Surya Sri Sadashiva Rudra Temple Ujire, Historical place
Автор: Chandrasutha ಚಂದ್ರಸುತ
Загружено: 2025-08-13
Просмотров: 3221
Don't forgot to subcribe,share,like,comment
Location:https://maps.app.goo.gl/nSjpyMRqPEjXr...
ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ - ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ, ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ.
ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ಇವ್ಯಾವುದೂ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು/ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಬಹುಶಃ ಅತ್ಯಂತ ದೀನ-ದುರ್ಬಲರಿಗೂ ಸುಲಭಸಾಧ್ಯ ಸರಳ ಹರಕೆ ಪದ್ಧತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಆರಂಭವಾಯ್ತ ಏನೋ? ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ದಿರಬಹುದು.
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087
• ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದ...
Доступные форматы для скачивания:
Скачать видео mp4
-
Информация по загрузке: