DEVI APARAADHA KSHMAAPANA STHOTRA( ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ)| ಶ್ರೀಮದ್ ಶಂಕರಾಚಾರ್ಯರು|ದ ರಾ ಬೇಂದ್ರೆ
Автор: Raghavendra Beejadi
Загружено: 2024-02-23
Просмотров: 186407
ಸಾಹಿತ್ಯ:- ಮೂಲ ರಚನೆ ಸಂಸ್ಕೃತ ಶ್ರೀಮದ್ ಶಂಕರಾಚಾರ್ಯರು
ಕನ್ನಡ ಭಾವಾನುವಾದ :- ದ ರಾ ಬೇಂದ್ರೆ
ಸಂಯೋಜನೆ ಹಾಗೂ ಗಾಯನ :- ರಾಘವೇಂದ್ರ ಬೀಜಾಡಿ
ಕೀಬೋರ್ಡ್ :- ದುಷ್ಯಂತ್
ರಿದಂಪ್ಯಾಡ್ :- ವೈಷ್ಣವ್
ಸೌಂಡ್ ಎಂಜಿನಿಯರ್:- ನಾಗರಾಜ್
ಅರವಿಂದ್ ಸ್ಟುಡಿಯೋ
#shankracharya #devotionalsongs #raghavendrabeejadi #himalayas
video credits. we use copy right free videos .. our humble pranmas to all the video makers
• Happy Durga Puja, Navratri Motion Graphics...
• Maa Bhavani Video Background||Maa Durga Po...
• Durga maa navratri fire animated backgroun...
• काली माँ - Kali Mata - Kalka Maiya (No Cop...
• Free Copyright Video BG | Background Mata ...
• Durga Background Video | Durga Background ...
• God Durga Devi Animated Face in green scre...
ಸಾಹಿತ್ಯ
ದೇವೀ ಅಪರಾಧಕ್ಷಮಾಪಣ ಸ್ತೋತ್ರ
ಮಂತ್ರವರಿಯೆ, ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।
ಆಹ್ವಾನವರಿಯೆ, ನಾ ಧ್ಯಾನವರಿಯೆ, ನಾನರಿಯೆ ಶ್ರುತಿಯ ಕಥೆಯಾ।।
ಮುದ್ರೆಗಿದ್ರೆಗಳ ಅರಿಯೆ ನಾನು, ಕೂಸಾಗಿ ತೆರೆವೆ ಬಾಯಿ!
ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ!||
1
ಗೊತ್ತಿಲ್ಲ ವಿಧಿಯು, ಮೈಗಳ್ಳ ನಾನು, ಕೈಯ್ಯಲ್ಲಿ ಕಾಸು ఇల్ల,
ನಡೆಯಲಾರೆ ಒಳಗಾಗಿ, ಚರಣ ಕೈಬಿಟ್ಟು ಜಾರಿತಲ್ಲ! ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ!
ಹುಟ್ಟಬಹುದಲಾ ಕೆಟ್ಟಮಗುವು ; ಇರಲಾಸ ಕೆಟ್ಟ ತಾಯಿ!||
2
ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |ವಿರಲ-ತರಲ, ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ ಬಿಡಬೇಡ ಕೈಯ, ಅದು ತಕ್ಕುದಲ್ಲ ಕೇಳವ್ವ ಶಿವನ ಜಾಯೆ।
ಕೆಟ್ಟ ಮಗುವು ಹೋ! ಹುಟ್ಟಬಹುದು : ಇರಬಹುದೆ ಕೆಟ್ಟ ತಾಯಿ?"||
3
ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ । ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ!
ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ, ಇವಳೆ, ತಾಯೆ?॥
4
ಎಷ್ಟಂತ ಪೂಜೆ, ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ!
ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ!
ಓ ತಾಯಿ ನಿನ್ನ ಕೃಪೆ ಸಾಕು, ಉಳಿದವರು ಹಿಡಿಯಲೆನ್ನ ಬಿಡಲಿ!
ಆಧಾರವಿರದೆ, ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ!||
5
ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ! ಬಾಯಿಬಡಕ ನಾಯಡಗಂಬ ಜನವಾಣಿ ಅಮೃತಧಾಮ
ರಂಕ ಕೂಡ ಆತಂಕವಿರದೆ ತಾ ಕೋಟಿ ಕನಕ ಪಡೆವ ಜನನಿ ನಿನ್ನ ಜಪಮಹಿಮೆಯರಿಯದವ ಹೌದು ತೀರ ಬಡವll
6
ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ!
ಜಡೆಯ ಕಟ್ಟಿ, ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ
ತಲೆಯಬುರಡೆ ಕೈಯಲ್ಲಿ, ಭೂತಗಣ ಸುತ್ತಿಕೊಂಡೆ ಇರುವ
ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ||
7
ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ! ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ!!
ಅಂತೆ ನಿನ್ನ ಬೇಡುವೆನು ನಾನು ಆಮರಣ ತಪಿಸುತಿರಲಿ!
ಓ ಭವಾನಿ ರುದ್ರಾಣಿ ಶಿವಶಿವೇ ಎಂದು ಜಪಿಸುತಿರಲಿ!||
8
ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ! ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ!
ಓ ಶ್ಯಾಮೆ ! ನೀನೆ ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ
ಅದು ನಿನಗೆ ಸಹಜ, ಇದು ನನಗೆ ಸಹಜ, ಕರುಣೆಯನೆ ಬೇಡುತಿರುವೆ!!||
9
ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ! ಹೇ ದುರ್ಗೆ ! ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ!!
ಇದು ಢೋಂಗು, ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ।
ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ?॥
10
ಜಗದಂಬೆ, ಬೇರೆ ವೈಚಿತ್ರ್ಯ ಬೇಕೆ? ಕರುಣೆಯಲಿಮಾಡು ಎಲ್ಲ !
ಅಪರಾಧವೆಷ್ಟೆ ಮಾಡಿದರು ಮಗುವು, ತಾಯೇನೂ ಬಿಡುವದಿಲ್ಲ
ಪಾಪಘ್ನಿ ನಿನ್ನ ಸಮರಿಲ್ಲ, ಪಾಪದಲಿ ನನಗೆ ಇಲ್ಲ ಜೋಡು!
ಮಹದೇವಿ! ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು!!
ಶ್ರೀಮದ್ ಶಂಕರಾಚಾರ್ಯರ ಸ್ತೋತ್ರದ ಭಾವಾನುವಾದ.
🖋 ದ ರಾ ಬೇಂದ್ರೆ
• Green Leaves Forest Slow Motion Sony Look ...
Доступные форматы для скачивания:
Скачать видео mp4
-
Информация по загрузке: