ಹನುಮಂತ ದೇವ ನಮೋ | Gayaki H V Shruthi | Hanumanta deva namo
Автор: Rayarakrupa
Загружено: 2026-01-24
Просмотров: 32
Dasa dare song with lyrics in kannada
ಹನುಮಂತ ದೇವ ನಮೋ /Hanumanta deva namo
ಹನುಮಂತ ದೇವ ನಮೋ ||ಪ||
ವನಧಿಯನು ದಾಟಿ ದಾನವರ ದಂಡಿಸಿದ ||ಅ.ಪ||
ರಾಮ ಲಕ್ಷ್ಮಣರ ಕಟ್ಟಾಳಾಗಿ ನೀ ನಡೆದೆ
ಭೂಮಿಜೆಗೆ ಮುದ್ರೆಯುಂಗುರವನಿತ್ತೆ
ಆ ಮಹಾ ಲಂಕೆನಗರವೆಲ್ಲವನು ನೀ
ಧೂಮಧಾಮವ ಮಾಡಿ ಮೆರೆದೆ ಮಹಾತ್ಮ
ಶ್ರೀಮದಾಚಾರ್ಯರ ಪುರಪತಿಯೆಂದೆನಿಪ
ಶ್ರೀ ಮಹಾಲಕುಮಿ ನಾರಾಯಣ ರೂಪ
ಶ್ರೀ ಮನೋಹರ ಪುರಂದರ ವಿಠಲನವಸರಾ-
ಪ್ರೇಮದಾಳು ಹನುಮಂತ ಬಲವಂತ ||
Доступные форматы для скачивания:
Скачать видео mp4
-
Информация по загрузке: