ವಿಶ್ವಗುರು ಬಸವಣ್ಣನವರ ಪರಿಚಯ.
Автор: Showing nature.
Загружено: 2025-04-29
Просмотров: 24
ಓಂ ಶ್ರೀ ಗುರುಬಸವ ಲಿಂಗಾಯ ನಮಃ. ವಿಶ್ವಗುರು ಬಸವಣ್ಣನವರ ಪರಿಚಯ ಈ ಕೆಳಗಿನ ವಿಡಿಯೋ ಂದರಲ್ಲಿ ಮೂಡಿಬಂದಿದೆ ಮತ್ತು ಬಸವಣ್ಣನವರು ಸಮಾಜಕ್ಕೆ ನೀಡಿದ ಕೊಡುಗೆ ನನಗೆ ತಿಳಿದ ಮಟ್ಟಿಗೆ ನಾನು ಈ ಕೆಳಗೆ ವಿವರಿಸಿದ್ದೇನೆ. ಬಸವಣ್ಣನವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಅದರಲ್ಲಿ ಪ್ರಮುಖವಾಗಿ .. ಮಹಿಳಾ ಸ್ವಾತಂತ್ರ್ಯ ಯಾವ ಮಹಿಳೆಯ ನಾಲ್ಕು ಗೋಡೆ ದಾಟಿ ಮನೆಯಿಂದ ಹೊರಗೆ ಬರಬಾರದು ಎಂಬ ಕಟ್ಟುಪಾಡುಗಳು ಇದ್ದ ಸಂದರ್ಭದಲ್ಲಿ ಗುರು ಬಸವಣ್ಣನವರು ಕ್ರಾಂತಿಕಾರಿಯಾಗಿ ಸಮಾಜದಲ್ಲಿ ಒಂದು ಬದಲಾವಣೆಯನ್ನು ತಂದರು ಹಾಗೂ ಹಲವಾರು ಎಲೆಮರೆಯ ಕಾಯಿಯಂತಿದ್ದ ಶಿವಶರಣರನ್ನು ಅನುಭವ ಮಂಟಪ ಎಂಬ ಪರಿಕಲ್ಪನೆಯ ಮೂಲಕ ತಮ್ಮ ಜೀವನದ ಅನುಭವಗಳನ್ನು ವಚನಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಾಯಿತು ಮತ್ತು ಶೋಷಣೆಯ ವಿರುದ್ಧ ಧ್ವನಿಯೆತ್ತಿದ ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರು ಜಾತಿ-ಜಾತಿಗಳ ನಡುವೆ ಶೋಷಣೆಯನ್ನು ಬೇರು ಸಮೇತ ಕಿತ್ತು ಸಮಾಜವನ್ನು ಸಮಾನತೆಯ ಕಡೆಗೆ ಕೊಂಡೊಯ್ದ ಸಮಾಜ ಸುಧಾರಕರು ಗುರುಬಸವಣ್ಣನವರು. ಸಮಾಜದಲ್ಲಿ ನಡೆಯುತ್ತಿದ್ದ ಮೌಡ್ಯಗಳನ್ನು ವಿರೋಧಿಸಿದರು ಮತ್ತು ಕಾಯಕ ಪರಿಕಲ್ಪನೆಯನ್ನು ಜಾರಿಗೆ ತಂದರು. ದೇವರ ಹೆಸರಿನ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ಕಂಡು ಗುರು ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ಕೊಟ್ಟರು ಮತ್ತು ದುಡಿದು ತಿನ್ನುವ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು ಇನ್ನು ಆದಾಯದಲ್ಲಿ ಹೆಚ್ಚಾದರೆ ಸಮಾಜಕ್ಕೆ ದಾಸೋಹದ ಮೂಲಕ ವಿನಿಯೋಗಿಸಬೇಕು ಎಂಬ ಮಹಾ ಮಾನವತವಾದಿ ಗುರು ಬಸವಣ್ಣನವರ ಪರಿಕಲ್ಪನೆಯಾಗಿತ್ತು ವಿಶ್ವಗುರು ಬಸವಣ್ಣನವರು ರಚಿಸಿದ ವಚನಗಳ ಪ್ರಕಾರ ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸುವುದಾಗಿದೆ . ಶರಣು ಶರಣಾರ್ಥಿಗಳು.
Доступные форматы для скачивания:
Скачать видео mp4
-
Информация по загрузке: