ಸ್ಥಳೀಯ ಪೂರ್ಣಿಮಾ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರಾಯಚೂರಿನಲ್ಲಿ
Автор: @gKarnataka Power tv
Загружено: 2025-11-15
Просмотров: 143
gkarnataka power tv//15//11//2025//#@
ಸ್ಥಳೀಯ ಪೂರ್ಣಿಮಾ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರಾಯಚೂರಿನಲ್ಲಿ ದಿನಾಂಕ 11 / 11/.2025 ರಂದು 2025 ಮತ್ತು 26 ನೇ ಸಾಲಿನ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಜರುಗಿತು . ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಾಯಿ ಮಂದಿರದ ಧರ್ಮಾಧಿಕಾರಿ ಶ್ರೀ ಸಾಯಿಕಿರಣ ಅಧೋನಿ ಗುರೂಜಿ ಪುರಾತನ ಶಾಸ್ತ್ರವಾದ ಆಯುರ್ವೇದವು.ನಮ್ಮ ಸಂಸ್ಕೃತಿ. ಆಯುರ್ವೇದದಿಂದ ಶಾರೀರಿಕ ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಹುದು ಆಧುನಿಕ ತಂತ್ರಜ್ಞಾನ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಲು ಇದೊಂದು ಸಾಧನ. ತಾವುಸುಸಂಸ್ಕೃತರಾಗಿ ಹೆತ್ತವರಿಗೂ ಹೊತ್ತವರಿಗೂ ಕೀರ್ತಿತರುವ ಕೆಲಸವನ್ನು ತಾವುಗಳು ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸಂತೋಷ್. ಎನ್.ಬೆಳವಡಿ ಪ್ರಾಚಾರ್ಯರು ಆಯುರ್ವೇದ ಮಹಾವಿದ್ಯಾಲಯ ಗದಗ ಇವರು ಮಾತನಾಡಿ. ಈ ಪ್ರವೇಶ ಪಡೆದ ವಿದ್ಯಾರ್ಥಿಗಳು ಶಿಸ್ತು ಮತ್ತು ಆಸಕ್ತಿಯಿಂದ ಅಧ್ಯಯನ ನಿರತರಾದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆಯುರ್ವೇದ ಕಠಿಣ ವೈದ್ಯಕೀಯ ವಿಜ್ಞಾನವಾದರೂ ಇಂದಿನ ದಿನಮಾನದಲ್ಲಿ ಅದರ ಅವಶ್ಯಕತೆ ಅತ್ಯಗತ್ಯವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷರಾದ ಎಸ್ ಎಲ್ ಕೇಶವ ರೆಡ್ಡಿ ಮಾತನಾಡಿ ಈ ಒಂದು ಸಂಸ್ಥೆಯು ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಇದರ ಪ್ರಯೋಜನವನ್ನು ಪಡೆದು ಉತ್ತಮ ವೈದ್ಯರಾಗಿ ಸಂಸ್ಥೆಯ ಹೆಸರನ್ನು ತರುವುದರ ಜೊತೆಗೆ ಸಮಾಜದಲ್ಲಿ ಉತ್ತಮ ವೈದ್ಯರಾಗಿ ಸೇವೆ ಸಲ್ಲಿಸಿರಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕರಾದ ಡಾ. ದಂಡಪ್ಪ ಬಿರಾದಾರ್ ಮಾತನಾಡುತ್ತಾ ಆಯುರ್ವೇದ ಚಿಕಿತ್ಸೆಯು ಇಂದಿನ ದಿನಗಳಲ್ಲಿ ಅತ್ಯಾವಶ್ಯಕವಾಗಿದ್ದು. ರಾಮಾಯಣ ಮಹಾಭಾರತ ಕಾಲದಲ್ಲಿ ಸಹ ಆಯುರ್ವೇದಿಕ್ ಪದ್ಧತಿಯ ಚಿಕಿತ್ಸಾ ಕ್ರಮ ನಡೆಯುತ್ತಿತ್ತು ಯೋಗಾಸನ ಆಯುರ್ವೇದದೊಂದು ಭಾಗ ಜಗತ್ತಿನ 200 ರಾಷ್ಟ್ರಗಳಲ್ಲಿ ಇವತ್ತು ಯೋಗ ಕಾರ್ಯಕ್ರಮ ನಡೆಯುತ್ತಿರುವುದು ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಪೂರ್ಣಿಮಾ ಮಹಾವಿದ್ಯಾಲಯವು ಮತ್ತುಈ ಸಂಸ್ಥೆಯು ಈ ಭಾಗದಲ್ಲಿ ಜನರಿಗೆ ಆಯುರ್ವೇದದ ಕಲ್ಪವೃಕ್ಷವಾಗಿದೆ ಎಂದು ಡಾ. ಬಿರಾದಾರ ಹೇಳಿದರು. ಮಾತನಾಡಿ ವೈದ್ಯ ವೃತ್ತಿ ಒಂದು ಸೇವಾ ವೃತ್ತಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಕೇವಲ ಪಠ್ಯ ವಿಷಯವೆಂದರೆ ಅದನ್ನು ಜೀವನಪೂರ್ತಿ ಸೇವಾಧ್ಯೆಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು
ಡಾ ಸಿ ಎಸ್ ಕರಮುಡಿ ಪ್ರಾಚಾರ್ಯರು ಮಾತನಾಡಿ ಈ ಭಾಗದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳುಳ್ಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದಾಗಿದೆ ಇಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಶಿಕ್ಷಕರು ನುರಿತ ಮತ್ತು ಅನುಭವಿಗಳಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕೆಂದು ಹೇಳಿದರು ಡಾ. ಪೂರ್ಣಿಮಾ ಅವರು ಮಾತನಾಡಿ ಹಲೊ ಪತಿ ಅಥವಾ ಆಯುರ್ವೇದ ವೈದ್ಯ ಪದ್ಧತಿ ಎನ್ನದೆ. ಆಳವಾಗಿ ಅಧ್ಯಯನ ಮಾಡಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ನಾಗವೇಣಿ ಎಸ್ ಪಾಟೀಲ್ ಕಾಂಗ್ರೆಸ್ ಮುಖಂಡರು ಹಾಗೂ ವೀರೇಂದ್ರ ಜಲ್ದಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಾ. ಉಮಾ ಯಾಳಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಶಿವಕುಮಾರ್. ಡಾ. ಮಮತಾ ಡಾ. ಸೌಮ್ಯ ಕೆ. ಉಪಸ್ಥಿತರಿದ್ದರು ಡಾ. ಕೀರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು ಡಾ. ಸುಪ್ರೀತಾ ಸ್ವಾಗತಿಸಿದರು. ನೀಡಿದರು ಡಾ. ನಂದ ವಂದನಾರ್ಪಣೆಯನ್ನು ಸಲ್ಲಿಸಿದರು.
@gkarnatakapowertv
@TV5Kannada
@NewsFirstKannada
@tv9kannada
Доступные форматы для скачивания:
Скачать видео mp4
-
Информация по загрузке: