ಕಂಡು ಧನ್ಯವಾದೆವಣ್ಣ
ಕರ್ನಾಟಕದಿ ವೈಚಾರಿಕತೆ ಮೂಡಿಸಿ
ವಚನಸಾಹಿತ್ಯದ ರೂವಾರಿಯಾದೆ |
ಕಾಯಕ ದಾಸೋಹತತ್ವವ ಸಾರುತ
ಶರಣತತ್ವದ ಮಹಿಮೆ ಜಗಕರುಹಿದೆ
ಏಕದೇವೋಪಾಸನೆ ಪ್ರತಿಪಾದಿಸುತ
ಇಷ್ಟಲಿಂಗಾಚರಣೆಯ ಪರಿಕಲ್ಪಿಸಿದೆ |
ಕಾಯಕಮಹತ್ವ ಜಗಕೆ ಭೋಧಿಸುತ
ಜಾತಿ ವಿಜಾತಿಭಾವ ದೂರೀಕರಿಸಿದೆ
ಗಂಡು ಹೆಣ್ಣುಗಳ ತರತಮ ನೀಗುತ
ಮಹಿಳಾ ಸಬಲೀಕರಣ ದನಿಯಾದೆ |
ಸರ್ವಸಮನ್ವಯವ ಸಾಕ್ಷೀಕರಿಸುತ
ಅನುಭವ ಮಂಟಪ ನಿರೂಪಕನಾದೆ
ವಿಶ್ವಪರಿಕಲ್ಪನೆಯ ಜನರಲಿ ಮೂಡಿಸಿ
ಬಾಂಧವ್ಯ ಬೆಸೆಯುವ ಹರಿಕಾರನಾದೆ |
ಸೋದರತೆ ಹರಡುವ ಪ್ರತಿದ್ವನಿಯಾಗಿ
ಥೇಮ್ಸ್ ನದಿದಂಡೆದಲಿ ವಿರಾಜನಾದೆ
ನಮೋ ಲ್ಯಾಂಬೆತ್ ಕನ್ನಡಮನಗಳಿಗೆ
ನಮೋ ಭಾರತಾಂಬೆಯ ಸತ್ಪುತ್ರರಿಗೆ|
ವಿಶ್ವಜ್ಯೋತಿಯ ವಿದೇಶದಿ ಬೆಳಗಿಸಿದ
ಬಸವಫೌಡೇಷನ್ ಕಾರ್ಯಕೆ ವಂದನೆ
ನಮೋ ಸುಜ್ಞಾನಪ್ರಿಯ ಉತ್ತರಕನ್ನಡದ
ನೀರಜಪಾಟೀಲಗೆ ಪ್ರೀತಿಯಭಿನಂದನೆ|
"ಸುಜ್ಞಾನ ಪ್ರಿಯ"
✍️. ಮ.ಸುರೇಶ್ ಬಾಬು
ವಿಜಯಪುರ (ಬೆಂ.ಗ್ರಾ)
Доступные форматы для скачивания:
Скачать видео mp4
-
Информация по загрузке: