Mahendra Kumar | Nammadhwani
Автор: Namma Dhwani
Загружено: 2024-12-02
Просмотров: 559
ಮಲೆನಾಡ ಮಡಿಲು ಮಹೇಂದ್ರ ಅವರ ಹುಟ್ಟೂರಾದ ಕೊಪ್ಪದಲ್ಲಿ ನಮ್ಮಧ್ವನಿ ಸಂಸ್ಥಾಪಕ ಮಹೇಂದ್ರ ಕುಮಾರ್ ಅವರ ಆತ್ಮಕಥೆಯ ಎರಡನೇ ಆವೃತ್ತಿ ಯಶಸ್ವಿಯಾಗಿ ಬಿಡುಗಡೆಗೊಳಿಸಲಾಯಿತು. ತನ್ನೂರಿನ ಮಗನ ಬದಲಾವಣೆಯ ಕಥೆ ಕೇಳಲು ಕಾರ್ಯಕ್ರಮದ ಸಭಾಂಗಣದಲ್ಲಿ ಕೊಪ್ಪದ ಜನರು ತುಂಬಿ ತುಳಿಕಿದ್ದರೇ ನಮ್ಮಧ್ವನಿ ತಂಡದ ಅಹ್ವಾನಕ್ಕೆ ಓಗೊಟ್ಟು ನೆರೆದಿದ್ದ ಪರಊರಿನ ಜನರನ್ನು ನೋಡಿದಾಗ ಮಹೇಂದ್ರ ಕುಮಾರ್ ಮೇಲಿನ ಜನರ ಅಭಿಮಾನಕ್ಕೂ ನಿಜಕ್ಕೂ ಅಚ್ಚರಿ ಹುಟ್ಟುವಂತಿತ್ತು.
ನವೀನ್ ಸೂರಿಂಜೆ ಬರೆದ ನಡುಬಗ್ಗಿಸದ ಎದೆಯ ದನಿ ಎಂಬುದು ಮಹೇಂದ್ರ ಕುಮಾರ್ ಆತ್ಮಕಥೆಯಾದರೇ ಅದರ ಜೊತೆಗೆ ಮಲೆನಾಡಿನ ಪಕ್ಕದ ಎಂಜಿ ಹೆಗಡೆಯವರ ಚಿಮಣಿಯ ಬೆಳಕಿನಲ್ಲಿ ಕೂಡ ಇದೇ ಸಂಧರ್ಭದಲ್ಲಿ ಬಿಡುಗಡೆಯಾಗಿದ್ದು ವಿಶೇಷ.
ಹಿರಿಯ ಸಾಮಾಜಿಕ ಮುಖಂಡರಾದ ಹೆಚ್ ಟಿ ರಾಜೇಂದ್ರ ಮಡಬೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಶೃಂಗೇರಿ ಕ್ಷೇತ್ರದ ಶಾಸಕರಾದ ರಾಜೇಗೌಡರು,ಲೇಖಕರಾದ ನವೀನ್ ಸೂರಿಂಜೆ, ಎಂಜಿ ಹೆಗಡೆ ಪ್ರಕಾಶಕರಾದ ಬ ಸೂ ಸೂಳೀಬಾವಿ, ಅಕ್ಷತ ಹುಂಚದ ಕಟ್ಟೆ ನಮ್ಮ ಧ್ವನಿ ಕೇಂದ್ರ ಸಮಿತಿಯ ಮಹೇಶ್ ನಾಯಕ್ ,ಅಬ್ಬಾಸ್ ಕಿಗ್ಗ , ಬೆಂಗಳೂರು ನಗರ ಸಂಚಾಲಕರಾದ ರಾಜೇಶ್ ಗೌಡ, ನಮ್ಮಧ್ವನಿ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಸಂತೋಷ್ ಕಾಳ್ಯ, ನಮ್ಮಧ್ವನಿ ಮಂಗಳೂರು ನಗರ ಸಂಚಾಲಕರಾದ ಜಗದೀಶ್ ಕೊಯ್ಲಾ,ಚಿಕ್ಕಮಗಳೂರು ಜಿಲ್ಲಾ ಯುವ ಸಂಚಾಲಕ ಸಚಿನ್ ಎತ್ತಿನ ಮನೆ , ಶೃಂಗೇರಿ ತಾಲ್ಲೂಕು ಸಂಚಾಲಕ ಉದಯ ಮೆಣಸೆ, ಎನ್ ಅರ್ ಪುರ ತಾಲೂಕು ಸಂಚಾಲಕ ಅಭಿಲಾಷ್ ಕಣಗರೆ ,ಕೊಪ್ಪ ತಾಲೂಕು ಸಂಚಾಲಕ ಮಂಜುನಾಥ ಕೊಪ್ಪ ವೇದಿಕೆಯಲ್ಲಿದ್ದರು.
ಅಬ್ಬಾಸ್ ಕಿಗ್ಗ ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿದರೇ , ನಯನ ಎ ಎಸ್ ಶೃಂಗೇರಿ ಇವರು ಅತಿಥಿಗಳನ್ನು ಸ್ವಾಗತಿಸಿದರು, ಸಂತೋಷ್ ಕಾಳ್ಯ ವಂದನಾರ್ಪಣೆ ಮಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು ಅನಿಲ್ ಹೊಸಕೊಪ್ಪ ಮತ್ತು ರಜಿತ್ ಹೊಟ್ಣಕೂಡಿಗೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ನೆರೆದವರ ಮನಗೆದ್ದಿದ್ದು ನಿಸಾರ್ ನಾರ್ವೆ ,ಪ್ರಸನ್ನ ಶೆಟ್ಟಿ ಕೊಪ್ಪ, ಸಂದೇಶಕೊಪ್ಪ ರಾಶೀಕ್ ಕೊಪ್ಪ ಮತ್ತು ಸಂತೋಷ್ ಡಿ ಕೊಪ್ಪ ಮತ್ತು ನಮ್ಮಧ್ವನಿ ತಂಡದ ಸದಸ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಚ್ಚುಕಟ್ಟಾದ ವ್ಯವಸ್ಥೆಗಳು ಜೊತೆಗೆ ಬಿಸಿ ಬಿಸಿ ಗರಿ ದೋಸೆ , ಬಾಯಲ್ಲಿ ನಿರೂರಿಸಿದ ಸಿಹಿ ತಿಂಡಿಯ ರುಚಿ ನೆರೆದವರ ನಾಲಗೆಯನ್ನು ಗೆದ್ದಿತು.
ಕೊಪ್ಪ ಹೇಳಿ ಕೇಳಿ ರಾಜ್ಯದ ವಾಗ್ಮೀ , ವಕೀಲ ಮತ್ತು ನಮ್ಮಧ್ವನಿಯ ಕಾನೂನು ಸಲಹೆಗಾರ ಸುಧೀರ್ ಕುಮಾರ್ ಅವರ ತವರೂರು, ಅವರ ದೈಹಿಕ ಮತ್ತು ಮಾನಸಿಕವಾದ ನಿಖರವಾದ ಯೋಜನೆ ಮತ್ತು ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಸಿದ್ದಸೂತ್ರ ಅಂದರೆ ಸುಳ್ಳಲ್ಲ.
ನಮ್ಮಧ್ವನಿ ತಂಡ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ವಂದನೆಗಳನ್ನು ಅರ್ಪಿಸುತ್ತದೆ.
ಯಶಸ್ವಿ ಕಾರ್ಯಕ್ರಮದ ತುಣುಕುಗಳನ್ನು ನಮ್ಮಧ್ವನಿ ನಿಮಗಾಗಿ ಅರ್ಪಿಸುತ್ತಿದೆ.
Доступные форматы для скачивания:
Скачать видео mp4
-
Информация по загрузке: