⭕️ ರಜತ ಗಾನಸುರಭಿ - ಸಮ್ಮಾನ ಕಾರ್ಯಕ್ರಮ | ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ ಕಟೀಲು | 25ನೇ ವರ್ಷದ ಕಲಾಯಾನ
Загружено: 2025-12-02
Просмотров: 2745
ರಜತ ಗಾನಸುರಭಿ - ಶ್ರೀ ರವಿಚಂದ್ರ ಕನ್ನಡಿಕಟ್ಟೆ ಭಾಗವತರ ಕಲಾಯಾನದ 25ನೇ ವರ್ಷದ ಸಂಭ್ರಮ
ರಜತಯಾನದ ಸಂಭ್ರಮದಲ್ಲಿರುವ ಕನ್ನಡಿಕಟ್ಟೆ ಭಾಗವತರಿಗೆ "ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ, ಕಟೀಲು" ಇವರ ವತಿಯಿಂದ "ಚಿನ್ನದ ಉಂಗುರ, ಶಾಲು, ಪಕಡಿ ಕಿರೀಟ, ಭಾಗವತ ಪೇಟ, ಏಲಕ್ಕಿ ಹಾರ ಹಾಗೂ ಸಮ್ಮಾನಪತ್ರ" ವನ್ನು ನೀಡುವ ಮೂಲಕ ಪ್ರೀತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು.
ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ, ಕಟೀಲು
ದಿನಾಂಕ 01-12-2025 ರಂದು ಕಟೀಲಿನಲ್ಲಿ ಹನುಮಗಿರಿ ಮೇಳದವರಿಂದ ಜರಗಿದ ಯಕ್ಷಗಾನ ಬಯಲಾಟದ ಸಂದರ್ಭ ಸಂಪನ್ನಗೊಂಡ ಸಮ್ಮಾನ ಕಾರ್ಯಕ್ರಮ.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಶ್ರೀ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಶ್ರೀನಿವಾಸ ಆಸ್ರಣ್ಣ, ಶ್ರೀ ಪಶುಪತಿ ಶಾಸ್ತ್ರಿ, ಶ್ರೀ ಹರೀಶ್ ಬಳಂತಿಮುಗರು, ಶ್ರೀ ದೊಡ್ಡಯ್ಯ ಮೂಲ್ಯ ಕಟೀಲು ಇವರು ಕಾರ್ಯಕ್ರಮವನ್ನು ಚಂದಗಾಣಿಸಿದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಶ್ರೀ ಲಕ್ಷ್ಮೀ ಮಚ್ಚಿನರು ಭಾಗವತರ ಅಭಿನಂದನಾ ಭಾಷಣವನ್ನು ಮಾಡಿದರು. ಶ್ರೀ ಹರಿನಾರಾಯಣದಾಸ ಆಸ್ರಣ್ಣರು ಶುಭಾಶೀರ್ವಚನವನ್ನು ನೀಡಿದರು. ರಾಜೇಂದ್ರಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ರಂಜನ್ ಹೊಳ್ಳ ಸುರತ್ಕಲ್ ಇವರು ಸಮ್ಮಾನ ಪತ್ರವನ್ನು ವಾಚಿಸಿದರು.
ಶ್ರೀ ಚಿನ್ಮಯ ಭಟ್ ಕಲ್ಲಡ್ಕ, ಶ್ರೀ ಚೈತನ್ಯಕೃಷ್ಣ ಪದ್ಯಾಣ, ಶ್ರೀ ಶ್ರೀಧರ ವಿಟ್ಲ, ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು ಭಾಗವತರಿಗೆ ಯಕ್ಷಗಾಯನವನ್ನು ಸಮರ್ಪಿಸಿದರು.
ಸುನೀಲ್ ಬಂಗೇರ ಎಕ್ಕಾರು, ಮಿಥುನ್ ಉಡುಪ, ದಿವಾಣ ದುರ್ಗಾಪ್ರಸಾದ್ ಭಟ್, ಭರತೇಶ್ ಶೆಟ್ಟಿ ಎಕ್ಕಾರು, ಪ್ರೇಮನಾಥ ಪೂಜಾರಿ, ರಮಾನಂದ ಕಟೀಲು, ದುರ್ಗಾಪ್ರಸಾದ್ ಕೊಂಡೇಲ, ದುರ್ಗಾಪ್ರಸಾದ್ ಎಕ್ಕಾರು, ದಿನೇಶ್ ಕಟೀಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅನುವುಮಾಡಿಕೊಟ್ಟ ಮೇಳದ ಯಜಮಾನರಾದ ಡಾ. ಟಿ. ಶ್ಯಾಮ್ ಭಟ್ ರಿಗೆ, ಮೇಳದ ಪ್ರಬಂಧಕರಾದ ಶ್ರೀ ಹರೀಶ್ ಭಟ್ ಬಳಂತಿಮುಗರು ಅವರಿಗೆ ಹಾಗೂ ಮೇಳದ ಸರ್ವಕಲಾವಿದರಿಗೆ ಅನಂತ ಧನ್ಯವಾದಗಳು.
ಸ್ಥಳ: ಕಟೀಲು | ದಿನಾಂಕ: 01-12-2025 ಸೋಮವಾರ
ಚಿತ್ರಕೃಪೆ: ಯಕ್ಷಮಾಧವ
#ಯಕ್ಷಗಾನ #ಕನ್ನಡಿಕಟ್ಟೆ #ರವಿಚಂದ್ರಕನ್ನಡಿಕಟ್ಟೆ
Доступные форматы для скачивания:
Скачать видео mp4
-
Информация по загрузке: