How to Close Bank Account : ಬ್ಯಾಂಕ್ ಖಾತೆ ಕ್ಲೋಸ್ ಮಾಡುವುದು ಹೇಗೆ? | Economic Times Kannada
Автор: ET Kannada
Загружено: 2023-04-27
Просмотров: 69668
ನಿಮಗೆ ಅಗತ್ಯವಿರುವಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಒಳ್ಳೆಯದು. ಏಕೆಂದರೆ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಷ್ಟೂ ನಿಮಗೇ ತೊಂದರೆ. ಏಕೆಂದರೆ ಪ್ರತಿಯೊಂದು ಬ್ಯಾಂಕ್ ಖಾತೆಯಲ್ಲೂ ಮಿನಿಮಂ ಬ್ಯಾಲೆನ್ಸ್ ನಿರ್ವಹಿಸಬೇಕಿರುತ್ತದೆ. ಒಂದು ವೇಳೆ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಶುಲ್ಕ ಪಾವತಿಸಬೇಕಿರುತ್ತದೆ. ಇದರ ಬದಲು ಸಕ್ರಿಯವಾಗಿ ಬಳಸದ ಅಥವಾ ಅನಗತ್ಯ ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಾಡುವುದೇ ಸೂಕ್ತ. ನೀವು ಕೂಡ ಇಂತಹ ಅನಗತ್ಯ ಬ್ಯಾಂಕ್ ಖಾತೆ ಹೊಂದಿದ್ದರೆ, ಕೂಡಲೇ ಕ್ಲೋಸ್ ಮಾಡಬಹುದು. ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.
ನಿಮ್ಮ ಬ್ಯಾಂಕ್ ಖಾತೆಯನ್ನು ಮುಚ್ಚಲು ನೀವು ಅನುಸರಿಸಬಹುದಾದ ಕೆಲವು ಹಂತಗಳು ಇಲ್ಲಿವೆ. ಆದರೆ, ನಿಮ್ಮ ಬ್ಯಾಂಕ್ ಖಾತೆ ಕ್ಲೋಸ್ ಮಾಡುವ ಪ್ರಕ್ರಿಯೆ ಆರಂಭಿಸುವ ಮೊದಲು ನಿಮ್ಮ ಖಾತೆಯನ್ನು ಯಾವುದೇ ಯುಪಿಐ ಪಾವತಿ ವೇದಿಕೆಗಳಿಂದ ಅಥವಾ Paytm, Uber, Swiggy ಮುಂತಾದ ಸೇವಾ ಅಪ್ಲಿಕೇಶನ್‌ಗಳಿಂದ ಡಿಲಿಂಕ್ ಮಾಡಲು ಮರೆಯಬೇಡಿ.
ಕೆಲವು ಬ್ಯಾಂಕ್‌ಗಳು ಖಾತೆಯನ್ನು ಮುಚ್ಚಲು ಶುಲ್ಕ ವಿಧಿಸುತ್ತವೆ. ಉದಾಹರಣೆಗೆ, SBI ಬ್ಯಾಂಕ್ ಖಾತೆಯನ್ನು ತೆರೆದ 14 ದಿನದೊಳಗೆ ಕ್ಲೋಸ್ ಮಾಡಿದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ. 14 ದಿನಗಳ ನಂತರ ಆದರೆ 1 ವರ್ಷದ ಮೊದಲು SBI ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿದರೆ ಇಂತಿಷ್ಟು ಪ್ರಮಾಣದ ಶುಲ್ಕ ಪಾವತಿಸಬೇಕಿದೆ.
Too many bank account can be a trouble for you. Because you have to maintain minimum balance requirements on each of them. So it is advisable to close bank accounts that are not used actively. If you among them who have an unwanted bank account then you should close it. Do you know how to close a bank account? Here are some steps which you can follow to close your bank account.
#bankaccount #bank #account
Our Website : https://kannada.economictimes.com/
Facebook: / etkannada
Twitter: / etkannada
Доступные форматы для скачивания:
Скачать видео mp4
-
Информация по загрузке: